ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋರ್ನ್ ವೀಕ್ಷಣೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? ಉತ್ತರ ಇಲ್ಲಿದೆ

|
Google Oneindia Kannada News

ನವದೆಹಲಿ, ಜನವರಿ, 12: ಭಾರತೀಯರು ಭಲೇ ರಸಿಕರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಶ್ಲೀಲ ವಿಡಿಯೋಗಳ ವೀಕ್ಷಣೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ 3ನೇ ಸ್ಥಾನ. ನಮ್ಮನ್ನು ಬಿಟ್ಟರೆ ಮುಂದಿರುವವರು ಆಸ್ಟ್ರೇಲಿಯಾ ಮತ್ತು ಕೆನಡಾ.

ಇದು ಭಾರತೀಯರ 2015 ರ ಸಾಧನೆ!. ಫೋರ್ನ್‍ಹಬ್.ಕಾಂ ಬಿಡುಗಡೆ ಮಾಡಿದ 2015ರ ವಾರ್ಷಿಕ ಬಳಕೆದಾರರ ಮಾಹಿತಿ ಇದನ್ನು ಸ್ಪಷ್ಟಮಾಡಿದೆ. 2015ರಲ್ಲಿ ಕೇಂದ್ರ ಸರ್ಕಾರ ಇಂಥ ವೆಬ್ ತಾಣಗಳ ಮೇಲೆ ಒಮ್ಮೆ ನಿಷೇಧವನ್ನು ಹೇರಿತ್ತು. ನಂತರ ಸಾಮಾಜಿಕ ತಾಣಗಳಲ್ಲಿ ಪರ ವಿರೋಧದ ಚರ್ಚೆ ಆರಂಭವಾಗಿ ನಿಷೇಧ ಹಿಂದಕ್ಕೆ ಪಡೆಯಲಾಗಿತ್ತು.[ಮನೆಯಲ್ಲಿ ಕುಳಿತು ಅಶ್ಲೀಲ ಚಿತ್ರ ನೋಡೋದು ಅಪರಾಧವೆ?]

India watching more porn on online: Report

ಸೆಕೆಂಡಿಗೆ 75 ಜಿಬಿ!
ಫೋರ್ನ್‍ಹಬ್.ಕಾಂ ಹೇಳುವಂತೆ ಭಾರತದಲ್ಲಿ ಸೆಕೆಂಡಿಗೆ 75 ಜಿಬಿ! ಡಾಟಾ ತಮ್ಮ ಸೈಟ್ ನಿಂದ ಡೌನ್ ಲೋಡ್ ಆಗುತ್ತಿದೆಯಂತೆ. ಜನರು 'ಇಂಡಿಯನ್' ಎಂಬ ಪದ ಬಳಕೆಯ ಮೂಲಕವೇ ಸರ್ಚ್ ಮಾಡುತ್ತಾರೆ ಎಂಬುದನ್ನು ಹೇಳಲು ಮರೆತಿಲ್ಲ. ಸನ್ನಿ ಲಿಯೋನ್ ಕಿಮ್ ಕರ್ದಾಶಿಯನ್, ಮಿಯಾ ಖಲೀಫಾ, ಲಿಸಾ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದವರು ಎಂಬ ಮಾಹಿತಿಯನ್ನು ನೀಡಿದೆ.[ಪೋರ್ನ್ ಪ್ರಿಯ ಭಾರತೀಯರು, ಭಲೇ ರಸಿಕರು ಕಣ್ರೀ!]

ಕರ್ನಾಟಕ, ಗುಜರಾತ್, ಒಡಿಶಾ ಹಾಗೂ ಅಸ್ಸಾಂ ಜನಪ್ರತಿನಿಧಿಗಳು ವಿಧಾನಸಭೆಯಲ್ಲೇ ನೀಲಿಚಿತ್ರ ವೀಕ್ಷಿಸಿ ಸುದ್ದಿಯಾಗಿದ್ದರು. ಮನೆಯಲ್ಲಿ ಕುಳಿತು ನಾಲ್ಕು ಗೋಡೆಗಳ ಮಧ್ಯೆ ವಯಸ್ಕ ವ್ಯಕ್ತಿ ಲೈಂಗಿಕ ಚಿತ್ರ ವೀಕ್ಷಣೆ ಮಾಡುವುದು ಅಪರಾಧವಾಗುತ್ತದೆಯೇ? ಎಂದು ಸುಪ್ರೀಂ ಕೋರ್ಟ್ ಸಹ ಕಳೆದ ಜೂನ್ ನಲ್ಲಿ ಪ್ರಶ್ನೆ ಮಾಡಿತ್ತು. ವಯಸ್ಕ ವ್ಯಕ್ತಿಯ ಲೈಂಗಿಕ ಚಿತ್ರವನ್ನು ವೀಕ್ಷಿಸಿದರೆ ಅದು ಆತನ ಮೂಲಭೂತ ಹಕ್ಕು. ಸಂಪೂರ್ಣ ಖಾಸಗಿತನದಲ್ಲಿ ಅಶ್ಲೀಲ ಲೈಂಗಿಕ ಚಿತ್ರ ನೋಡುವುದನ್ನು ತಾನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

English summary
India is watching more porn than ever. In 2015, India knocked out Canada to grab the third position - after the US and Britain - in visiting one of the world's largest adult websites Pornhub. PornHub received 21.2 billion visits in 2015 - 40,000 visits every minute or 2.4 million per hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X