ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1

By Mahesh
|
Google Oneindia Kannada News

ನವದೆಹಲಿ,ಜ.20: ಪ್ರಾಣಿ ಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಸಂರಕ್ಷಿಸುವ ಹೊಣೆ ಹೊತ್ತವರು ಹೆಮ್ಮೆಪಡುವಂಥ ಅಂಕಿ ಅಂಶವನ್ನು ಕೇಂದ್ರ ಪರಿಸರ ಇಲಾಖೆ ನೀಡಿದೆ. ಇತ್ತೀಚಿನ ಗಣತಿ ಪ್ರಕಾರ ಭಾರತದಲ್ಲಿ ಪ್ರಸ್ತುತ ಹುಲಿಗಳ ಸಂಖ್ಯೆ ಎರಡು ಸಾವಿರವನ್ನು ದಾಟಿದೆ.

ದೇಶದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದಲ್ಲದೆ, ಬೇಟೆಗಾರರು, ಕಳ್ಳ ಸಾಗಾಣಿಕೆ ಭೀತಿಯನ್ನು ಸಮರ್ಥವಾಗಿ ಎದುರಿಸಿರುವ ಭಾರತ ಹುಲಿಗಳ ಸಂತತಿಯಲ್ಲಿ ಗಣನೀಯವಾಗಿ ಏರಿಕೆಯಾಗುವಂತೆ ನೋಡಿಕೊಂಡಿದೆ.

2014ರ ಗಣತಿಯ ಪ್ರಕಾರ ಭಾರತದಲ್ಲಿ 2,226 ಹುಲಿಗಳು ಅಸ್ತಿತ್ವದಲ್ಲಿವೆಯಂತೆ. 2010ರಲ್ಲಿದ್ದ ಹುಲಿಗಳ ಸಂಖ್ಯೆ 1706. ಏಳು ವರ್ಷಗಳ ಹಿಂದೆ ಹುಲಿಗಳ ಸಂಖ್ಯೆ 1400ಕ್ಕೆ ಕುಸಿತು ಆತಂಕ ಮೂಡಿಸಿತ್ತು. ವಿಶ್ವದ ಇತರೆಡೆಗಳಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೆ ಭಾರತದಲ್ಲಿ ಏರಿಕೆಯಾಗುತ್ತಿರುವುದು ಸಂತಸದ ಸುದ್ದಿ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತ ವಿಶ್ವದ ಶೇಕಡಾ 70ರಷ್ಟು ಹುಲಿಗಳ ಆವಾಸ ಸ್ಥಾನವಾಗಿದೆ. ಭಾರತದಲ್ಲಿರುವ ಹುಲಿಗಳ ಪೈಕಿ ಕರ್ನಾಟಕದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿರುವುದು ಕಂಡು ಬಂದಿದೆ.

India is now home to 70 per cent of the world's tigers Karnataka has 406

ಹುಲಿ ಸಂರಕ್ಷಣೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಣಾ ಕೇಂದ್ರ ಹಾಗೂ ತಮಿಳುನಾಡಿನ ಅನ್ನಾಮಲೈ ಹುಲಿ ಸಂರಕ್ಷಣಾ ಕೇಂದ್ರಗಳು ಪ್ರಶಸ್ತಿ ಪಡೆದಿವೆ. ಸ್ಥಳೀಯರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದಕ್ಕಾಗಿ ಕೇರಳದ ಪೆರಿಯಾರ್ ಸಂರಕ್ಷಣಾ ಕೇಂದ್ರ ಪ್ರಶಸ್ತಿ ಪಡೆದುಕೊಂಡಿದೆ. ಅದೇ ರೀತಿ ಮಹಾರಾಷ್ಟ್ರದ ಮೇಲ್ಘಾಟ್ ಸಂರಕ್ಷಣಾ ಕೇಂದ್ರವೂ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಸಚಿವ ಪ್ರಕಾಶ್ ಹೇಳಿದರು.

ಭಾರತದಲ್ಲಿ ವನ್ಯಮೃಗಗಳ ಹತ್ಯೆ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಹುಲಿಯಂಥ ಪ್ರಾಣಿಗಳ ಸಂರಕ್ಷಣೆಗಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. 2000ದ ಇಸವಿಯಲ್ಲಿ ಮೂರು ಸಾವಿರವಿದ್ದ ಹುಲಿಗಳು 2006ರ ವೇಳೆಗೆ ಸಂಪೂರ್ಣ ನಶಿಸಿ 1411ಕ್ಕೆ ಇಳಿದಿತ್ತು. ನಂಥರದಲ್ಲಿ ಕೈಗೊಂಡ ಕ್ರಮಗಳಿಂದಾಗಿ 2014ಕ್ಕೆ ಹುಲಿಗಳ ಸಂಖ್ಯೆ ಎರಡು ಸಾವಿರ ದಾಟಿದೆ ಎಂದು ಸಚಿವ ಪ್ರಕಾಶ್ ತಿಳಿಸಿದ್ದಾರೆ.

Tiger

ರಾಜ್ಯಗಳ ಹುಲಿಗಳ ಸಂಖ್ಯೆ ಇಂತಿದೆ
* ಕರ್ನಾಟಕ : 406
* ಉತ್ತರಾಖಂಡ : 340
* ತಮಿಳುನಾಡು : 229
* ಮಧ್ಯಪ್ರದೇಶ : 208
* ಮಹಾರಾಷ್ಟ್ರ :190
* ಬಂಗಾಳ : 76

ಕಳೆದ ಒಂದು ವರ್ಷಕಾಲ ಈ ಗಣತಿ, ಫೋಟೋ ತೆಗೆಯುವ ಕಾರ್ಯ ನಡೆಸಲಾಗಿದೆ. ಮನುಷ್ಯ ಮತ್ತು ಹುಲಿಗಳ ಸಂಘರ್ಷದ ಬಗ್ಗೆ ಹೇಳುವುದಾದರೆ, ಹುಲಿಗೆ ಬಲಿಯಾದವರ ಸಂಖ್ಯೆ ಕಡಿಮೆಯಾಗಿದೆ ಮತ್ತು ತಾಯಿಯಿಂದ ದೂರವಾದ ಹುಲಿಮರಿಗಳ ಬಗ್ಗೆಯೂ ಇಲಾಖೆ ಸೂಕ್ತಕ್ರಮ ತೆಗೆದುಕೊಂಡಿದೆ.

English summary
The number of tigers in India has seen a sharp rise to 2,226 tigers from just over 1,400 seven years ago, the environment ministry has said.Karnataka has the most number of tigers at 406.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X