ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಹರಿಕೋಟ :ಭಾರತದ ಮಂಗಳಯಾನ ಯಶಸ್ವಿ

By Mahesh
|
Google Oneindia Kannada News

ಶ್ರೀಹರಿಕೋಟ, ನ.5: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಮಂಗಳಯಾನ ಆರಂಭಗೊಂಡಿದೆ. ಮಂಗಳನ ಅಂಗಳದಲ್ಲಿ ಜೀವ ಕಣ ಪತ್ತೆಗೆ ಇಸ್ರೋ ದೇಶಿ ನಿರ್ಮಿತ ಮಾರ್ಸ್ ಆರ್ಬಿಟರ್ ನೌಕೆ(ಪಿಎಸ್ ಎಲ್ ವಿ ಸಿ25)ಯಲ್ಲಿ ಮಂಗಳನೆಡೆಗೆ ಉಪಗ್ರಹ ಹಾರಿಸಲಾಗಿದೆ.

ಸುಮಾರು 40 ನಿಮಿಷಗಳ ಕಾಲದ ಉಸಿರುಬಿಗಿ ಹಿಡಿದ ವಾತಾವರಣದ ನಂತರ 44.4 ಮೀ ಎತ್ತರದ ರಾಕೆಟ್ ನಿಂದ ನೌಕೆ ಪ್ರತ್ಯೇಕಗೊಂಡು ಪಥ ಕಂಡುಕೊಂಡಿದೆ. ಈ ಮೂಲಕ ಮಂಗಳಯಾತ್ರೆ ಕೈಗೊಂಡ ವಿಶ್ವದ 6ನೇ ರಾಷ್ಟ್ರ ಹಾಗೂ ಏಷ್ಯಾದ ಪ್ರಥಮ ದೇಶವಾಗಿ ಭಾರತ ಗುರುತಿಸಿಕೊಂಡಿದೆ.

ರಾಕೆಟ್ ನಿಂದ ಪ್ರತ್ಯೇಕಗೊಂಡು ಉಪಗ್ರಹ ಪಥ ಸೇರಿದೆ ಮಂಗಳಯಾನ ಮೊದಲ ಹಂತ ಯಶಸ್ವಿಯಾಗಿದೆ. 25 ದಿನ ಭೂಮಿ ಸುತ್ತ ಸುತ್ತಲಿರುವ ಉಪಗ್ರಹ, ಡಿ.1ರಂದು ಮಂಗಳನತ್ತ 9 ತಿಂಗಳ ಸುದೀರ್ಘ ಪ್ರಯಾಣ ಆರಂಭಿಸಲಿದೆ. 2014ರ ಸೆ.24ರಂದು ಮಂಗಳನ ಕಕ್ಷೆ ತಲುಪುವ ನಿರೀಕ್ಷೆ ಇದೆ. ಆ ನಂತರ 160 ದಿನಗಳ ಕಾಲ ಉಪಗ್ರಹ ಮಂಗಳನ ಸುತ್ತ ಸುತ್ತಲಿದೆ. ನನ್ನ ಎಲ್ಲಾ ಸಹದ್ಯೋಗಿ ವಿಜ್ಞಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನ ISAC ಕೇಂದ್ರದಲ್ಲಿ ಉಪಗ್ರಹ ಹಾಗೂ ಪಿಎಸ್ ಎಲ್ ವಿ ಸಿ25ನ ಅಂತಿಮ ಹಂತದ ಪರೀಕ್ಷೆ ನಡೆಸಲಾಗಿತ್ತು. ಸೆಪ್ಟೆಂಬರ್ 27ರ ವೇಳೆಗೆ ಉಪಗ್ರಹ ಸಮೇತ ನೌಕೆಯನ್ನು ಶ್ರೀಹರಿಕೋಟಾಗೆ ರವಾನಿಸಲಾಗಿತ್ತು. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಂಗಳವಾರ ಮಧ್ಯಾಹ್ನ 2.38ರ ವೇಳೆ ಮಂಗಳಯಾನ ಆರಂಭಗೊಂಡಿದೆ. [ಇದನ್ನೂ ಓದಿ : ಅಭಿನಂದನೆಗಳ ಮಹಾಪೂರ| ನಾಯರ್ ಅಪಸ್ವರ ]

ಹವಾಮಾನ ಅನುಕೂಲ ನೋಡಿಕೊಂಡು ಅಕ್ಟೋಬರ್ 21 ರಿಂದ ನವೆಂಬರ್ 19ರೊಳಗೆ ಉಪಗ್ರಹ ಉಡಾವಣೆ ಮಾಡಲಾಗುತ್ತ್ತದೆ ಎಂದು ಐಸಾಕ್(ISAC) ನ ನಿರ್ದೇಶಕ ಡಾ. ಎನ್ ಶಿವಕುಮಾರ್ ಹೇಳಿದನ್ನು ಇಲ್ಲಿ ಸ್ಮರಿಸಬಹುದು. ಮಂಗಳಯಾನ ಕುರಿತ ಇನ್ನಷ್ಟು ಮಾಹಿತಿ ಮುಂದೆ ಓದಿ...

