ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ತತ್ಕಾಲ್ ಟಿಕೆಟ್ ದರ ದಿಢೀರ್ ಏರಿಕೆ

By Mahesh
|
Google Oneindia Kannada News

ನವದೆಹಲಿ, ಡಿ. 24: ರೈಲಿನ ಕನಿಷ್ಠ ಪ್ರಯಾಣ ದರ ಏರಿಕೆ ಮಾಡಿದ ಬೆನ್ನಲ್ಲೇ ತತ್ಕಾಲ್ ಟಿಕೆಟ್ ದರವನ್ನು ಏರಿಕೆ ಮಾಡಿ ಭಾರತೀಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ನೂತನ ದರ ಪಟ್ಟಿ ಕ್ರಿಸ್ ಮಸ್ ದಿನ(ಡಿಸೆಂಬರ್ 25) ದಿಂದ ಜಾರಿಗೆ ಬರಲಿದೆ.

ಡಿಸೆಂಬರ್​ 25 ರಿಂದ ಜಾರಿಗೊಳ್ಳಲಿರುವ ಪರಿಷ್ಕೃತ ದರದಂತೆ 175 ರು ಇದ್ದ ಸಾಮಾನ್ಯ ಸ್ಲೀಪರ್ ಕ್ಲಾಸ್ ಟಿಕೆಟ್ ದರ ಈಗ 200 ರು ಆಗಲಿದೆ. ಎ.ಸಿ. ತ್ರಿ ಟಯರ್‌ ದರ 350 ರುಇದ್ದದ್ದು ಈಗ 400 ರು. ಗೇರಲಿದೆ. 250 ರು ಇದ್ದ ಕನಿಷ್ಠ ದರ 300 ರು ಗೆ ಹೆಚ್ಚಳವಾಗಿದೆ.[ಕನಿಷ್ಠ ಪ್ರಯಾಣ ದರ ಏರಿಕೆ ಮಾಡಿದ ರೈಲ್ವೆ ಇಲಾಖೆ]

Indian Railways hike Tatkal charges from December 25

ಸ್ಲೀಪರ್‌ ಕ್ಲಾಸ್‌ನ ಕನಿಷ್ಠ ತತ್ಕಾಲ್‌ ದರ 90 ರು ನಿಂದ 100 ರು ಗೆ ಏರಿಕೆಯಾಗಿದೆ. ಕನಿಷ್ಠ ಮತ್ತು ಗರಿಷ್ಠ ದರಗಳು ಪ್ರಯಾಣದ ದೂರದ ಮೇಲೆ ನಿರ್ಧಾರ ವಾಗಲಿವೆ. 2 ಟಯರ್‌ ಎ.ಸಿ. ಕನಿಷ್ಠ ತತ್ಕಾಲ್‌ ದರ 300 ರು ನಿಂದ 400 ರು. ಗೇರಿದೆ.[ರೈಲ್ವೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಪ್ರಮಾಣ ಹೆಚ್ಚಳ!]

ಗರಿಷ್ಠ ದರ ತತ್ಕಾಲ್ ದರ 400 ರು ನಿಂದ 500 ರು.ಗೆ ಏರಿದೆ. ಎಕ್ಸಿಕ್ಯೂಟಿವ್‌ ಕ್ಲಾಸ್‌ಗಳಲ್ಲಿ 300 ರು ನಿಂದ 400 ರು (ಕನಿಷ್ಠ) ಮತ್ತು ಗರಿಷ್ಠ ದಲ್ಲಿ 400 ರು ನಿಂದ 500 ರು ಗೆ ಏರಿಕೆಯಾಗಿದೆ. ಆದರೆ, ಎರಡನೇ ದರ್ಜೆ ತತ್ಕಾಲ್ ಆಸನಗಳ ದರವನ್ನು ಏರಿಕೆ ಮಾಡಿಲ್ಲ. ಇದರ ಕನಿಷ್ಠ 10 ರು ಮತ್ತು ಗರಿಷ್ಠ 15 ರು ನಂತೆ ಜಾರಿಯಲ್ಲಿರಲಿದೆ.(ಪಿಟಿಐ)

English summary
The Railways hiked the Tatkal ticket charges from December 25 with the aim to improve passenger revenue collections. While a passenger has to shell out Rs 200 for the Tatkal booking of Sleeper class instead of Rs 175, for AC-3 the maximum revised charge is Rs 400 instead of Rs 350 earlier and minimum is Rs 300 instead of Rs 250, according to the Railway notification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X