ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್‌ ಮಳೆ: 113 ವರ್ಷದ ಇತಿಹಾಸದಲ್ಲಿ ಕಡಿಮೆ ಮಳೆ

By Ashwath
|
Google Oneindia Kannada News

ನವ ದೆಹಲಿ, ಜೂ. 30: ಈ ವರ್ಷದ ಜೂನ್‌ ತಿಂಗಳಿನಲ್ಲಿ ಇಷ್ಟು ಕಡಿಮೆ ಪ್ರಮಾಣದ ಮಳೆಯಾಗುತ್ತಿರುವುದು 113 ವರ್ಷದ ಇತಿಹಾಸದಲ್ಲಿ 12ನೇ ಸಲ ಎಂದು ಖಾಸಗಿ ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.

ಹವಾಮಾನ ಮುನ್ಸೂಚನೆ ನೀಡುವ ಸ್ಕೈಮೆಟ್‌ ಮೆಟರಾಲಾಜಿ ಡಿವಿಶನ್‌ ಆಫ್ ಇಂಡಿಯಾ ಈ ಮಾಹಿತಿಯನ್ನು ನೀಡಿದ್ದು ಈ ತಿಂಗಳು ದೇಶದೆಲ್ಲೆಡೆ ಸರಾಸರಿ ಶೇ. 42 ಮಳೆ ಕೊರತೆಯಾಗಿದೆ. ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಸಿಕ್ಕಾಪಟ್ಟೆ ಮಳೆ ಕಡಿಮೆಯಾಗಿದೆ ಎಂದು ತಿಳಿಸಿದೆ.

ಗುಜರಾತಿನಲ್ಲಿ ಜೂ.17ರ ತನಕ ಶೇ. 78 ಮಳೆ ಕೊರತೆಯಾಗಿತ್ತು ಬಳಿಕ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಿ ಮಳೆ ಕೊರತೆ ಶೇ. 88ಕ್ಕೇರಿದೆ. ಪಶ್ಚಿಮ ದಿಕ್ಕಿನಿಂದ ಮುಂಗಾರು ಮಾರುತಗಳು ವೆರಾವಲ್‌, ಸೂರತ್‌ ಮತ್ತು ನಾಸಿಕ್‌ ಮೂಲಕ ಹಾದು ಹೋಗುತ್ತವೆ. ಆದರೆ ಕಳೆದ 13 ದಿನಗಳಿಂದ ಈ ಮಾರುತಗಳಿಂದ ಯಾವುದೇ ಮಳೆಯಾಗಿಲ್ಲ ಎಂದು ತಿಳಿಸಿದೆ.

monsoon
ಕರ್ನಾಟಕದ ಕರಾವಳಿಯಲ್ಲಿ ಸರಸಾರಿ ಶೇ. 35 ಮತ್ತು ಕೇರಳದಲ್ಲಿ ಸರಾಸರಿ ಶೇ. 24 ಮಳೆ ಕೊರತೆಯಾಗಿದೆ. ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ದಕ್ಷಿಣ ಭಾಗದಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ಮಳೆಯಾಗಿದೆ ಎಂದು ಸ್ಕೈಮೆಟ್‌ ಹೇಳಿದೆ.

ಹವಾಮಾನ ಇಲಾಖೆ ಜುಲೈ ಮೊದಲ ವಾರದಲ್ಲಿ ದೇಶದಲ್ಲೆಡೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಒಂದು ವೇಳೆ ನಿಗದಿತ ಪ್ರಮಾಣದಲ್ಲಿ ಮಳೆ ಬೀಳದಿದ್ದಲ್ಲಿ ಶತಮಾನದ ಭೀಕರ ಬರಗಾಲಕ್ಕೆ ದೇಶ ತುತ್ತಾಗುವ ಸಾಧ್ಯತೆಯಿದೆ.[ಭಾರತದಲ್ಲಿ ಮುಂಗಾರು ಮಳೆ ಶೇ.45 ಕುಸಿತ]

ಜೂನ್‌ ಆರಂಭದಿಂದ ಜೂನ್‌ 18ರವರೆಗೆ ದೇಶದಲ್ಲಿ ಕೇವಲ ಶೇ.45ರಷ್ಟು ಮಾತ್ರ ಮಳೆಯಾಗಿದೆ. ಈ ಅವಧಿಯಲ್ಲಿ ದೇಶಾದ್ಯಂತ 78 ಮಿ.ಮೀ. ಮಳೆ ಸುರಿಯಬೇಕಿತ್ತು.

ಮಧ್ಯಪ್ರದೇಶ, ಗುಜರಾತ್‌, ಛತ್ತೀಸ್‌ಗಢ, ಮಹಾರಾಷ್ಟ್ರ, ಗೋವಾ ಹಾಗೂ ಒಡಿಶಾ ಒಳಗೊಂಡ ಮಧ್ಯಭಾರತದಲ್ಲಿ ದೀರ್ಘ‌ಕಾಲಿಕ ಸರಾಸರಿ ಮಳೆಯ ಪ್ರಮಾಣದ ಪ್ರಕಾರ ಶೇ. 66.2 ರಷ್ಟು ಮಳೆಯಾಗಬೇಕಿತ್ತು. ಆದರೆ ಇಲ್ಲಿವರೆಗೆ ಕೇವಲ 31.7 ಮಿ.ಮೀ.ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಈ ಹಿಂದೆಯೇ ತಿಳಿಸಿತ್ತು.

English summary
The national cumulative average of rainfall in June is deficient by a whopping 42 per cent, making it only the 12th instance in the past 113 years when rain shortfall was over 30 per cent in the month, according to a private forecasting agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X