ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3,600 ಕೋಟಿ ರು ಮೌಲ್ಯದ ಡೀಲ್ ಕ್ಯಾನ್ಸಲ್

By Mahesh
|
Google Oneindia Kannada News

ನವದೆಹಲಿ, ಜ.2: :ವಾಯುಪಡೆಯ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಮೂಲದ ಅಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿ ನೀಡಿದ್ದ ವಿವರಣೆ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ 3,600 ಕೋಟಿ ರುಪಾಯಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದವನ್ನು ಭಾರತ ಸರ್ಕಾರ ರದ್ದು ಮಾಡಿದೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿ ಹೆಲಿಕಾಪ್ಟರ್ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರವೆಸಗಿ ಪ್ರಮಾಣಿಕತೆಗೆ ಧಕ್ಕೆ ಉಂಟುಮಾಡಿರುವುದರಿಂದ ಒಪ್ಪಂದ ರದ್ದುಮಾಡಿರುವುದಾಗಿ ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.

ವಿವಿಐಪಿಗಳ ಪ್ರಯಾಣಕ್ಕಾಗಿ ವಾಯುಪಡೆಗೆ 12 ಹೆಲಿಕಾಪ್ಟರ್ ಖರೀದಿಗೆ ಸರ್ಕಾರ ಟೆಂಡರ್ ಕರೆಯಲಾಗಿತ್ತು. ಅಮೆರಿಕ, ಇಟಲಿ ಸೇರಿದಂತೆ ಪ್ರತಿಷ್ಠಿತ ರಾಷ್ಟ್ರಗಳ ಕಂಪನಿಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದವು. ಆದರೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿ ಕೆಲ ರಾಜಕಾರಣಿಗಳಿಗೆ 360 ಕೋಟಿ ರೂಪಾಯಿ ಲಂಚ ನೀಡಿ ಟೆಂಡರ್ ಪಡೆದಿತ್ತು.[ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

ಫೆಬ್ರವರಿ 2013ರಂದು ಇಟಲಿ ಪೊಲೀಸರು ಆಗಸ್ಟಾ ಕಂಪನಿ ಸಿಇಒರನ್ನು ಭ್ರಷ್ಟಾಚಾರದ ಆರೋಪದಡಿ ಬಂಧಿಸಿದ್ದರು. ಇದೇ ಸಂದರ್ಭ ಭಾರತ ಸರ್ಕಾರ ಸಹ ಒಪ್ಪಂದದಂತೆ ಕಂಪನಿಗೆ ಪಾವತಿಸಬೇಕಾದ 3,600 ಕೋಟಿ ರೂಪಾಯಿಯನ್ನ ತಡೆಹಿಡಿದಿತ್ತು. ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ವಿರುದ್ಧವೂ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿತ್ತು.[ವಾಯುಸೇನೆ ಮಾಜಿ ಮುಖ್ಯಸ್ಥ ತ್ಯಾಗಿ ಮೇಲೆ ಎಫ್ ಐಆರ್]

India scraps tainted AgustaWestland VVIP chopper deal

ಅಕ್ಟೋಬರ್ನಲ್ಲಿ ಅಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿಗೆ ವಿವರಣೆ ಕೇಳಿ ರಕ್ಷಣಾ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ, ನೋಟಿಸ್ನಲ್ಲಿ ಒಪ್ಪಂದ ರದ್ದುಮಾಡುವ ಕುರಿತು ಪ್ರಸ್ತಾಪಿಸಿದ್ದ ರಕ್ಷಣಾ ಇಲಾಖೆ, ನವೆಂಬರ್ 26ರವರೆಗೆ ಉತ್ತರ ನೀಡುವಂತೆ ಸೂಚಿಸಿತ್ತು.

ಆದರೆ, ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿ ತಾನು ಯಾವುದೇ ಅಕ್ರಮ ಎಸಗಿಲ್ಲ ಎಂಬ ಉದ್ಧಟತನದ ಉತ್ತರ ಕೊಟ್ಟಿತ್ತು. ಅಲ್ಲದೇ, ಭಾರತ ಸರ್ಕಾರ ಒಪ್ಪಂದ ರದ್ದು ಮಾಡುವ ಭಯದಿಂದ ಮಧ್ಯಸ್ಥಿಕೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಸ್ತಾಪ ಇಟ್ಟಿತ್ತು. ಆದರೆ, ಇದು ವ್ಯವಹಾರದ ಪ್ರಾಮಾಣಿಕತೆಗೆ ಧಕ್ಕೆ ತಂದ ವಿಷಯವಾಗಿರುವುದರಿಂದ ಮಧ್ಯಸ್ಥಿಕೆ ಇತ್ಯರ್ಥಕ್ಕೆ ಭಾರತ ನಿರಾಕರಿಸಿತ್ತು.

English summary
As the Lok Sabha election is knocking on the door, Manmohan Singh government led by Congress seems to have played one of its trump cards. India has cancelled the Rs 3,600 crore VVIP chopper deal with British manufacturer AgustaWestland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X