ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಖ್ವಿ ಜೈಲಿಂದ ಬಿಡುಗಡೆ, ಭಾರತದ ಗಡಿಯಲ್ಲಿ ಹೈಅಲರ್ಟ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏ. 10 : ನವೆಂಬರ್ 26 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರಧಾರ ಝಕಿ-ಉರ್-ಲಖ್ವಿ ಪಾಕಿಸ್ತಾನದ ಜೈಲಿನಿಂದ, ಬೆಂಬಲಿಗರ ಜೈಕಾರಗಳ ನಡುವೆ ಸಂಭ್ರಮದಿಂದ ಬಿಡುಗಡೆಯಾಗುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗು ಪ್ರಮುಖವಾಗಿ ಗಡಿಭಾಗದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಲಖ್ವಿಯ ಬಿಡುಗಡೆಯಿಂದ ಲಷ್ಕರ್-ಇ-ತೊಯ್ಬಾ ಮತ್ತು ಇತರ ಉಗ್ರ ಸಂಘಟನೆಗಳು ಮತ್ತೆ ಪುಟಿದೇಳಲಿದ್ದು, ಭಾರತದ ಗಡಿಯ ಮೇಲೆ ದಾಳಿಯನ್ನು ನಡೆಸುವ ಸಾಧ್ಯತೆಯನ್ನು ತಳ್ಳಹಾಕಲಾಗದು ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಹಿಂದೆ ಕೂಡ ಲಖ್ವಿಯನ್ನು ಬಿಡುಗಡೆ ಮಾಡಲು ಕೋರ್ಟ್ ಆದೇಶಿಸುತ್ತಿದ್ದಂತೆ ಆತನ ಬಂಧನಕ್ಕೆ ಹೊಸ ಆದೇಶವನ್ನು ಪಾಕ್ ಸರಕಾರ ಹೊರಡಿಸುತ್ತಿತ್ತು. ಹೀಗಾಗಿ ಆತ ಜೈಲು ಕಂಬಿಗಳಿಂದಾಚೆ ಬಂದಿರಲಿಲ್ಲ. ಆದರೆ, ಈ ಬಾರಿ ಆತನ ಮರುಬಂಧನಕ್ಕೆ ಯಾವುದೇ ಆದೇಶವನ್ನು ಹೊರಡಿಸದಿರುವುದು ಕಳವಳಕ್ಕೆ ಕಾರಣವಾಗಿದೆ.

India on high alert as Lakhvi walks free

ಹಫೀಜ್ ಸಯೀದ್ ನಂತರ ಲಖ್ವಿ ಪಾಕಿಸ್ತಾನದ ಜಿಹಾದಿಗಳಲ್ಲಿ ಅತ್ಯಂತ ಪ್ರಭಾವಶಾಲಿ ಉಗ್ರ. ಲಷ್ಕರ್ ಸಂಘಟನೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ಐಎಸ್ಐ ಸಂಸ್ಥೆಗೆ ಕೂಡ ಲಖ್ವಿ ಬಿಡುಗಡೆ ಸಂತಸದ ಸಂಗತಿ. ಕೆಲ ತಿಂಗಳುಗಳಲ್ಲಿ ಅಫಘಾನಿಸ್ತಾನದ ವಿರುದ್ಧದ ಹೋರಾಟಕ್ಕೆ ಲಖ್ವಿಯನ್ನು ಐಎಸ್ಐ ಬಳಸಿಕೊಂಡರೂ ಅಚ್ಚರಿಯಿಲ್ಲ.

ಈಗಾಗಲೆ ಅಫಘಾನಿಸ್ತಾನದಲ್ಲಿ ಐಎಸ್ಐಎಸ್ ಮತ್ತು ಅಲ್-ಖೋರಾಸನ್ ಸಂಘಟನೆಗಳು ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿವೆ ಮತ್ತು ವೇಗವಾಗಿ ಕಬಂಧ ಬಾಹುಗಳನ್ನು ಚಾಚುತ್ತಿವೆ. ಮೂಲಗಳ ಪ್ರಕಾರ, ಪಾಕಿಸ್ತಾನದ ವಿರುದ್ಧ ಯಾರೇ ದನಿಯೆತ್ತಿದರೂ ಅವರನ್ನು ಹೊಸಕಿಹಾಕಲು ಲಖ್ವಿಯನ್ನು ಲಷ್ಕರ್ ಛೂ ಬಿಡಲಿದೆ.

