ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿತಂಟೆ ಕೆದಕುತ್ತಿರುವ ಚೀನಾಗೆ ಪ್ರಧಾನಿ ಮೋದಿ ನೀಡಿದ ಭರ್ಜರಿ ಟಾಂಗ್?

ಭಾರತ ಮತ್ತು ಚೀನಾ ನಡುವೆ ದೋಕ್ಲಾಂ ಗಡಿ ವಿಚಾರದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ, ಚೀನಾದ ಅತಿದೊಡ್ಡ ಔಷಧೀಯ ಕಂಪೆನಿಯ ಒಪ್ಪಂದಕ್ಕೆ ಬ್ರೇಕ್ ಹಾಕಿದ್ದಾರೆ.

|
Google Oneindia Kannada News

ನವದೆಹಲಿ, ಆ 2: ಸಿಕ್ಕಿಂ ಗಡಿ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ, ಚೀನಾದ ಅತಿದೊಡ್ಡ ಔಷಧೀಯ ಕಂಪೆನಿಯ ಒಪ್ಪಂದಕ್ಕೆ ಬ್ರೇಕ್ ಹಾಕಿದ್ದಾರೆ.

ಶಾಂಘೈ ಫೋಸನ್ ಫಾರ್ಮಾಸ್ಯೂಟಿಕಲ್ ಕಂಪೆನಿ ಲಿಮಿಟೆಡ್ ಸಂಸ್ಥೆ, ಭಾರತದ ಔಷಧೀಯ ಕಂಪೆನಿಯನ್ನು 1.3 ಬಿಲಿಯನ್ ಅಮೆರಿಕನ್ ಡಾಲರಿಗೆ (ಸುಮಾರು 8,328 ಕೋಟಿ ರೂಪಾಯಿ) ಖರೀದಿಸಲು ಮುಂದಾಗಿತ್ತು.

ಚೀನಾದಲ್ಲಿ ಅಜಿತ್ ದೋವಲ್, ಧೋಕ್ಲಾಂ ಸಮಸ್ಯೆಯತ್ತ ಎಲ್ಲರ ಚಿತ್ತಚೀನಾದಲ್ಲಿ ಅಜಿತ್ ದೋವಲ್, ಧೋಕ್ಲಾಂ ಸಮಸ್ಯೆಯತ್ತ ಎಲ್ಲರ ಚಿತ್ತ

ಹೈದರಾಬಾದ್ ಮೂಲದ ಗ್ಲ್ಯಾಂಡ್ ಫಾರ್ಮಾ ಸಂಸ್ಥೆಯ ಶೇ. 86% ಷೇರನ್ನು ಭಾರೀ ಮೊತ್ತಕ್ಕೆ ಖರೀದಿಸಲು ಚೀನಾದ ಸಂಸ್ಥೆ ಎಲ್ಲಾ ಮಾತುಕತೆ ಮುಗಿಸಿ, ಕೇಂದ್ರದ ಅನುಮತಿಗೆ ಕಾಯುತ್ತಿತ್ತು. ಈ ಒಪ್ಪಂದಕ್ಕೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಮಿತಿ ಅನುಮತಿ ನಿರಾಕರಿಸುವ ಮೂಲಕ ಚೀನಾದ ಸಂಸ್ಥೆಗೆ ಬಹುದೊಡ್ಡ ಶಾಕ್ ನೀಡಿದೆ.

2007-2017ರ ಮಧ್ಯೆ 37 ಬಾರಿ ಭಾರತಕ್ಕೆ ಕಾಲಿಟ್ಟಿತ್ತು ಚೀನಾ ಸೇನೆ!2007-2017ರ ಮಧ್ಯೆ 37 ಬಾರಿ ಭಾರತಕ್ಕೆ ಕಾಲಿಟ್ಟಿತ್ತು ಚೀನಾ ಸೇನೆ!

