ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಸಿ ನೆಟ್ಟು ಹೆಣ್ಣು ಮಗುವಿನ ಜನನ ಸ್ವಾಗತಿಸುವ ಗ್ರಾಮಸ್ಥರು

By Vanitha
|
Google Oneindia Kannada News

ಜೈಪುರ, ಆಗಸ್ಟ್, O6 : ಅನಾದಿಕಾಲದಿಂದಲೂ ಹೆಣ್ಣನ್ನು ಆದಿ ದೇವತೆ, ಶಕ್ತಿ ದೇವತೆ ಎಂದು ಪೂಜನೀಯ ಸ್ಥಾನದಲ್ಲಿ ಇರಿಸಿ ಧನ್ಯತಾ ಭಾವ ತೋರುತ್ತಾ. ಹೆಜ್ಜೆ ಹೆಜ್ಜೆಗೂ ಕಡೆಗಣನೆ, ತಾತ್ಸಾರ ಮಾಡುತ್ತಲೇ, ಅಸಮಾನತೆ ತೋರಿಲ್ಲವೆಂಬ ಮುಗ್ಧತೆಯ ಪರದೆಯನ್ನು ಜೊತೆಯಲ್ಲಿಯೇ ಇರಿಸಿಕೊಂಡು ಬೆಳೆದು ಬಂದಿದೆ ಪುರುಷ ಪ್ರಧಾನ ಸಮಾಜ.

ಹೌದು...ಹೆಣ್ಣು 'ಮಗುವಿದ್ದಾಗ ತಂದೆ ಆಶ್ರಯದಲ್ಲಿ, ಯೌವನದಲ್ಲಿ ಗಂಡನ ನೆರಳಿನಲ್ಲಿ, ಮುಪ್ಪಿನಲ್ಲಿ ಗಂಡು ಮಕ್ಕಳ ಮನೆಯಲ್ಲಿ ನೆಲೆಸಬೇಕು' ಎಂದು ಹೇಳುತ್ತಾ ಅವಳಲ್ಲಿ ಅಸುರಕ್ಷತಾ ಭಾವ ತುಂಬಿದ ಪುರುಷ ಸಮಾಜ, ಹೆಣ್ಣು ಭ್ರೂಣ ಹತ್ಯೆ, ಹಿಂಸೆ-ಶೋಷಣೆ, ಲೈಂಗಿಕ ದೌರ್ಜನ್ಯದಂತಹ ಹೀನ ಕೃತ್ಯಗಳನ್ನು ಎಸಗುತ್ತಾ ತಮ್ಮನ್ನು ತಾವೇ ಮೇರು ಸ್ಥಾನದಲ್ಲಿರಿಸಿಕೊಂಡು ಹೆಣ್ಣು ಮಕ್ಕಳನ್ನು ನೋವಿನ ಕೂಪಕ್ಕೆ ತಳ್ಳುತ್ತಲೇ ಬಂದಿದೆ.[ಹೆಣ್ಣು ಮಕ್ಕಳೆ ಹುಟ್ಟದಿರಲಿ ಎಂದ ಮಹಿಳಾ ಐಎಎಸ್ ಅಧಿಕಾರಿ]

Incredible one girl child and Rajastan villagers plant 111 trees

ಒಟ್ಟಿನಲ್ಲಿ ಸಾಂಪ್ರದಾಯಿಕ ಸಮಾಜದ ಎಲ್ಲ ನಿಬಂಧನೆಗಳನ್ನು ಅವುಡುಗಚ್ಚಿ ಸಹಿಸಿಕೊಂಡು ಬಾಳ ಬಂಡಿ ನಡೆಸುವ ಹೆಣ್ಣು ಮಕ್ಕಳು ಹುಟ್ಟಿದಾಗ, ಮುಖ ಕಿವುಚುವ ಪುರುಷ ಪ್ರಧಾನ ಸಮಾಜದ ನಡುವೆ ಎಲ್ಲರಿಗೂ ಮಾದರಿಯಾಗುವ ಗ್ರಾಮ ಇಲ್ಲಿದೆ.

ಮೇಲೆ ಹೇಳಿದ ಎಲ್ಲದಕ್ಕೂ ಅಪವಾದವಾಗಿ ರಾಜಸ್ಥಾನದ ಪಿಪ್ಲಾಂತ್ರಿ ಗ್ರಾಮವಿದ್ದು, ಇಲ್ಲಿ ಹೆಣ್ಣು ಮಗು ಜನಿಸಿದರೆ ಇಡೀ ಗ್ರಾಮದ ಮಂದಿ ಒಗ್ಗಟ್ಟಾಗಿ ಗಿಡವನ್ನು ನೆಟ್ಟು ಹಾಡು, ಹಸೆ ಮೂಲಕ ಸಂಭ್ರಮಿಸುತ್ತಾರೆ. ಜೊತೆಗೆ ಆ ಮಗುವಿನ ಹೆಸರಲ್ಲಿ 31,000 ರೂ ಸಂಗ್ರಹಿಸಿ ಬದುಕಿಗೊಂದು ನೆಲೆ ಮಾಡಿಕೊಡುವತ್ತಾ ಗಮನ ಹರಿಸುತ್ತಾರೆ.

ಸಸಿ ನೆಡುವ ಆಚರಣೆಯಲ್ಲಿ ಕೇವಲ ಒಂದೋ ಅಥವಾ ಎರಡೋ ಸಸಿಗಳನ್ನು ಮಾತ್ರ ನೆಡದೆ, ಬರೋಬ್ಬರಿ 111 ಸಸಿಗಳನ್ನು ನೆಟ್ಟು, ಹೆಣ್ಣು ಮಗುವಿನ ಜನನವನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸುತ್ತಾರೆ. ಕಳೆದ 20 ವರ್ಷಗಳಿಂದ ಈ ಸಂಭ್ರಮಾಚರಣೆ ಇದ್ದು ಗ್ರಾಮಸ್ಥರು ಇದರ ಮೂಲಕ ತಮ್ಮ ಪರಿಸರ ಕಾಳಜಿಯನ್ನು ಮೆರೆದಿದ್ದಾರೆ.

ಇಲ್ಲಿನ ಸರ್ಕಾರ ದಾಖಲೆಗಳ ಪ್ರಕಾರ ಇದುವರೆಗೂ 10ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ಇದರ ಜೊತೆಗೆ ಹೆಣ್ಣು ಮಗು ಜನಿಸಿದಕ್ಕೆ ಈ ಗ್ರಾಮಸ್ಥರು ಒಗ್ಗಟ್ಟಾಗಿ 31,000 ರೂ ಸಂಗ್ರಹಿಸಿ ಆ ಮಗುವಿನ ಹೆಸರಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡುತ್ತಾರೆ. ಇದರಲ್ಲಿ 21,000 ರೂನ್ನು ಗ್ರಾಮಸ್ಥರು ಸಂಗ್ರಹ ಮಾಡಿದರೆ, 10,000ರೂನ್ನು ಹೆಣ್ಣುಮಗುವಿನ ಪೋಷಕರಿಂದ ಸಂಗ್ರಹಿಸುತ್ತಾರೆ.

English summary
Incredible one girl child and Rajastan villagers plant 111 trees and collects a 31,000rs the born child name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X