ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ನಗರದಲ್ಲಿ ಈಗ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 300 ರು!

By Mahesh
|
Google Oneindia Kannada News

ಅಗರ್ತಲಾ (ತ್ರಿಪುರ), ಜುಲೈ 30 : ಭಾರಿ ಮಳೆ, ಪ್ರವಾಹದಿಂದಾಗಿ ಈಶಾನ್ಯ ಭಾರತದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಕ್ಷಣ ಕ್ಷಣ ಏರಿಕೆ ಕಾಣುತ್ತಿದೆ. ತ್ರಿಪುರದಲ್ಲಿ ಈಗ ಪ್ರತಿ ಲೀಟರ್ ಬೆಲೆ 300 ರು ನಷ್ಟಿದೆ.

ಈಶಾನ್ಯ ಭಾರತದ ಪ್ರಮುಖ ಹೆದ್ದಾರಿಯಾದ ಅಸ್ಸಾಂ ಹಾಗೂ ತ್ರಿಪುರ ರಸ್ತೆ ಸಂಪೂರ್ಣ ಹಾಳಾಗಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಅಗತ್ಯ ವಸ್ತು ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿದ್ದು, ರಸ್ತೆ ದುರಸ್ತಿ ಕೂಡಾ ಸಾಧ್ಯವಿಲ್ಲದ್ದಂತಾಗಿದೆ. ಆಹಾರ, ಇಂಧನ ಅಭಾವದಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ.

ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 300ರುನಷ್ಟಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 150ರು ನಷ್ಟಿದೆ. ಅಲ್ಲಿನ ಸರ್ಕಾರ ಇಂಧನ ಪಡೆಯಲು ಸಮ ಬೆಸ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ.ಸರಕು ಸಾಗಣೆ ವ್ಯವಸ್ಥೆ ವ್ಯತ್ಯಯದ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ.

Incessant downpour Assam-Tripura highway damaged Petrol Rs 300 per Litre

ಸುಮಾರು 180ಕ್ಕೂ ಅಧಿಕ ಸರಕು ವಾಹನಗಳು ಮಾರ್ಗಮಧ್ಯೆದಲ್ಲೇ ನಿಲ್ಲಿಸಲಾಗಿದ್ದು, ಇವುಗಳಲ್ಲಿ 20 ವಾಹನಗಳಲ್ಲಿ ಪೆಟ್ರೊಲ್ ಹಾಗೂ 15 ಡೀಸೆಲ್ ಟ್ಯಾಂಕರ್ ಗಳಿವೆ. ಇನ್ನೂ 100 ಇಂಧನ ಟ್ಯಾಂಕರ್ ಗಳನ್ನು ಪೂರೈಕೆ ಮಾಡುವಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗೆ ಮನವಿ ಮಾಡಲಾಗಿದೆ ಎಂದು ತ್ರಿಪುರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಭಾನು ಲಾಲ್ ಸಹಾ ಹೇಳಿದ್ದಾರೆ.

English summary
The incessant downpour in the North East has left Tripura isolated from supply of essential commodities including fuel. In Agartala, Tripura’s capital, fuel reserve is being rationed at INR 300 rupees per litre for petrol and INR 150 per litre for diesel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X