ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವೇ: ಮೋದಿ ಈಗಲೂ ನೆಚ್ಚಿನ ಪ್ರಧಾನಿ, ಆದರೆ ಅವರ ಸರಕಾರ?

|
Google Oneindia Kannada News

ನವದೆಹಲಿ, ಆಗಸ್ಟ್ 22: ಪ್ರಧಾನಮಂತ್ರಿ ಸ್ಥಾನಕ್ಕೆ ನರೇಂದ್ರ ಮೋದಿಯವರೇ ಸೂಕ್ತ ಆಯ್ಕೆ ಎಂದು ಇಂಡಿಯಾ ಟುಡೇ ಮತ್ತು ಸಿಸಿರೋ ಜಂಟಿಯಾಗಿ ನಡೆಸಿದ ' ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಗಿದೆ.

ಆದರೆ ಮೋದಿ ನೇತೃತ್ವದ ಎನ್ಡಿಎ ಸರಕಾರದ ಕಾರ್ಯವೈಖರಿಯ ಬಗ್ಗೆ ಜನರಿಗಿದ್ದ ಒಳ್ಳೆ ಅಭಿಪ್ರಾಯಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಸಮೀಕ್ಷೆಯ ಹೈಲೆಟ್ಸ್. (ಬಿಬಿಎಂಪಿ: ಪಬ್ಲಿಕ್ ಟಿವಿ ಸಮೀಕ್ಷೆ)

ಪಕ್ಷದ ಹಿರಿಯ ಮುಖಂಡರ ಸುತ್ತ ಸುತ್ತುತ್ತಿರುವ ಹಗರಣ, ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆ ಕಾಣದ ದೇಶದ ಆರ್ಥಿಕ ಅಭಿವೃದ್ದಿ, ಭೂಸ್ವಾಧೀನ ಮಸೂದೆ ಮುಂತಾದ ವಿವಾದಗಳಿಂದ ಮೋದಿ ಸರಕಾರದ ವರ್ಚಸ್ಸು ಕ್ಷೀಣಿಸುತ್ತಿದೆ.

ಸಮೀಕ್ಷೆಯಲ್ಲಿ ವ್ಯಕ್ತವಾದ ಇನ್ನೊಂದು ಅಂಶವೇನಂದರೆ, ಕಳೆದ ಏಪ್ರಿಲ್ ತಿಂಗಳಲ್ಲಿ ನಡೆಸಿದ ಇದೇ ರೀತಿಯ ಸರ್ವೇಗೂ, ಈಗಿನ ಸರ್ವೇಗೂ ಹೋಲಿಸಿದರೆ ಮೋದಿ ಬೆಸ್ಟ್ ಅನ್ನುವವರ ಸಂಖ್ಯೆಯಲ್ಲಿ ಶೇ. 3ರಷ್ಟು ಕಮ್ಮಿಯಾಗಿರುವುದು. (ಬಿಬಿಎಂಪಿ: ವಿಜಯವಾಣಿ ಸಮೀಕ್ಷೆ)

ಈ ತಕ್ಷಣಕ್ಕೆ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿಯ ಸಂಖ್ಯಾ ಬಲ 243 ಸ್ಥಾನಕ್ಕೆ ಇಳಿಯಲಿದೆ, ಕಳೆದ ಏಪ್ರಿಲ್ ನಲ್ಲಿ 255 ಸ್ಥಾನವಿತ್ತು. ಬಿಜೆಪಿಯ ಈಗಿನ ಬಲ ಮೈತ್ರಿಕೂಟ ಹೊರತು ಪಡಿಸಿ 282.

NDA ಮೈತ್ರಿಕೂಟ

NDA ಮೈತ್ರಿಕೂಟ

ಇದೇ ರೀತಿ ಎನ್ಡಿಯ ಮೈತ್ರಿಕೂಟದ ಸಂಖ್ಯಾ ಬಲವೂ ಗಣನೀಯ ಪ್ರಮಾಣದಲ್ಲಿ ಕುಸಿಯಲಿದೆ ಎಂದು ಇಂಡಿಯಾ ಟುಡೇ ತನ್ನ ಸರ್ವೇಯಲ್ಲಿ ತಿಳಿಸಿದೆ. ತಕ್ಷಣ ಚುನಾವಣೆ ನಡೆದರೆ ಕೂಟದ ಈಗಿನ ಬಲ 355 ರಿಂದ 288ಕ್ಕೆ ಕುಸಿಯಲಿದೆ.