ದೋಕ್ಲಾಂ ಗಡಿವಿಚಾರ ಕೆದಕತ್ತಿರುವ ಚೀನಾಗೆ, ಕೇಂದ್ರದ ಈ ನಿರ್ಧಾರ ಪ್ರಧಾನಿ ಮೋದಿಯ ಅತ್ಯಂತ ಜಾಣ್ಮೆಯ ತಿರುಗೇಟು ಎಂದು ಉಲ್ಲೇಖಿಸಲಾಗುತ್ತಿದೆ. ಆದರೆ ಭಾರತ, ದೋಕ್ಲಾಂ ವಿಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಚೀನಾದ ಅತಿಕ್ರಮಣ ಯತ್ನ ವಿಫಲಗೊಳಿಸಿದ ಭಾರತೀಯ ಸೈನಿಕರುಚೀನಾದ ಅತಿಕ್ರಮಣ ಯತ್ನ ವಿಫಲಗೊಳಿಸಿದ ಭಾರತೀಯ ಸೈನಿಕರು

ಚೀನಾದ ವಸ್ತುಗಳಿಗೆ ಮತ್ತು ಕಂಪೆನಿಗಳಿಗೆ ಉತ್ತಮ ಮಾರುಕಟ್ಟೆಯಾಗಿರುವ ಭಾರತದ ಈ ನಿರ್ಧಾರ ಮುಂದಿನ ದಿನಗಳಲ್ಲಿ ತೀವ್ರತೆ ಪಡೆದುಕೊಂಡಲ್ಲಿ, ಚೀನಾದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿಲ್ಲದಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ..

ವಾಸ್ತವಿಕ ಕಾರಣಗಳಿಂದ ಅನುಮತಿ ನೀಡಲು ಸಾಧ್ಯವಿಲ್ಲ ಎಂದ ಕೇಂದ್ರ

ವಾಸ್ತವಿಕ ಕಾರಣಗಳಿಂದ ಅನುಮತಿ ನೀಡಲು ಸಾಧ್ಯವಿಲ್ಲ ಎಂದ ಕೇಂದ್ರ

ಕೆಲವೊಂದು ವಾಸ್ತವಿಕ ಕಾರಣಗಳಿಂದಾಗಿ (genuine concerns) ಶಾಂಘೈ ಫೋಸನ್ ಮತ್ತು ಗ್ಲ್ಯಾಂಡ್ ಫಾರ್ಮಾ ಡೀಲಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಆರ್ಥಿಕ ವ್ಯವಹಾರಗಳ ಸಮಿತಿ ಸ್ಪಷ್ಟ ಪಡಿಸಿದೆ. ಆದರೆ ಈ ಒಪ್ಪಂದಕ್ಕೆ ಕೇಂದ್ರ ನಿರಾಕರಿಸಿರುವುದಕ್ಕೂ, ದೋಕ್ಲಾಂ ವಿವಾದಕ್ಕೆ ಸಂಬಂಧವಿಲ್ಲ ಎಂದು ಮೋದಿ ಅಧ್ಯಕ್ಷತೆಯ ಸಮಿತಿ ಸ್ಪಷ್ಟ ಪಡಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಹುಕೋಟಿ ಉದ್ಯಮಿ ಗೂ ಗಾಂಗ್ ಚಾಂಗ್ ಒಡೆತನದ ಶಾಂಘೈ ಫೋಸನ್ ಸಂಸ್ಥೆ

ಬಹುಕೋಟಿ ಉದ್ಯಮಿ ಗೂ ಗಾಂಗ್ ಚಾಂಗ್ ಒಡೆತನದ ಶಾಂಘೈ ಫೋಸನ್ ಸಂಸ್ಥೆ

ಚೀನಾದ ಬಹುಕೋಟಿ ಉದ್ಯಮಿ ಗೂಗಾಂಗ್ ಚಾಂಗ್ ಒಡೆತನದ ಶಾಂಘೈ ಫೋಸನ್ ಸಂಸ್ಥೆಯ ಡೀಲಿಗೆ ಕೇಂದ್ರ ಸರಕಾರ ಅನುಮತಿ ನೀಡಿದ್ದಲ್ಲಿ, ಮೋದಿಯವರ ವಿದೇಶಿ ಬಂಡವಾಳ ಪ್ರಯತ್ನಕ್ಕೆ ಮತ್ತಷ್ಟು ಬಲಬರುತ್ತಿತ್ತು ಎಂದು ಚೀನಾದ ಮಾಧ್ಯಮಗಳು, ಮೋದಿ ಸರಕಾರದ ಕ್ರಮವನ್ನು ಟೀಕಿಸಿವೆ.