ಜಿಹಾದಿಗಳ ಇಮಾಮ್

ಪಾಕಿಸ್ತಾನದಲ್ಲಿ ಲಖ್ವಿ ಜಿಹಾದಿಗಳ ಇಮಾಮ್ ಎಂದೇ ಹೆಸರುವಾಸಿ. ತಾನು ಮಾತ್ರವಲ್ಲ ತನ್ನ ಇಡೀ ಕುಟುಂಬವನ್ನೇ ಲಷ್ಕರ್ 'ಸೇವೆ'ಗಾಗಿ ಬಿಟ್ಟಿದ್ದಾನೆ ಲಖ್ವಿ. ಇದು ಲಷ್ಕರ್‌ನ ಪ್ರತಿಯೊಬ್ಬರಿಗೂ ತಿಳಿದ ವಿಚಾರ. ಇನ್ನೊಂದು ವಿಶಿಷ್ಟ ಸಂಗತಿಯೆಂದರೆ, ಆತನ ಇಬ್ಬರು ಮಕ್ಕಳಾದ ಅಬು ಕಾಸಿಮ್ ಮತ್ತು ಅಬು ಕತಾಲ್ ರನ್ನು ಕಾಶ್ಮೀರದಲ್ಲಿ ಭಾರತದ ಸೇನೆ ಹತ್ಯೆಗೈದಿದೆ.

ಇಬ್ಬರು ಮಕ್ಕಳನ್ನು ಕಳೆದುಕೊಂಡು ರೋದಿಸುತ್ತಿದ್ದ ಹೆಂಡತಿಯನ್ನೂ ಆತ ಬಿಡಲಿಲ್ಲ. ಕಾಶ್ಮೀರದಲ್ಲಿ ಗಂಡಂದಿರನ್ನು ಕಳೆದುಕೊಂಡ ವಿಧವೆಯರನ್ನೆಲ್ಲ ಒಗ್ಗೂಡಿಸಿ, ಅವರಿಗಾಗಿ ವಿಶೇಷ ಕ್ಯಾಂಪ್ ಸ್ಥಾಪಿಸಲು ಹೆಂಡತಿಗೆ ಸಹಾಯ ಮಾಡಿದ. ಈ ಎಲ್ಲ ಸಂಗತಿಗಳನ್ನು ಆತನ ಜನಪ್ರಿಯತೆಯನ್ನು ತುದಿಗೇರಿಸಿದೆ.

ಭಾರತ ವಿರೋಧಿ ನಿಲುವು

ಭಾರತದ ವಿರೋಧಿ ಹೇಳಿಕೆಗಳಿಂದಲೂ ಪಾಕಿಸ್ತಾನದಲ್ಲಿ ಆತ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾನೆ. ತನ್ನ ಮೂಲ ಉದ್ದೇಶವೇ ಭಾರತವನ್ನು ನಿರ್ನಾಮ ಮಾಡುವುದು ಎಂದು ಅನೇಕ ಬಾರಿ ಘೋಷಿಸಿದ್ದಾನೆ. ಅಲ್ಲದೆ, ಲಷ್ಕರ್ ಸಂಘಟನೆಯ ಬಿಳಲುಗಳನ್ನು ಭಾರತದಲ್ಲಿಯೂ ವಿಸ್ತರಿಸಲಾಗುವುದು ಎಂದು ಆತ ಅರುಹಿದ್ದಾನೆ.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಆರಂಭವಾಗುವ ಮುನ್ನವೇ ಭಾರತದ ಮೇಲಿನ ದಾಳಿಯ ಸೂಚನೆಯನ್ನು ಲಖ್ವಿ ನೀಡಿದ್ದ. ಭಾರತವನ್ನು ನುಚ್ಚುನೂರು ಮಾಡಲು ಸಿದ್ಧತೆ ನಡೆಸಲು ಇದು ಸಕಾಲ ಎಂದು ಆತ ನುಡಿದಿದ್ದ. ಕಾಶ್ಮೀರ ಮಾತ್ರವಲ್ಲ ಹೈದರಾಬಾದನ್ನು ಕೂಡ ಭಾರತದಿಂದ ಮುಕ್ತಗೊಳಿಸುವುದಾಗಿ ಆತ ಘೋಷಣೆ ಮಾಡಿದ್ದಾನೆ.

English summary
As Zaki-ur-Rehman Lakhvi walks out of a jail in Pakistan, security along the border areas especially in Jammu and Kashmir have been increased. Intelligence Bureau officials have warned that the release of Lakhvi is symbolic to the Lashkar-e-Tayiba and its affiliates and they with renewed vigour may target the border areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X