ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೋಷ ಕಂಡುಹಿಡಿದವಗೆ 10 ಲಕ್ಷ ಇನಾಮು ಕೊಟ್ಟ ಫೇಸ್ಬುಕ್

|
Google Oneindia Kannada News

ಬೆಂಗಳೂರು, ಮಾರ್ಚ್, 09: ಸಾಮಾಜಿಕ ತಾಣ ಫೇಸ್ ಬುಕ್ ಸುರಕ್ಷಿತವೇ? ಇಂಥದ್ದೊಂದು ಪ್ರಶ್ನೆಯನ್ನು ಮತ್ತೆ ನಾವು ಕೇಳಿಕೊಳ್ಳಬೇಕಾಗಿದೆ. ಬೆಂಗಳೂರು ಮೂಲದ 22 ವರ್ಷದ ಕಂಪ್ಯೂಟರ್ ಪ್ರೋಗಾಮರ್ ಒಬ್ಬರು ಫೇಸ್ ಬುಕ್ ಬಗ್ ಅಥವಾ ದೋಷವನ್ನು ಕಂಡುಹಿಡಿದು ತಿಳಿಸಿದ್ದಲ್ಲದೇ 10 ಲಕ್ಷ ರು. ಬಹುಮಾನವನ್ನು ತಮ್ಮದಾಗಿರಿಸಕೊಂಡಿದ್ದಾರೆ.

ದೋಷ ಕಂಡುಹಿಡಿದವರಿಗೆ 10 ಲ್ಷ ರು. ನೀಡುತ್ತೇನೆ ಎಂದು ಹೇಳಿದ್ದ ಫೇಸ್ ಬುಕ್ ಸಹ ತನ್ನ ಮಾತನ್ನು ಉಳಿಸಿಕೊಂಡಿದೆ. ಫ್ಲಿಪ್​ಕಾರ್ಟ್ ಸಂಸ್ಥೆಯಲ್ಲಿ ಭದ್ರತಾ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಪ್ರಕಾಶ್ ಫೇಸ್ ಬುಕ್​ನ ಲಾಗ್ ಇನ್ ವೇಳೆ ಇದ್ದ ದೋಷವನ್ನು ಗುರುತಿಸಿದ್ದಾರೆ.[ಫೇಸ್ಬುಕ್, ಟ್ವಿಟ್ಟರ್ನಿಂದ ಡೈವೋರ್ಸ್ ತಗೊಳೋದು ಹೇಗೆ?]

facebook

ಫೇಸ್ ಬುಗ್ ಬಳಕೆದಾರರು ನಮೂದಿಸಿದ ಮಾಹಿತಿ, ಪೋಟೋ, ಡೆಬಿಟ್/ಕ್ರೆಡಿಟ್ ಕಾರ್ಡ್​ನ ಮಾಹಿತಿ ಸೋರಿಕೆ ಆಗುತ್ತಿದ್ದು, ಸುಲಭವಾಗಿ ಹ್ಯಾಕರ್​ಗಳು ಇದರ ಲಾಭ ಪಡೆಯಬಹುದಾಗಿದೆ ಎಂಬುದನ್ನು ವಿವರವಾಗಿ ಬಿಡಿಸಿಟ್ಟಿದ್ದಾರೆ.[ಮಗಳಿಗೆ ಬರೆದ ಪತ್ರದಲ್ಲಿ ಫೇಸ್‌ಬುಕ್ ಜನಕ ಹೇಳಿದ್ದೇನು?]

ಸಣ್ಣದೊಂದು ಸಾಫ್ಟ್ ವೇರ್ ಬಳಸಿ ಮಾಹಿತಿಯನ್ನು ಹೇಗೆ ಕಳ್ಳತನ ಮಾಡಬಹುದು ಎಂಬುದನ್ನು ತಿಳಿಸಿ ಕೊಟ್ಟಿದ್ದೇನೆ. ಕೇವಲ ಫೆಸ್ ಬುಕ್ ಮಾತ್ರವಲ್ಲದೇ ಟ್ವಿಟ್ಟರ್ ಸೇರಿದಂತೆ ಅನೇಕ ಸಾಮಾಜಿಕ ತಾಣಗಳ ದೋಷ ಕಂಡು ಹಿಡಿದು ನೀಡಿದ್ದೇನೆ. ಈ ಮೂಲಕ ಸುಮಾರು 1.2 ಕೋಟಿ ರು. ಹಣ ಸಂಪಾದನೆ ಮಾಡಿದ್ದೇನೆ ಎಂದು ಆನಂದ ಪ್ರಕಾಶ್ ಹೇಳಿದ್ದಾರೆ.

English summary
22 year old Anand Prakash is a genius and he has proved this on foreign grounds. A Bengaluru-based computer programmer has been awarded about Rs 10 lakh by Facebook for reporting a bug through which he could hack into any Facebook account. He could do this by using a relatively simple software. A product security engineer with Flipkart, Prakash wrote in his blogpost that he discovered a small vulnerability that could have been used to hack into user's Facebook account to get access to credit card details, personal pictures and messages without any user interference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X