ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿ ದೊಡ್ಡ ಸಂಸ್ಥೆಗಳ ಪೈಕಿ ಭಾರತದ ಆರ್ಮಿ, ರೈಲ್ವೆ

By Mahesh
|
Google Oneindia Kannada News

ನವದೆಹಲಿ, ಜೂ.29: ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸಂಸ್ಥೆಗಳ ಪೈಕಿ ಭಾರತದ ಎರಡು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸೇರಿವೆ. ಭಾರತೀಯ ರೈಲ್ವೆ ಹಾಗೂ ಭಾರತೀಯ ಸೇನೆ ಸರಿ ಸುಮಾರು 2.7 ಮಿಲಿಯನ್ ಜನರಿಗೆ ಉದ್ಯೋಗ ನೀಡಿವೆ ಎಂದು ವರದಿ ತಿಳಿಸಿದೆ.

ವಿಶ್ವದ ಆರ್ಥಿಕ ವೇದಿಕೆ ಪ್ರಕಟಿಸಿರುವ ವರದಿಯಂತೆ, ಭಾರತೀಯ ರೈಲ್ವೆ ಅತಿ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಸಂಸ್ಥೆಗಳ ಪೈಕಿ ಜಾಗತಿಕವಾಗಿ 8ನೇ ಸ್ಥಾನದಲ್ಲಿದೆ. ಭಾರತೀಯ ರೈಲ್ವೆಯಲ್ಲಿ ಸುಮಾರು 14 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಂತರದ ಸ್ಥಾನದಲ್ಲಿರುವ ಭಾರತೀಯ ಸೇನೆಯಲ್ಲಿ 13 ಲಕ್ಷ ಮಂದಿ ಇದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಂಡಿರುವ ಸಂಸ್ಥೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಮೆರಿಕ ಸೇನೆ ಇದೆ. ಅಮೆರಿಕದ ಸೇನೆಯಲ್ಲಿ ಸುಮಾರು 32 ಲಕ್ಷ ಮಂದಿ ಇದ್ದಾರೆ. ಎರಡನೇ ಸ್ಥಾನದಲ್ಲಿ ಚೀನಾ ಸೇನೆ ಇದ್ದು, 23 ಲಕ್ಷ ಮಂದಿಗೆ ಕೆಲಸ ಕೊಟ್ಟಿದೆ. ಮೂರನೇ ಸ್ಥಾನದಲ್ಲಿರುವ ವಾಲ್‌ಮಾರ್ಟ್‌ನಲ್ಲಿ 21 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Indian Army and Railways listed in World's Biggest Employers

ವಿಶ್ವದ ಟಾಪ್‌ 10 ಉದ್ಯೋಗದಾತ ಸಂಸ್ಥೆ:
ಸ್ಥಾನ ಕಂಪನಿ ಉದ್ಯೋಗಿಗಳ ಸಂಖ್ಯೆ
1. ಅಮೆರಿಕ ಸೇನೆ- 32 ಲಕ್ಷ ಉದ್ಯೋಗಿಗಳು
2. ಚೀನಾ ಸೇನೆ -23 ಲಕ್ಷ
3. ವಾಲ್‌ಮಾರ್ಟ್‌- 21 ಲಕ್ಷ
4. ಮೆಕ್‌ಡೊನಾಲ್ಡ್‌ -19 ಲಕ್ಷ
5. ಬ್ರಿಟನ್‌ ಆರೋಗ್ಯ ಸೇವೆ- 17 ಲಕ್ಷ
6. ಚೀನಾ ಪೆಟ್ರೋಲಿಯಂ -16 ಲಕ್ಷ
7. ಚೀನಾ ಗ್ರಿಡ್‌ ಕಾರ್ಪೋರೇಷೇನ್- 15 ಲಕ್ಷ
8. ಭಾರತೀಯ ರೈಲ್ವೆ -14 ಲಕ್ಷ
9. ಭಾರತೀಯ ಸೇನೆ -13 ಲಕ್ಷ
10. ಫಾಕ್ಸ್‌ಕಾನ್‌ -12 ಲಕ್ಷ

English summary
Two Indian organisations - Army and Railways - are among the world’s biggest employers, together employing a whopping 2.7 million people, said a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X