'ಸೇತು ಭಾರತಮ್' ಯೋಜನೆಗೆ ಚಾಲನೆ ನೀಡಿದ ನರೇಂದ್ರ ಮೋದಿ

Subscribe to Oneindia Kannada

ನವದೆಹಲಿ,ಮಾರ್ಚ್,04: ಹೊಸ ಯೋಜನೆಗಳ ಮೂಲಕ ಭಾರತವನ್ನು ಅಭಿವೃದ್ಧಿ ರಾಷ್ಟ್ರಗಳ ಸಾಲಿಗೆ ಸೇರಿಸುವ ಪಣ ತೊಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜೊತೆಗೂಡಿ 'ಸೇತು ಭಾರತಮ್' ಎಂಬ ಹೊಸ ಯೋಜನೆಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಉದ್ಘಾಟಿಸಿದರು.

2019ರೊಳಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ರೈಲ್ವೆ ಕ್ರಾಸಿಂಗ್ ನಿಂದ ಮುಕ್ತಗೊಳಿಸುವ ಉದ್ದೇಶ ಹೊಂದಿರುವ 'ಸೇತು ಭಾರತಮ್' ಯೋಜನೆಗೆ 10,200 ಕೋಟಿ ವೆಚ್ಚ ತಗುಲಲಿದೆ. ಈ ಯೋಜನೆಯಿಂದ ರಾಷ್ಟ್ರದ ಬೆಳವಣಿಗೆಗೆ ವೇಗ ಮತ್ತು ಶಕ್ತಿ ಒದಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.[ಪ್ರಧಾನಿ ನರೇಂದ್ರ ಮೋದಿಗೆ ಮಕ್ಕಳು ಬರೆದ ಪತ್ರದಲ್ಲೇನಿದೆ?]

ಇನ್ನೊಂದೆಡೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆಬ್ರವರಿ 29ರಂದು ಮಂಡಿಸಿದ ಕೇಂದ್ರ ಬಜೆಟ್ ಗೆ ವಿರೋಧ ವ್ಯಕ್ತವಾಗಿದೆ. ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತನಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯ ಕುಮಾರ್ ಬಿಡುಗಡೆಯನ ಸಂತಸದಲ್ಲಿದ್ದಾರೆ. ಜೊತೆಗೆ ಕೆಲವು ಸೆಲೆಬ್ರಿಟಿಗಳು ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನಷ್ಟು ವೈವಿಧ್ಯಮಯ ಸುದ್ದಿಗಳು ಇಲ್ಲಿವೆ.

ನವದೆಹಲಿಯಲ್ಲಿ ಸೇತು ಭಾರತಮ್ ಯೋಜನೆಗೆ ಚಾಲನೆ

ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ 'ಸೇತು ಭಾರತಮ್' ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು. ಈ ಯೋಜನೆಯ ಮುಖ್ಯ ಉದ್ದೇಶ ಅಪಘಾತದಿಂದ ಜನರ ಜೀವವನ್ನು ಉಳಿಸುವುದಾಗಿದೆ ಎಂದು ನಿತಿನ್ ಗಡ್ಕರಿ ಅವರು ಯೋಜನೆಯ ಮಹತ್ವದ ಬಗ್ಗೆ ಮಾತನಾಡಿದರು.

 

ಮಾತೃಶಕ್ತಿ ಪ್ರಶಸ್ತಿ ಪಡೆದ ಆರ್ಎಸ್ಎಸ್ ಮುಖ್ಯಸ್ಥ

ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಮಾತೃಶಕ್ತಿ ಪ್ರಶಸ್ತಿ-2016ನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭವು ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಿತು.

 

ಕನ್ಹಯ್ಯ ಕುಮಾರ್ ಬಿಡುಗಡೆ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯ ಕುಮಾರ್ ಜಾಮೀನಿನ ಮೇಲೆ ಹಲವು ಷರತ್ತುಗಳ ಮೇಲೆ ಬಿಡುಗಡೆಯಾದ ಅವರು ಸಂಭ್ರಮಪಟ್ಟಿದ್ದು ಹೀಗೆ.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

 

ಜೇಟ್ಲಿ ಮೇಲೆ ಕೋಪಗೊಂಡ ಕೊಲ್ಕತ್ತಾ ಜನತೆ

ಕೊಲ್ಕತ್ತಾದ ಎಬಿಇಸಿಎ ( All Bengal Electricity Consumers Association) ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಮೇಲೆ ವಿರೋಧ ವ್ಯಕ್ತಪಡಿಸಿದ್ದು, ವಿದ್ಯುತ್ ತೆರಿಗೆಯನ್ನು ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಖಂಡಿಸಿದರು.[ರುಪಾಯಿ ಎಲ್ಲಿಂದ ಬರಲಿದೆ, ಎಲ್ಲೆಲ್ಲಿ ವಿನಿಯೋಗವಾಗಲಿದೆ?]

 

ಸಿವಿಲ್ ಪರೀಕ್ಷಾರ್ಥಿಗಳ ಪ್ರತಿಭಟನೆ

ಸಿವಿಲ್ ಪರೀಕ್ಷೆಗಳನ್ನು ಮೂರಕ್ಕೂ ಹೆಚ್ಚು ಬಾರಿ ಬರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ ಪರೀಕ್ಷಾರ್ಥಿಗಳು ನವದೆಹಲಿಯ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು.

 

ಊರ್ಮಿಳಾಗೆ ಕೂಡಿ ಬಂದ ಕಂಕಣ ಭಾಗ್ಯ

ಮರಾಠಿ ಬೆಡಗಿ ಊರ್ಮಿಳಾ ಮಾತೋಂಡ್ಕರ್ ಅವರು ಕಾಶ್ಮೀರ ಮೂಲದ ಉದ್ಯಮಿ ಮೊಹ್ಸಿನ್ ಅಖ್ತರ್ ಮೀರ್ ಅವರನ್ನು ವಿವಾಹವಾಗಿದ್ದಾರೆ.[ರಂಗೀಲಾ ಬೆಡಗಿ ಊರ್ಮಿಳಾ ಸದ್ದಿಲ್ಲದೆ ಮದ್ವೆ]

 

English summary
Prime Minister Narendra Modi with Union Minister for Road Transport, Highways & Shipping Nitin Gadkari launch the Setu Bharatam Project at Vigyan Bhawan in New Delhi. RSS Chief Mohan Bhagwat being felicitated during the Matrushakti Award 2016 function in Nagpur etc.
Please Wait while comments are loading...