ಅಮೆರಿಕಕ್ಕೆ ಟ್ರಂಪ್ ಇದ್ದಂಗೆ ಭಾರತದ ಪಾಲಿಗೆ ಮೋದಿ: ರಾಹುಲ್ ಟಾಂಗ್

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಈಚೆಗೆ ಅಧಿಕಾರ ಸ್ವೀಕರಿಸಿದರು. ಆದರೆ ಟ್ರಂಪ್ ಥರ ಎರಡೂವರೆ ವರ್ಷದಿಂದ ಭಾರತದಲ್ಲಿ ನರೇಂದ್ರ ಮೋದಿ ಇದ್ದಾರೆ ಎಂದು ರಾಹುಲ್ ಗಾಂಧಿ ಉತ್ತರಪ್ರದೇಶ ಚುನಾವಣೆ ಪ್ರಚಾರದಲ್ಲಿ ಟಾಂಗ್ ನೀಡಿದ್ದಾರೆ

Subscribe to Oneindia Kannada

ಬುಲಂದ್ ಷಹರ್ (ಉತ್ತರಪ್ರದೇಶ), ಫೆಬ್ರವರಿ 9: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಈಚೆಗೆ ಆಯ್ಕೆ ಅದರು. ಆದರೆ ಭಾರತಕ್ಕೆ 'ಟ್ರಂಪ್' ಮಾದರಿಯಲ್ಲಿ ನರೇಂದ್ರ ಮೋದಿ ಎರಡೂವರೆ ವರ್ಷದಿಂದ ಇದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಬುಲಂದ್ ಷಹರ್ ನ ಚುನಾವಣಾ ಪ್ರಚಾರದ ವೇಳೆ ಹೇಳಿದರು.

ಸಮಾಜದ ಎಲ್ಲ ವರ್ಗದವರೂ ನೋಟು ನಿಷೇಧದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅಮೆರಿಕನ್ನರು ಟ್ರಂಪ್ ನ ಈಚೆಗೆ ಆರಿಸಿದರು. ಆದರೆ ಭಾರತದಲ್ಲಿ ಟ್ರಂಪ್ ಮಾದರಿಯಲ್ಲಿ ಮೋದಿ ಎರಡೂವರೆ ವರ್ಷದಿಂದ ಇದ್ದಾರೆ ಎಂದು ಹೀಗಳೆದರು. ಅಪನಗದೀಕರಣ ಕಾರಣಕ್ಕೆ ರೈತರು ಗೊಬ್ಬರ, ಆಲೂಗಡ್ಡೆಗೆ ಬೀಜ ಖರೀದಿಸಲು ಆಗುತ್ತಿಲ್ಲ ಎಂದರು.[ರೈನ್ ಕೋಟ್ ಹಾಕ್ಕೊಂಡು ಸ್ನಾನ ಮಾಡೋದು ಸಿಂಗ್ ಗೆ ಗೊತ್ತು: ಮೋದಿ]

'India Had A Donald Trump In The Form Of Narendra Modi'

ನೋಟು ಬದಲಾವಣೆಗೆ ಸರತಿಯಲ್ಲಿ ನಿಂತಾಗ ಎಷ್ಟೋ ಮಂದಿ ಪ್ರಾಣ ಬಿಟ್ಟರು. ಆ ಸಂದರ್ಭದಲ್ಲಿ ಸಾವನ್ನಪ್ಪಿದ ಯಾರಿಗೂ ಕೇಂದ್ರ ಸರಕಾರ ಪರಿಹಾರ ನೀಡಲಿಲ್ಲ ಎಂದರು. ಇನ್ನು ಕುಶಲಕರ್ಮಿಗಳು, ಸಣ್ಣ ಪ್ರಮಾಣದ ತಯಾರಕರು ತಯಾರಿಸುವ ವಸ್ತುಗಳ ಮೇಲೆ ಮೇಡ್ ಇನ್ ಇಂಡಿಯಾ ಎಂಬುದರ ಬದಲು ಆ ಪಟ್ಟಣ ಅಥವಾ ನಗರಗಳ ಹೆಸರಿರಲಿ ಎಂದರು.

English summary
Taking a dig at Prime Minister Narendra Modi, Congress Vice President Rahul Gandhi said on Wednesday in Uttar Pradesh, that the United States elected Donald Trump as President, but India had a "Trump" in the form of Narendra Modi two and a half years ago.
Please Wait while comments are loading...