ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಭಾರತದಿಂದ ಉಡಾವಣೆಯಾಗಲಿದೆ ವಿದೇಶಿ ಉಪಗ್ರಹ

By Vanitha
|
Google Oneindia Kannada News

ಶ್ರೀಹರಿಕೋಟ, ಸೆಪ್ಟೆಂಬರ್, 28 : ಭಾರತವು ವಿದೇಶದ 23 ಉಪಗ್ರಹಗಳನ್ನು ಉಡಾವಣೆ ಮಾಡುವ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದೆ ಎಂದು ಇಸ್ರೋ ಸಂಸ್ಥೆಯ ವಾಣಿಜ್ಯ ಸಂಸ್ಥೆಯಾದ ಆಂಟ್ರಿಕ್ಸ್ ಕಾರ್ಪೋರೇಷನ್ ಸಂಸ್ಥೆ ತಿಳಿಸಿದೆ.

ವಿದೇಶದ 23 ಉಪಗ್ರಹಗಳಲ್ಲಿ, ಎರಡು ಉಪಗ್ರಹಗಳು ಎರಡು ಪ್ರತ್ಯೇಕ ರಾಕೆಟ್ ಗಳಿಂದ ಉಡಾವಣೆಯಾಗಲಿದೆ. ಉಳಿದ 21 ಉಪಗ್ರಹಗಳನ್ನು ಭಾರತದ ದೊಡ್ಡ ಉಪಗ್ರಹಗಳು ಕೊಂಡೊಯ್ಯಲಿವೆ ಎಂದು ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.[ಇಸ್ರೋದಿಂದ ಮತ್ತೊಂದು ವಿಕ್ರಮ, ಆಸ್ಟ್ರೋಸ್ಯಾಟ್ ಉಡಾವಣೆ]

India to launch 23 foreign satellites

ಇಸ್ರೋ ಅಧಿಕಾರಿಗಳ ಪ್ರಕಾರ, ಮೊದಲ ಆರು ಅತಿದೊಡ್ಡ ಉಪಗ್ರಹಗಳು 410 ಕೆಜಿ ತೂಕವನ್ನು ಹೊಂದಿದ್ದು, ಇದು ಭಾರತದ ಚಲನವಲನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ. ಉಡಾವಣೆಯಾಗುವ ಎರಡು ಸೂಕ್ಷ್ಮ ಉಪಗ್ರಹಗಳು 130 ಮತ್ತು 80 ಕೆಜಿ ತೂಕ ಇರುತ್ತದೆ.

ಇಸ್ರೋ ಸಂಸ್ಥೆಯು 2016ರಲ್ಲಿ ಅಮೆರಿಕಾದಿಂದ ೫ ಸಣ್ಣ ಉಪಗ್ರಹಗಳು ಉಡಾವಣೆ ಮಾಡುತ್ತದೆ. ಇದರ ಜೊತೆಗೆ ಸಿಂಗಪೂರಿನ 6 ಉಪಗ್ರಹಗಳನ್ನು ಉಡಾವಣೆಗೊಳಿಸಲು ಇಸ್ರೋ ಚಿಂತನೆ ನಡೆಸಿದೆ ಎಂಬ ಮಾಹಿತಿಯನ್ನು ಆಂಟ್ರಿಕ್ಸ್ ಕಾರ್ಪೋರೇಷನ್ ಅಧಿಕಾರಿಗಳು ನೀಡಿದ್ದಾರೆ.

ಆಂಟ್ರಿಕ್ಸ್ ಕಾರ್ಪೋರೇಷನ್ ಈಗಾಗಲೇ 9 ಸಣ್ಣ ಉಪಗ್ರಹಗಳನ್ನು ಉಡಾವಣೆಗೊಳಿಸುವುದಕ್ಕೆ ಒಪ್ಪಿಗೆ ನೀಡಿದ್ದು, ಇದರಲ್ಲಿ ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯದ ಆಸ್ಟ್ರೋಸ್ಯಾಟ್ 4 ಉಪಗ್ರಹಗಳನ್ನು ಸೋಮವಾರ ಉಡಾವಣೆಗೊಳಿಸಿದೆ.

ಇಸ್ರೋ ಸಂಸ್ಥೆಯಾದ ಎ.ಎಸ್ ಕಿರಣ್ ಕುಮಾರ್, 'ನಾವು ಈ ವಿಚಾರವಾಗಿ ಅಮೆರಿಕಾದೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಜೊತೆಗೆ ಭಾರತದಿಂದ 51 ಉಪಗ್ರಹಗಳನ್ನು ಉಡಾವಣೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದು, ಸದ್ಯದಲ್ಲೇ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.

English summary
India has signed up contracts to launch 23 foreign satellites soon, Antrix Corporation is the commercial arm of Indian space agency Indian Space Research Organisation on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X