ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಿಮೆ ಗಳಿಕೆದಾರರು, ಬಾಡಿಗೆ ಮನೆಯಲ್ಲಿರುವವರಿಗೆ ಖುಷಿ

By Prasad
|
Google Oneindia Kannada News

ನವದೆಹಲಿ, ಫೆಬ್ರವರಿ 29 : ಕಡಿಮೆ ಆದಾಯ ಗಳಿಸುವ ನೌಕರರ ಮೊಗದಲ್ಲಿ ವಿತ್ತ ಸಚಿವ ಕಿರುನಗೆ ತಂದಿದ್ದರೆ, ಮಧ್ಯಮ ಮತ್ತು ಶ್ರೀಮಂತ ವರ್ಗದವರ ಕಣ್ಣು ಕೆಂಪಾಗುವಂತೆ ಅರುಣ್ ಜೇಟ್ಲಿ ಮಾಡಿದ್ದಾರೆ. ಫೆ.29ರಂದು ಮಂಡಿಸಿದ ಕೇಂದ್ರ ಬಜೆಟ್ಟಿನಲ್ಲಿ ಕಡಿಮೆ ಆದಾಯ ಗಳಿಸುವವರಿಗಾಗಿ ಪ್ರಸ್ತಾವನೆಗಳು ಕೆಳಗಿನಂತಿವೆ.

1) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87ಎ ಅಡಿಯಲ್ಲಿ ಆದಾಯ ತೆರಿಗೆ ಮಿತಿಯನ್ನು 2,000ದಿಂದ 5,000ಕ್ಕೆ ಏರಿಸಲಾಗಿದೆ. ವಾರ್ಷಿಕ 5 ಲಕ್ಷ ರು.ಗಿಂತ ಕಡಿಮೆ ಆದಾಯ ಗಳಿಸುವವರಿಗೆ ಇದು ಅನ್ವಯವಾಗಲಿದೆ. ಈ ನಡೆಯಿಂದಾಗಿ ದೇಶದ 2 ಕೋಟಿ ಆದಾಯ ತೆರಿಗೆದಾರರು ಲಾಭ ಪಡೆಯಲಿದ್ದಾರೆ ಎಂದು ಜೇಟ್ಲಿ ಬಜೆಟ್ ಮಂಡನೆಯಲ್ಲಿ ವಿವರಿಸಿದರು. [ಕೇಂದ್ರ ಬಜೆಟ್ 2016-17 : ಮುಖ್ಯಾಂಶಗಳು]

Income Tax Relief For Small Taxpayers

2) ಸ್ವಂತ ಮನೆ ಇಲ್ಲದವರು ಮತ್ತು ಉದ್ಯೋಗದಾತರಿಂದ ಮನೆ ಬಾಡಿಗೆ ಭತ್ಯ ಪಡೆಯದವರ ಮುಖದಲ್ಲಿಯೂ ಅರುಣ್ ಜೇಟ್ಲಿ ಸಂತಸ ಸಂದಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿಜಿ ಅಡಿಯಲ್ಲಿ ಬಾಡಿಗೆದಾರರ ತೆರಿಗೆ ವಿನಾಯಿತಿ ಮಿತಿಯನ್ನು 24 ಸಾವಿರದಿಂದ 60 ಸಾವಿರಕ್ಕೆ ಏರಿಸಲಾಗಿದೆ. [ಯಾವುದು ತುಟ್ಟಿ, ಯಾವುದು ಸೋವಿ]
English summary
Finance Minister Arun Jaitley announced two new measures to provide relief to small taxpayers in Budget 2016. Tax deduction limit for those with income less than Rs. 5 lakh, increased from 2,000 to 5,000. And Jaitley also announced relief for taxpayers who do not own a house and don't get house rent allowance from employers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X