ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿ-4 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

By Mahesh
|
Google Oneindia Kannada News

ಬೆಂಗಳೂರು, ನ.09: ಅಣ್ವಸ್ತ್ರ ಸಾಮರ್ಥ್ಯದವುಳ್ಳ ದೇಶಿ ನಿರ್ಮಿತ ಅಗ್ನಿ-4 ಖಂಡಾಂತರ ಕ್ಷಿಪಣಿ ಪರೀಕ್ಷೆ ಸೋಮವಾರ ಯಶಸ್ವಿಯಾಗಿ ನಡೆಸಲಾಗಿದೆ. ಒರಿಸ್ಸಾ ಕರಾವಳಿ ತೀರದ ಬಾಲಸೂರ್ ಉಡಾವಣಾ ಕೇಂದ್ರದಿಂದನಾಲ್ಕು ಸಾವಿರ ಕಿ.ಮೀ.ದೂರದ ಗುರಿಗೆ ಅಪ್ಪಳಿಸುವ ಕ್ಷಿಪಣಿ ಪರೀಕ್ಷೆ ಮಾಡಲಾಗಿದೆ.

ವೀಲರ್‌ಐಲ್ಯಾಂಡ್ ಎಂದೇ ಹೆಸರಾಗಿದ್ದ ಅಬ್ದುಲ್‌ಕಲಾಂ ದ್ವೀಪದಿಂದ ಸಂಯೋಜಿತ ಉಡಾವಣಾ ಕೇಂದ್ರದ ಸಂಚಾರಿ ಲಾಂಚರ್ ಮೂಲಕ ಸೋಮವಾರ ಬೆಳಗ್ಗೆ 9.45ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇಡೀ ಪ್ರಕ್ರಿಯೆಯ ಮೇಲೆ ನಿಗಾವಹಿಸಲು ರಾಡಾರ್, ಎಲೆಕ್ಟೋ ಆಪ್ಟಿಕಲ್ ಸಿಸ್ಟಮ್ ಬಳಸಲಾಗಿತ್ತು ಎಂದು ರಕ್ಷಣಾಖಾತೆ ಮೂಲಗಳು ತಿಳಿಸಿವೆ.

India test-fires Agni-IV ballistic missile

ಭೂಮಿಯಿಂದ ಭೂಮಿಗೆ ಅಪ್ಪಳಿಸಬಲ್ಲ ಅಗ್ನಿ-4 ಕ್ಷಿಪಣಿ ಎರಡು ಹಂತದ ಸಿಡಿತಲೆ ಹೊಂದಿದೆ. 20 ಮೀಟರ್ ಉದ್ದವಿರುವ 17 ಟನ್ ತೂಕದ ಈ ಕ್ಷಿಪಣಿಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಅಗ್ನಿ 1, 2 ಹಾಗೂ 3ನೆ ಸರಣಿಯ ಕ್ಷಿಪಣಿಗಳು ಸೇನೆಗೆ ಸೇರ್ಪಡೆಯಾಗಿದ್ದು ಇದು ನಾಲ್ಕನೆಯ ಪ್ರಬಲ ಅಸ್ತ್ರವಾಗಿದೆ. ಈ ಮೊದಲಿನ ಮೂರು ಕ್ಷಿಪಣಿಗಳು 3 ಸಾವಿರ ಕಿ.ಮೀ.ವ್ಯಾಪ್ತಿಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದ್ದು, ಅಗ್ನಿ-4 ನಾಲ್ಕು ಸಾವಿರ ಕಿ.ಮೀ.ವ್ಯಾಪ್ತಿ ಗುರಿಯನ್ನು ಅಪ್ಪಳಿಸಲಿದೆ ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ 4 ಕ್ಷಿಪಣಿಯ ಐದನೇ ಪ್ರಯೋಗಾರ್ಥ ಪರೀಕ್ಷೆ ಇದಾಗಿದೆ. ಈ ಮುಂಚೆ ಡಿಸೆಂಬರ್ 2, 2014ರಂದು ನಡೆಸಿದ ಪರೀಕ್ಷೆ ಯಶಸ್ವಿಯಾಗಿತ್ತು. (ಪಿಟಿಐ)

English summary
India today(Nov 09) test-fired its nuclear-capable strategic ballistic missile Agni-IV, capable of hitting a target at a distance of 4,000 km, from a test range off the Odisha coast as part of a user trial by the armed forces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X