ಐಸಾಕ್ ನಿರ್ದೇಶಕರ ಹೇಳಿಕೆ

ಐಸಾಕ್ ನಿರ್ದೇಶಕರ ಹೇಳಿಕೆ

ಉಪಗ್ರಹ ಹಾಗೂ ನೌಕೆಯನ್ನು ನಾನಾ ಹಂತಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಉಪಕರಣಗಳನ್ನು ಶೇ.100ಕ್ಕೆ ನೂರರಷ್ಟು ತಪಾಸಣೆಗೆ ಒಳಪಡಿಸಲಾಗಿದೆ.

ಭೂಮಿಯ ಕಕ್ಷೆಯಿಂದ ಹೊರಹೋಗಲಿರುವ ಹಿನ್ನೆಲೆಯಲ್ಲಿ ಉಪಗ್ರಹಕ್ಕೆ ಹೆಚ್ಚು ತೂಕ ಹೊರಿಸದೆ ಕೇವಲ 15 ಕೆ.ಜಿ. ಭಾರದ ಐದು ಉಪಕರಣಗಳನ್ನು ಅಧ್ಯಯನಕ್ಕಾಗಿ ಸೇರ್ಪಡೆ ಮಾಡಲಾಗಿದೆ.

ಭಾರತದ ಎಸ್ ಸಿಐ ಯಮುನಾ ಹಾಗೂ ನಳಂದ ಎಂಬ ಎರಡು ಹಡಗುಗಳು ಸಮುದ್ರದಲ್ಲಿ ತೀವ್ರ ನಿಗಾ ವಹಿಸಲಿವೆ. ಎಂದು ಐಸಾಕ್ ನಿರ್ದೇಶಕ ಶಿವಕುಮಾರ್ ಹೇಳಿದ್ದಾರೆ.

ಉಪಗ್ರಹದ ಕೆಲಸ ಏನು?

ಉಪಗ್ರಹದ ಕೆಲಸ ಏನು?

ಬಾಹ್ಯಾಕಾಶ ನೌಕೆ ಮೂಲಕ ಹಾರಿಬಿಡುವ ಉಪಗ್ರಹ ಭೂಮಿಯ ಆಚೆ 372 ಕಿ.ಮೀ. ದೂರದಲ್ಲಿ ಸಂಚರಿಸುತ್ತ ಮಂಗಳನತ್ತ ಸಾಗಲಿದೆ. ಮಂಗಳನ ಕಕ್ಷೆಯಲ್ಲಿ 272 ಕಿ.ಮೀ.ನಿಂದ 80 ಸಾವಿರ ಕಿ.ಮೀ. ಅಂತರದಲ್ಲಿ ಪರಿಭ್ರಮಿಸುವ ಉಪಗ್ರಹ ತನ್ನ ಮೊದಲ ಪೂರ್ಣ ಪ್ರಮಾಣದ ಚಿತ್ರವನ್ನು 9 ತಿಂಗಳ ಬಳಿಕ(ಸೆ.21, 2014) ಭೂಮಿಗೆ ರವಾನಿಸಲಿದೆ.

ಬೆಂಗಳೂರಿನ ಇಸ್ರೋ ಐಸಾಕ್ ಕೇಂದ್ರದ ಕ್ಲೀನ್ ರೂಮ್ ನಲ್ಲಿ ಉಪಗ್ರಹ. PTI Photo by Shailendra Bhojak