ಎರಡು ಅವಧಿಯ ಯುಪಿಎ ಸರಕಾರ

ಎರಡು ಅವಧಿಯ ಯುಪಿಎ ಸರಕಾರ

ಮನಮೋಹನ್ ಸಿಂಗ್ ಎರಡು ಅವಧಿಯಲ್ಲಿ ಪ್ರಧಾನಿಯಾಗಿದ್ದ ಮೊದಲ ಎರಡು ವರ್ಷದಲ್ಲಿ ಇದೇ ರೀತಿ ನಡೆಸಿದ ಸರ್ವೇಯಲ್ಲಿ ಯುಪಿಎ ಮೈತ್ರಿಕೂಟಕ್ಕೆ ಇಷ್ಟು ಹಿನ್ನಡೆಯಾಗಿರಲಿಲ್ಲ. ತಕ್ಷಣಕ್ಕೆ ಚುನಾವಣೆ ನಡೆದರೆ ಕಾಂಗ್ರೆಸ್ ಮತ್ತು ಯುಪಿಎ ಮೈತ್ರಿಕೂಟಕ್ಕೆ ಲಾಭವಾಗಲಿದೆ(ಆದರೆ ಗದ್ದುಗೇರುವಷ್ಟಲ್ಲ)

ಸಮೀಕ್ಷೆಯ ಪ್ರಕಾರ ಪ್ರಧಾನಿ ಹುದ್ದೆಗೆ ಯಾರು ಸೂಕ್ತ?

ಸಮೀಕ್ಷೆಯ ಪ್ರಕಾರ ಪ್ರಧಾನಿ ಹುದ್ದೆಗೆ ಯಾರು ಸೂಕ್ತ?

ನರೇಂದ್ರ ಮೋದಿ - ಶೇ. 37
ಅರವಿಂದ್ ಕೇಜ್ರಿವಾಲ್ - ಶೇ. 11
ರಾಹುಲ್ ಗಾಂಧಿ - ಶೇ. 8
ಸೋನಿಯಾ ಗಾಂಧಿ - ಶೇ. 5
ಮಾಯಾವತಿ - ಶೇ. 5

ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವ ಪಕ್ಷದಿಂದ ಶೀಘ್ರ, ಉತ್ತಮ ಪರಿಹಾರ?

ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವ ಪಕ್ಷದಿಂದ ಶೀಘ್ರ, ಉತ್ತಮ ಪರಿಹಾರ?

ಕಾಂಗ್ರೆಸ್ - ಶೇ.22
ಬಿಜೆಪಿ - ಶೇ. 47
ಆಮ್ ಆದ್ಮಿ ಪಕ್ಷ - ಶೇ. 7
ಯಾವ ಪಕ್ಷವೂ ಇಲ್ಲ - ಶೇ.11
ಇತರ ಪಕ್ಷಗಳು - ಶೇ. 7

ಪ್ರಧಾನಿಯಾಗಿ ಮೋದಿ ಕಾರ್ಯವೈಖರಿ ಹೇಗಿದೆ?

ಪ್ರಧಾನಿಯಾಗಿ ಮೋದಿ ಕಾರ್ಯವೈಖರಿ ಹೇಗಿದೆ?

ಅತ್ಯುತ್ತಮ - ಶೇ. 17
ಉತ್ತಮ - ಶೇ. 40
ಸಾಧಾರಣ - ಶೇ. 28
ಕಳಪೆ ಪ್ರದರ್ಶನ - ಶೇ. 13

ತನ್ನ ಸಹದ್ಯೋಗಿಗಳಿಂದ ಮೋದಿ ವರ್ಚಸ್ಸಿಗೆ ಕುಂದು ಬಂದಿದೆಯೇ?

ತನ್ನ ಸಹದ್ಯೋಗಿಗಳಿಂದ ಮೋದಿ ವರ್ಚಸ್ಸಿಗೆ ಕುಂದು ಬಂದಿದೆಯೇ?

ಹೌದು - ಶೇ. 34
ಇಲ್ಲ - ಶೇ. 30
ಸ್ವಲ್ಪ ಮಟ್ಟಿಗೆ ಕುಂದು ತಂದಿದೆ - ಶೇ. 20

ಲಲಿತ್ ಗೇಟ್

ಲಲಿತ್ ಗೇಟ್

ಲಲಿತ್ ಮೋದಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಹಾಯ ಮಾಡಿದ್ದರೇ ಎನ್ನುವ ಪ್ರಶ್ನೆಗೆ ಶೇ. 44 ಇಲ್ಲ ಎಂದು ಶೇ. 30 ಹೌದು ಎಂದು ಸಮೀಕ್ಷೆಯಲ್ಲಿ ಜನ ಅಭಿಪ್ರಾಯ ಪಟ್ಟಿದ್ದಾರೆ.

English summary
India still loves Narendra Modi as Prime Minister but not his NDA Government, India Today Group - Cicero latest survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X