ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗ ಪೂರ್ತಿ

ಕೋಲ್ಕತಾದ ಹೂಗ್ಲಿ ನದಿಯ ಕೆಳಗೆ ನಡೆಯುತ್ತಿದ್ದ ಮೆಟ್ರೋ ಸುರಂಗ ಕಾಮಗಾರಿ ಪೂರ್ಣ. ದೇಶದ ಮೊಟ್ಟಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗವಿದು.

|
Google Oneindia Kannada News

ಕೋಲ್ಕತಾ, ಜೂನ್ 23: ಭಾರೀ ನಿರೀಕ್ಷೆಯ ಯೋಜನೆಯಾಗಿದ್ದ ಹೂಗ್ಲಿ ನದಿಯ ಕೆಳಗಿನ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ಪೂರ್ತಿಯಾಗಿದೆ.

ಕೋಲ್ಕತಾ ಮೆಟ್ರೋ ರೈಲು ನಿಗಮವು ಈ ಯೋಜನೆಯನ್ನು ಎತ್ತಿಕೊಂಡಿತ್ತು. ಇದೀಗ, ಈ ಯೋಜನೆ ಪೂರ್ತಿಯಾಗಿದೆ. 1984ರಲ್ಲೇ ಕೋಲ್ಕತಾಕ್ಕೆ ಮೆಟ್ರೋ ರೈಲು ಬಂದಿದ್ದು.

ಆ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಸೌಕರ್ಯ ಪಡೆದ ಹೆಗ್ಗಳಿಕೆ ಹೊಂದಿರುವ ಕೋಲ್ಕತಾ ಈಗ ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗ ಮಾರ್ಗ ಹೊಂದಿರುವ ಮೊದಲ ರಾಜ್ಯವೆಂಬ ಮತ್ತೊಂದು ಗರಿಯನ್ನು ತನ್ನದಾಗಿಸಿಕೊಂಡಿದೆ.

ಕಾಮಗಾರಿ ಯಶಸ್ವಿಯಾಗಿ ಪೂರ್ತಿಯಾಗಿರುವುದಕ್ಕೆ ಆನಂದ ವ್ಯಕ್ತಪಡಿಸಿರುವ ಕೋಲ್ಕತಾ ಮೆಟ್ರೋ ರೈಲು ನಿಗಮದ ಮುಖ್ಯಸ್ಥ ಸತೀಶ್ ಕುಮಾರ್, ''ದೇಶ ವಿದೇಶಗಳ ಇಂಜಿನಿಯರ್ ಗಳು ನೂರಾರು ಕೂಲಿ ಕಾರ್ಮಿಕರ ಸತತ ಪರಿಶ್ರಮದಿಂದ ಈ ಯೋಜನೆ ಸಿದ್ಧವಾಗಿದೆ. ಹೂಗ್ಲಿ ನದಿಯ ಕೆಳಗೆ ಇಂಥ ಸುರಂಗ ನಿರ್ಮಿಸುವುದು ಖಂಡಿತವಾಗಿಯೂ ನಮ್ಮ ಪಾಲಿಗೆ ದೊಡ್ಡದೊಂದು ಸವಾಲು ಆಗಿತ್ತು. ಈಗ ಅದನ್ನು ಸಾಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ'' ಎಂದು ತಿಳಿಸಿದ್ದಾರೆ.

ಹಾಗಾಗರೆ, ಈ ಯೋಜನೆಯ ವಿಶೇಷ, ವೈಶಿಷ್ಟ್ಯ ಏನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ...

ಹೌರಾ-ಕೋಲ್ಕತಾ ಬೆಸುಗೆ

ಹೌರಾ-ಕೋಲ್ಕತಾ ಬೆಸುಗೆ

ಈ ಸುರಂಗದ ಉದ್ದ 16.4 ಕಿ.ಮೀ. ಆಗಿದ್ದು, ಇದು ಹೌರಾ ಮತ್ತು ಕೋಲ್ಕತಾ ನಗರಗಳನ್ನು ಬೆಸೆಯುತ್ತದೆ. ಈ ಸುರಂಗ ನಿರ್ಮಾಣಕ್ಕಾಗಿ ಸುಮಾರು 9 ಸಾವಿರ ಕೋಟಿ ರು. ವ್ಯಯಿಸಲಾಗಿದೆ.

