ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಮೂಲದ ಸುಂದರ್ ಪಿಚೈ ಗೂಗಲ್ ನೂತನ ಸಿಇಒ

|
Google Oneindia Kannada News

ನವದೆಹಲಿ, ಆಗಸ್ಟ್ 11 : ಭಾರತೀಯ ಮೂಲದ ಸುಂದರ್ ಪಿಚೈ ಅವರು ಗೂಗನ್‌ನ ನೂತನ ಸಿಇಒ ಆಗಿ ಆಯ್ಕೆಯಾಗಿದ್ದಾರೆ. ಸುಂದರ್ ಮೂಲತಃ ಚೆನ್ನೈನವರಾಗಿದ್ದು ಎರಡು ವರ್ಷಗಳ ಹಿಂದೆ ಗೂಗಲ್ ಸೇರಿದ್ದರು.

ಗೂಗಲ್ ಕಂಪನಿಯ ಸ್ಥಾಪಕ ಲ್ಯಾರಿ ಪೇಜ್ ಅವರು ಮಂಗಳವಾರ ಸುಂದರ್ ಪಿಚೈ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ. ಹೊಸ ಸಿಇಒ ನೇಮಕ ಮಾಡುವ ಜೊತೆಗೆ ಕಂಪನಿಯು ಇಂದು ಹೊಸ ಸಹ ಸಂಸ್ಥೆಯಾದ 'ಆಲ್ಫಬೆಟ್‌' ಕಂಪನಿಯನ್ನು ಆರಂಭಿಸಿದೆ.

Sundar Pichai

43 ವರ್ಷದ ಸುಂದರ್ ಪಿಚೈ ಅವರು ಚೆನ್ನೈನವರು. ಸುಂದರ್‌ ಪಿಚೈ ಅವರು ಗೂಗಲ್‌ನ ಪ್ರಮುಖ ರುವಾರಿಯಾಗಲಿದ್ದಾರೆ. ಇದರಿಂದ ಗೂಗಲ್‌ನಲ್ಲಿ ವಿಶೇಷ ಅವಕಾಶಗಳತ್ತ ಗಮನ ಹರಿಸಲು ಸಹಕಾರಿಯಾಗಿದೆ ಎಂದು ಲ್ಯಾರಿ ಪೇಜ್ ಹೇಳಿದ್ದಾರೆ. [ಟ್ರಾಫಿಕ್ ಸಿಗ್ನಲ್ ಲೈಟಿಗೆ ಗೂಗಲ್ ಡೂಡ್ಲ್ ನಮನ]

ಸುಂದರ್‌ ಪಿಚೈ ಅವರು ಮೊದಲು ಕಂಪನಿಯ ಇಂಟರ್‌ ನೆಟ್‌ ವ್ಯವಹಾರವನ್ನು ಉನ್ನತಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಾಡಕ್ಟ್‌ ಮತ್ತು ಇಂಜಿನಿಯರಿಂಗ್‌ ವಿಭಾಗದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.

ಮೈಕ್ರೋಸಾಫ್ಟ್ ಸಿಇಓ ಸತ್ಯ ನಡೆಲ್ಲಾ ಅವರು ಸುಂದರ್‌ ಪಿಚೈ ಅವರಿಗೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಆ್ಯಪಲ್ ಸಿಇಒ ಟಿಮ್ ಕುಕ್ ಅವರು ಸಹ ಸುಂದರ್ ಅವರನ್ನು ಅಭಿನಂದಿಸಿ ಟ್ವಿಟ್ ಮಾಡಿದ್ದಾರೆ.

English summary
India born Sundar Pichai was named CEO of Google on Tuesday. 43-year-old Sundar yet another India-born officer to lead a major global technology corporation after Microsoft's Satya Nadella.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X