ಮಂಗಳಯಾನ ಯೋಜನೆ

ಮಂಗಳಯಾನ ಯೋಜನೆ

* ಈ ಯೋಜನೆಯ ಒಟ್ಟು ವೆಚ್ಚ 450 ಕೋಟಿ ರೂಪಾಯಿ. ಈ ಪೈಕಿ 150 ಕೋಟಿ ರೂ. ಬಾಹ್ಯಾಕಾಶ ನೌಕೆ ನಿರ್ಮಾಣಕ್ಕೆ, 110 ಕೋಟಿ ರೂ. ಉಡಾವಣಾ ವಾಹಕಕ್ಕೆ ಬಳಸಿಕೊಳ್ಳಲಾಗಿದೆ.
* ಮೀಥೇನ್ ಇರುವಿಕೆ ಪತ್ತೆಗೆ ಎಂಎಸ್‌ಎಂ ಹೆಸರಿನ ವೈಜ್ಞಾನಿಕ ಉಪಕರಣವನ್ನು ಉಪಗ್ರಹದಲ್ಲಿದೆ.
* ಮಂಗಳದ ಮೇಲ್ಮೈ ರಚನೆ ಸೆರೆ ಹಿಡಿಯಲು ಕ್ಯಾಮೆರಾ(ಎಂಸಿಸಿ), ಟಿಐಎಸ್, ಎಲ್ ಎಪಿ ಹಾಗೂ ಎಂಇಎನ್ ಸಿಎ ಉಪಕರಣವಿದೆ.
* ಉಪಗ್ರಹದ ತೂಕ 1,340 ಕೆ.ಜಿ. ಇದು ಮಂಗಳನ ಕಕ್ಷೆಗೆ ಸೇರಿದಾಗ 582 ಕೆ.ಜಿ.ಗೆ ಕುಗ್ಗಲಿದೆ. ಬೆಂಗಳೂರಿನ ಇಸ್ರೋ ಐಸಾಕ್ ಕೇಂದ್ರದ ಕ್ಲೀನ್ ರೂಮ್ ನಲ್ಲಿ ಉಪಗ್ರಹ ಪರೀಕ್ಷೆ. PTI Photo by Shailendra Bhojak

ಇಸ್ರೋ ಮುಂದಿದ್ದ ಸವಾಲು

ಇಸ್ರೋ ಮುಂದಿದ್ದ ಸವಾಲು

ಕಡಿಮೆ ವೆಚ್ಚದಲ್ಲಿ ಉಪಗ್ರಹ ನಿರ್ಮಾಣ , ಸಂವಹನ, ನ್ಯಾವಿಗೇಷನ್, ವಿದ್ಯುತ್ ಪೂರೈಕೆ ಹಾಗೂ ಪ್ರೊಪಲ್ಷನ್ ವ್ಯವಸ್ಥೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿತ್ತು. ಸಂವಹನ ವಿಳಂಬ ಕೊರತೆ ಸಂದರ್ಭದಲ್ಲಿ ಉಪಗ್ರಹದ ವ್ಯವಸ್ಥೆ ತನ್ನಷ್ಟಕ್ಕೇ ತಾನೇ ನಿರ್ಧಾರ ಕೈಗೊಳ್ಳುವಂತೆ ಮಾಡಲಾಗಿದೆ. ಹೀಗಾಗಿ ತೊಂದರೆ ಉಂಟಾದರೆ ಪರಿಹರಿಸಲು ಸಾಧ್ಯವಿದೆ.

ಬೆಂಗಳೂರಿನ ಇಸ್ರೋ ಐಸಾಕ್ ಕೇಂದ್ರದ ಕ್ಲೀನ್ ರೂಮ್ ನಲ್ಲಿ ಉಪಗ್ರಹ ಪರೀಕ್ಷೆ. PTI Photo by Shailendra Bhojak
ತಿಮ್ಮಪ್ಪನ ನಂಬಿದ ವಿಜ್ಞಾನಿ

ತಿಮ್ಮಪ್ಪನ ನಂಬಿದ ವಿಜ್ಞಾನಿ

ದೇಶದ ಅಗ್ರಗಣ್ಯ ವಿಜ್ಞಾನಿ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್ ಅವರು ಪತ್ನಿ ಸಮೇತರಾಗಿ ಆಂಧ್ರಪ್ರದೇಶದ ತಿರುಮಲಕ್ಕೆ ಭೇಟಿ ಕೊಟ್ಟೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮಂಗಳಯಾನ ಯಶಸ್ವಿಯಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು

ರಾಧಾಕೃಷ್ಣನ್ ಕಾತುರ

ರಾಧಾಕೃಷ್ಣನ್ ಕಾತುರ

ಮಾರ್ಸ್ ಆರ್ಬಿಟರ್ ಪ್ರಾಜೆಕ್ಟ್‌ನ ನಿರ್ದೇಶಕ ಡಾ. ಎಂ. ಅಣ್ಣಾದೊರೈ, ಎಸ್.ಕೆ. ಶಿವಕುಮಾರ್ ಅವರು ಉಪಗ್ರಹದ ವಿನ್ಯಾಸ ಮತ್ತು ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಮಂಗಳಯಾನಕ್ಕೆ ಕೈಹಾಕಿದ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆ ಪಡೆಯುವ ಹುಮ್ಮಸ್ಸಿನಲ್ಲಿ ಇಸ್ರೋ ತರಾತುರಿಯಲ್ಲಿ ಈ ಯೋಜನೆಗೆ ಸಿದ್ಧತೆ ನಡೆಸಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ರಾಧಾಕೃಷ್ಣನ್ ಅವರು ಯೋಜನೆ ಸಫಲಗೊಳ್ಳುವುದನ್ನು ಕಾತುರದಿಂದ ಕಾದಿದ್ದಾರೆ.
ವಿಜ್ಜಾನಿಗಳ ಕಾತುರತೆ