ಜೂನ್ 20ರಂದು ಸುರಂಗ ಕೊರೆತ ಪೂರ್ಣ

ಜೂನ್ 20ರಂದು ಸುರಂಗ ಕೊರೆತ ಪೂರ್ಣ

ಇದೇ ವರ್ಷ ಏಪ್ರಿಲ್ ನ ಕೊನೆಯ ವಾರದಲ್ಲಿ ಈ ಸುರಂಗ ಯೋಜನೆ ಆರಂಭವಾಗಿತ್ತು. ಹೌರಾ ಕಡೆಯಿಂದ ಈ ಸುರಂಗ ಆರಂಭಿಸಲಾಗಿತ್ತು. ಸುರಂಗ ಕೊರೆಯುತ್ತಿದ್ದ ಬೃಹತ್ ಯಂತ್ರವು ಜೂನ್ 20ರಂದು ಕೋಲ್ಕತಾ ಕಡೆಗಿನ ಭೂಭಾಗದಿಂದ ಆಚೆ ಬಂದಿದೆ.

ಸಿದ್ಧವಾಗಿವೆ ಎರಡು ಟನೆಲ್ ಗಳು

ಸಿದ್ಧವಾಗಿವೆ ಎರಡು ಟನೆಲ್ ಗಳು

ಅಂದಹಾಗೆ, ಇಲ್ಲಿ ಎರಡು ಟನೆಲ್ ಗಳನ್ನು ನಿರ್ಮಿಸಲಾಗಿದೆ . ಇದು ಎರಡು ಮುಖದ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಿದೆ. ಎರಡೂ ಟನೆಲ್ ಗಳು ಏಕಕಾಲದಲ್ಲಿ ನಿರ್ಮಾಣವಾಗಿರುವುದು ಹೆಗ್ಗಳಿಕೆ.

ಜನಸಾಮಾನ್ಯರ ಫೇವರಿಟ್ ಆಗಲಿರುವ ಯೋಜನೆ

ಜನಸಾಮಾನ್ಯರ ಫೇವರಿಟ್ ಆಗಲಿರುವ ಯೋಜನೆ

ಈ ಸುರಂಗ ಮಾರ್ಗ ನಿರ್ಮಾಣದಿಂದಾಗಿ ಹೌರಾ ಹಾಗೂ ಕೋಲ್ಕತಾ ನಡುವಿನ ಪ್ರಯಾಣ ಕೇವಲ 2.5 ನಿಮಿಷಗಳದ್ದಾಗಲಿದೆ. ಹಾಗಾಗಿ, ಜನಸಾಮಾನ್ಯರಿಗೆ ಇದು ದೊಡ್ಡ ಮಟ್ಟದ ನೆರವು ನೀಡಲಿದೆ ಎಂದು ಹೇಳಲಾಗಿದೆ.

ಮುಂದಿನ ಕಾಮಗಾರಿಗೆ ಉತ್ಸಾಹ

ಮುಂದಿನ ಕಾಮಗಾರಿಗೆ ಉತ್ಸಾಹ

ಈ ಸುರಂಗ ಮಾರ್ಗದ ಯಶಸ್ವಿ ನಿರ್ಮಾಣದಿಂದ ಸ್ಫೂರ್ತಿಗೊಂಡಿರುವ ಕೋಲ್ಕತಾ ಮೆಟ್ರೋ ಸಂಸ್ಥೆ, ಮುಂದಿನ ವರ್ಷ ಕಾಮಗಾರಿ ಆರಂಭವಾಗಬೇಕಿರುವ ಸಾಲ್ಟ್ ಲೇಕ್ ಹಾಗೂ ಪೂಲ್ ಬಗಾನ್ ನಡುವಿನ ಮತ್ತೊಂದು ಮಹತ್ವದ ಮೆಟ್ರೋ ಕಾಮಗಾರಿಯಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದೆ.

English summary
The tunnelling work under the Hooghly river, the first such underwater project in the country, to provide metro connectivity between Howrah and Kolkata has been completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X