ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೈಕ್ಷಣಿಕ ಪ್ರಗತಿಗೆ ತಕ್ಕಂತೆ ಸಮವಸ್ತ್ರ, ಕೇರಳ ಶಾಲೆ ಎಡವಟ್ಟು

|
Google Oneindia Kannada News

ತಿರುವನಂತಪುರಂ, ಆ.12 : ಕೇರಳದ ಶಾಲೆಯೊಂದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಆಧರಿಸಿ ಎರಡು ಬಗೆಯ ಸಮವಸ್ತ್ರ ನಿಗದಿಗೊಳಿಸಿ ಆದೇಶ ಹೊರಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಶಾಲೆಯ ಈ ನಿರ್ಧಾರ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ: ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ: ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

ಶಾಲೆಯ ಆದೇಶದಂತೆ ಬುದ್ಧಿವಂತ ಮಕ್ಕಳು ಬಿಳಿ ಬಣ್ಣದ ಶರ್ಟ್ ಮತ್ತು ಸಾಮಾನ್ಯ ಮಕ್ಕಳು ಕೆಂಪು ಚೆಕ್ಸ್ ಶರ್ಟ್ ಧರಿಸಬೇಕಿತ್ತು. ಜೂನ್ ತಿಂಗಳಿನಿಂದಲೇ ಈ ಆದೇಶ ಜಾರಿಗೆ ಬಂದಿತ್ತು. ಈಗ ಪೋಷಕರು ಇದರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.

In this Kerala school a two uniform rule based on academic skills

ಪಂದಿಕ್ಕಾಡ್‌ನ ಅಲ್ ಫಾರುಖಿ ಇಂಗ್ಲಿಶ್ ಮೀಡಿಯಂ ಶಾಲೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಬೆಳೆಯುತ್ತದೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿತ್ತು. ಪೋಷಕರು ಈ ನಿರ್ಧಾರದ ವಿರುದ್ಧ ಚೈಲ್ಡ್‌ ಲೈನ್‌ಗೆ ದೂರು ನೀಡಿದ್ದರು.

ಕಲ್ಲಡ್ಕ ಶಾಲೆಗೆ ಅನುದಾನ ಕಟ್, ಬಟ್ಟಲು ಹಿಡಿದು ಬೀದಿಗಿಳಿದ ವಿದ್ಯಾರ್ಥಿಗಳುಕಲ್ಲಡ್ಕ ಶಾಲೆಗೆ ಅನುದಾನ ಕಟ್, ಬಟ್ಟಲು ಹಿಡಿದು ಬೀದಿಗಿಳಿದ ವಿದ್ಯಾರ್ಥಿಗಳು

ಕೇರಳದ ಶಿಕ್ಷಣ ಇಲಾಖೆ ಈ ಪ್ರಕರಣದ ಕುರಿತು ವರದಿ ನೀಡುವಂತೆ ಸೂಚನೆ ನೀಡಿದೆ. ಪೋಷಕರ ಪ್ರತಿಭಟನೆಗಳ ಬಳಿಕ ನಿಯಮವನ್ನು ವಾಪಸ್ ಪಡೆಯಲಾಗಿದ್ದು, ಶಾಲೆಯ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

English summary
A rule in a Kerala school which has two sets of uniforms depending on the child's academic skills has left parents fuming. A private school in Kerala’s Malappuram. Introduced the uniform code according to which academically sharp students will wear white shirts and tops while the second category of average and under-performing students will wear red check shirts and tops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X