ವಿಜ್ಜಾನಿಗಳ ಕಾತುರತೆ

ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ತ್ವರಿತ ಗತಿಯಲ್ಲಿ ಇಂಥ ಮಹತ್ವದ ಯೋಜನೆಯನ್ನು ಸಿದ್ಧಪಡಿಸಿದ್ದು ಇಸ್ರೋ ಸಾಧನೆಯಾಗಿದೆ. ಬಾಹ್ಯಾಕಾಶ ನೌಕೆಯ ನಿರ್ಮಾಣ ಕಾರ್ಯ, ಅಂತಿಮ ಹಂತದ ಪರೀಕ್ಷೆಗಳು ಯಶಸ್ವಿಯಾಗಿ ಅ.28ರಂದು ಪಿ.ಎಸ್.ಎಲ್.ವಿ ರಾಕೆಟ್ ಮೂಲಕ ಉಪಗ್ರಹ ಉಡಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಫೆಸಿಪಿಕ್ ಮಹಾಸಾಗರದಲ್ಲಿ ಹವಾಮಾನವೈಫರಿತ್ಯ ಉಂಟಾದ ಕಾರಣ ನ.5ಕ್ಕೆ ಉಡಾವಣೆ ಮಾಡಲಾಗಿದೆ.

ವಿಜ್ಜಾನಿಗಳ ಕಾತುರತೆ

ವಿಜ್ಜಾನಿಗಳ ಕಾತುರತೆ

ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್ ಸೇರಿದಂತೆ ಇತರೆ ವಿಜ್ಞಾನಿಗಳು

ಮಂಗಳಯಾನ ಇನ್ನಷ್ಟು

ಮಂಗಳಯಾನ ಇನ್ನಷ್ಟು

* ಸೌರಮಂಡಲದ ಗ್ರಹವೊಂದಕ್ಕೆ ಭಾರತ ಕಳುಹಿಸುತ್ತಿರುವ ಮೊದಲ ಕೃತಕ ಉಪಗ್ರಹ
* ಇದುವರೆಗೆ ವಿಶ್ವಾದ್ಯಂತ ಮಂಗಳಯಾನಕ್ಕೆ ವಿವಿಧ ದೇಶಗಳು 51 ಬಾರಿ ಯತ್ನಿಸಿದ್ದು ಈ ಪೈಕಿ 21 ಯತ್ನ ಮಾತ್ರ ಸಫಲವಾಗಿದೆ
* ಉಪಗ್ರಹದ ಮೇಲೆ ಬೆಂಗಳೂರಿನ ಬ್ಯಾಲಾಳು, ಅಂಡಮಾನ್-ನಿಕೋಬಾರ್ ದ್ವೀಪದ ರಾಜಧಾನಿ ಪೋರ್ಟ್ ಬ್ಲೇರ್ , ಮಲೇಷ್ಯಾ ಸಮೀಪದ ಬ್ರೂನೈನಲ್ಲಿರುವ ಇಸ್ರೋ ಕೇಂದ್ರಗಳು ಸಜ್ಜಾಗಿವೆ. ಅಲ್ಲದೆ, ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಭಾರತದ ಎರಡು ಹಡಗುಗಳು ಯಮುನಾ ಹಾಗೂ ನಳಂದ ನಿಗಾ ಇಡಲಿವೆ.
* ಯುರೋಪಿಯನ್ ಸ್ಪೇಸ್ ಏಜೆನ್ಸಿ(ESA), ನಾಸಾ ಹಾಗೂ ರಷ್ಯಾದ ಬಾಹ್ಯಾಕಾಶ ಸಂಸ್ಥೆ ಮಾತ್ರ ಮಂಗಳಯಾನ ಯೋಜನೆಯಲ್ಲಿ ಯಶ ಕಂಡಿವೆ.

English summary
As the the nation waits with bated breath, India’s Mars Orbiter Mission (MOM) has begun.Mars orbiter takes off from Sriharikota successfully. Mars Mission is one of the least expensive Martian missions in the world, at a total cost of Rs 450 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X