ಕೇಂದ್ರ ಒಪ್ಪಂದಕ್ಕೆ ಅನುಮತಿ ನಿರಾಕರಿಸಿರುವ ಬಗ್ಗೆ ಮಾಹಿತಿಯಿಲ್ಲ

ಕೇಂದ್ರ ಒಪ್ಪಂದಕ್ಕೆ ಅನುಮತಿ ನಿರಾಕರಿಸಿರುವ ಬಗ್ಗೆ ಮಾಹಿತಿಯಿಲ್ಲ

ಕೇಂದ್ರ ಸರಕಾರ ಒಪ್ಪಂದಕ್ಕೆ ಅನುಮತಿ ನಿರಾಕರಿಸಿರುವ ಬಗ್ಗೆ ಯಾವುದೇ ಮಾಹಿತಿ ನಮಗಿಲ್ಲ. ಎಫ್ಐಪಿಬಿ ( Foreign Investment Promotion Board) ಇದೇ ಮಾರ್ಚ್ ತಿಂಗಳಲ್ಲಿ ಡೀಲಿಗೆ ಅನುಮತಿ ಸೂಚಿಸಿತ್ತು. ಈ ಒಪ್ಪಂದಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಗ್ಲ್ಯಾಂಡ್ ಫಾರ್ಮಾ ಸಂಸ್ಥೆಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಯುದ್ದಕ್ಕೆ ಸಿದ್ದರಾಗಿ ಎಂದು ಚೀನಾ ಅಧ್ಯಕ್ಷರ ಹೇಳಿಕೆ

ಯುದ್ದಕ್ಕೆ ಸಿದ್ದರಾಗಿ ಎಂದು ಚೀನಾ ಅಧ್ಯಕ್ಷರ ಹೇಳಿಕೆ

ಯುದ್ದಕ್ಕೆ ಸಿದ್ದರಾಗಿ ಎಂದು ಚೀನಾ ಅಧ್ಯಕ್ಷರು ತಮ್ಮ ಸೇನಾಪಡೆಗೆ ಕರೆನೀಡಿದ ನಂತರ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹದೆಗೆಟ್ಟಿದೆ. ಚೀನಾದ ಯಾವುದೇ ಬೆದರಿಕೆಗೆ ಜಗ್ಗದ ಭಾರತ ದೋಕ್ಲಾಂನಿಂದ ಸೈನಿಕರನ್ನು ಹಿಂದಕ್ಕೆ ಪಡೆಯದೇ ಸಡ್ಡುಹೊಡೆಯುತ್ತಿದೆ.

ಭಾರತದ ಯಾವ ಪ್ರಧಾನಿಯೂ ನೀಡದಂತಹ ಭರ್ಜರಿ ಟಾಂಗ್

ಭಾರತದ ಯಾವ ಪ್ರಧಾನಿಯೂ ನೀಡದಂತಹ ಭರ್ಜರಿ ಟಾಂಗ್

ಎರಡು ರಾಷ್ಟ್ರಗಳ ನಡುವಿನ ಬಿಗುವಿನ ಈ ವಾತಾವರಣದಲ್ಲಿ ಬಹುಕೋಟಿ ಒಪ್ಪಂದಕ್ಕೆ ಕೇಂದ್ರ ನಿರಾಕರಿಸುವ ಮೂಲಕ, ಭಾರತದ ಯಾವ ಪ್ರಧಾನಿಯೂ ನೀಡದಂತಹ ಭರ್ಜರಿ ಟಾಂಗ್ ಅನ್ನು ಚೀನಾಗೆ ನರೇಂದ್ರ ಮೋದಿ ನೀಡಿದ್ದಾರೆಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.

English summary
Government of India rejected Shanghai Fosun Pharmaceutical Group proposed $1.3 billion dollor takeover of an Indian drugmaker Gland Pharma. As per economic experts, this is new level of smart financial diplomatic attack on Chinese companies by any Indian government so far in the history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X