ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಜತೆಗೆ ಸೇರಿ ಕ್ಷಿಪಣಿ ಅಭಿವೃದ್ಧಿಗೆ 17 ಸಾವಿರ ಕೋಟಿ ಒಪ್ಪಂದ

|
Google Oneindia Kannada News

ನವದೆಹಲಿ, ಫೆಬ್ರವರಿ 24: ನೆಲದ ಮೇಲಿಂದ ವಾಯು ದಾಳಿ ನಡೆಸುವಂಥ ಮಧ್ಯಮ ದೂರದ ಕ್ಷಿಪಣಿ ಅಭಿವೃದ್ಧಿಗೆ ಇಸ್ರೇಲ್ ಜತೆಗೆ ಭಾರತವು 17 ಸಾವಿರ ಕೋಟಿ ರುಪಾಯಿಯ ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದೆ. ಇಸ್ರೇಲ್ ಜತೆಗಿನ ಸೇನಾ ಒಪ್ಪಂದದ ಪೈಕಿ ಮಹತ್ತರವಾದುದು. ಈ ಯೋಜನೆಯನ್ನು ಡಿಆರ್ ಡಿಒ ಮತ್ತು ಇಸ್ರೇಲಿ ಏರ್ ಕ್ರಾಫ್ಟ್ ಇಂಡಸ್ಟ್ರಿ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಒಪ್ಪಂದಕ್ಕೆ ಹಸಿರು ನಿಶಾನೆ ತೋರಲಾಗಿದೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ರಕ್ಷಣಾ ವಿಚಾರವಾಗಿ ನಡೆದ ಸಭೆಯಲ್ಲಿ ಬುಧವಾರ ಕ್ಷಿಪಣಿ ಒಪ್ಪಂದಕ್ಕೆ ಒಪ್ಪಿಗೆಯ ಮುದ್ರೆ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.[ಭಾರತದ ಕ್ಷಿಪಣಿ ತಾಕತ್ತಿನ ಮುಂದೆ ಪಾಕಿಸ್ತಾನದ ಬಾಬರ್ ಬಚ್ಚಾ!]

Missile

ಇಸ್ರೇಲ್ ನಿಂದ ದೊಡ್ಡ ಪ್ರಮಾಣದಲ್ಲಿ ಮಿಲಿಟರಿ ಶಸ್ತ್ರಾಸ್ತ್ರ ಖರೀದಿಸುವ ದೇಶ ಭಾರತ. ಕಳೆದ ಹಲವು ವರ್ಷಗಳಿಂದ ಈ ರೀತಿ ಮಿಲಿಟರಿ ಸಾಧನ, ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದರೂ ಹೀಗೆ ಬಹಿರಂಗವಾಗಿ ನಡೆಯುತ್ತಿರಲಿಲ್ಲ. ಇಸ್ರೇಲ್ ನ ರಕ್ಷಣಾ ಸಚಿವಾಲಯದ ಭಾಗವಾಗಿರುವ ಡಿಫೆನ್ಸ್ ಕಂಟ್ರೋಲ್ಸ್ ಏಜೆನ್ಸಿ ಕಳೆದ ವಾರವಷ್ಟೇ ಅಲ್ಲಿನ ಜನಪ್ರತಿನಿಧಿಗಳಿಗೆ ಸಂದೇಶ ರವಾನಿಸಿದೆ.

ಇಸ್ರೇಲ್ ದೇಶವು ಶಸ್ತ್ರಾಸ್ತ್ರ ಹಾಗೂ ರಕ್ಷಣಾ ಉಪಕರಣಗಳ ಆಮದು ನಿಯಮಾವಳಿಗಳನ್ನು ಸಡಿಲಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದೆ.

English summary
A Rs 17,000 crore deal has been cleared by the government for jointly developing with Israel a medium-range surface-to-air missile (MR-SAM) for the army, reflecting India's fast growing defence ties with the Jewish nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X