ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದ ಅವಳಿ ರೈಲು ದುರಂತದ ಚಿತ್ರಗಳು

|
Google Oneindia Kannada News

ಭೋಪಾಲ್, ಆಗಸ್ಟ್ 5 : ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಕುಡುವಾ ಗ್ರಾಮದ ಬಳಿ ಬುಧವಾರ ಸಂಭವಿಸಿದ ಅವಳಿ ರೈಲು ದುರಂತದಲ್ಲಿ 29 ಜನರು ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ಸೇನೆ ಜಂಟಿ ಕಾರ್ಯಾಚರಣೆ ನಡೆಸಿ 300ಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.

ಮುಂಬೈನಿಂದ ವಾರಣಾಸಿಗೆ ಹೋಗುತ್ತಿದ್ದ ಕಾಮಾಯಾನಿ ರೈಲು ಮಚಕ್ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆ ಹಳಿ ತಪ್ಪಿದ್ದರಿಂದ ಈ ದುರಂತ ನಡೆದಿದೆ. ಇದೇ ಸೇತುವೆ ಮೇಲೆ ಜಬಲ್ ಪುರದಿಂದ ಮುಂಬೈಗೆ ತೆರಳುತ್ತಿದ್ದ ಜನತಾ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದ್ದರಿಂದ ಅದರ ಬೋಗಿಗಳು ಹಳಿ ತಪ್ಪಿದವು. [ಮಾಮೂಲಿ ಟ್ರೈನೇ ಡೇಂಜರ್, ಬುಲೆಟ್ ಟ್ರೈನ್ ಬಿಡ್ತಾರಂತೆ!]

ಕೆಲವೇ ನಿಮಿಷಗಳ ಅಂತದಲ್ಲಿ ನಡೆದ ಅವಳಿ ರೈಲು ದುರಂತದಲ್ಲಿ 29 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಗೆ ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರವನ್ನು ಘೋಷಣೆ ಮಾಡಲಾಗಿದೆ ಎಂದು ಅವರು ಲಿಖಿತ ಉತ್ತರ ನೀಡಿದ್ದಾರೆ.

ಜನತಾ ಎಕ್ಸ್‌ಪ್ರೆಸ್ ಮತ್ತು ಕಾಮಾಯಾನಿ ಎಕ್ಸ್‌ಪ್ರೆಸ್ ರೈಲುಗಳ ಒಟ್ಟು 16 ಬೋಗಿಗಳು ಹಳಿತಪ್ಪಿವೆ. ಈ ಅವಳಿ ರೈಲು ಅಪಘಾತದಿಂದಾಗಿ 25ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮುಂಬೈನಿಂದ ಬರಬೇಕಿದ್ದ ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. [ಪಿಟಿಐ ಚಿತ್ರಗಳು]

29 ಪ್ರಯಾಣಿಕರ ದುರ್ಮರಣ

29 ಪ್ರಯಾಣಿಕರ ದುರ್ಮರಣ

ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಕುಡುವಾ ಗ್ರಾಮದ ಬಳಿ ಸಂಭವಿಸಿದ ಅವಳಿ ರೈಲು ದುರಂತದಲ್ಲಿ 29 ಜನರು ಸಾವನ್ನಪ್ಪಿದ್ದಾರೆ. 300 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.

ಎರಡು ರೈಲುಗಳು ಹಳಿ ತಪ್ಪಿವೆ

ಎರಡು ರೈಲುಗಳು ಹಳಿ ತಪ್ಪಿವೆ

ಜನತಾ ಎಕ್ಸ್‌ಪ್ರೆಸ್ ಮತ್ತು ಕಾಮಾಯಾನಿ ಎಕ್ಸ್‌ಪ್ರೆಸ್ ರೈಲುಗಳ ಒಟ್ಟು 16 ಬೋಗಿಗಳು ಹಳಿತಪ್ಪಿದೆ. ಜನತಾ ಎಕ್ಸ್‌ಪ್ರೆಸ್ ರೈಲು ಜಬಲ್ ಪುರದಿಂದ ಮುಂಬೈಗೆ ತೆರಳುತ್ತಿತ್ತು. ಕಾಮಾಯಾನಿ ರೈಲು ಮುಂಬೈನಿಂದ ವಾರಣಾಸಿಗೆ ತೆರಳುತ್ತಿತ್ತು.

ನದಿಗೆ ಉರುಳಿದ ಬೋಗಿಗಳು

ನದಿಗೆ ಉರುಳಿದ ಬೋಗಿಗಳು

ಕಾಮಾಯಾನಿ ರೈಲು ಮಚಕ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಬರುತ್ತಿದ್ದಂತೆ ಸೇತುವೆ ಕುಸಿದಿದ್ದು, S1 ನಿಂದ S11 ವರೆಗಿನ ಬೋಗಿಗಳು ಹಳಿತಪ್ಪಿ ನದಿಗೆ ಉರುಳಿವೆ. ಇದೇ ಸೇತುವೆ ಮೇಲೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಜನತಾ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದ್ದರಿಂದ 4 ಬೋಗಿಗಳು ನದಿಗೆ ಉರುಳಿವೆ.

ಪ್ರಧಾನಿ ನರೇಂದ್ರ ಮೋದಿ ಟ್ವಿಟ್

ಪ್ರಧಾನಿ ನರೇಂದ್ರ ಮೋದಿ ಟ್ವಿಟ್

'ರೈಲ್ವೆ ಅಪಘಾತದಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಧಿಸುತ್ತೇನೆ. ಪ್ರಯಾಣಿಕರನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.

ಕೇಂದ್ರ ರೈಲ್ವೆ ಸಚಿವರ ಉತ್ತರ

ಕೇಂದ್ರ ರೈಲ್ವೆ ಸಚಿವರ ಉತ್ತರ

ಕೆಲವೇ ನಿಮಿಷಗಳ ಅಂತದಲ್ಲಿ ನಡೆದ ಅವಳಿ ರೈಲು ದುರಂತದಲ್ಲಿ 29 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಗೆ ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರವನ್ನು ಘೋಷಣೆ ಮಾಡಲಾಗಿದೆ ಎಂದು ಅವರು ಲಿಖಿತ ಉತ್ತರ ನೀಡಿದ್ದಾರೆ.

ಪರಿಹಾರ ಘೋಷಣೆ

ಪರಿಹಾರ ಘೋಷಣೆ

ಅವಳಿ ರೈಲು ದುರಂತದಲ್ಲಿ ಮೃತಪಟ್ಟವರಿಗೆ ರೈಲ್ವೆ ಇಲಾಖೆ ಪರಿಹಾರ ಘೋಷಣೆ ಮಾಡಿದೆ. ಮೃತಪಟ್ಟವರಿಗೆ 2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ಮತ್ತು ಸಣ್ಣ-ಪುಟ್ಟ ಗಾಯಗಳಾದವರಿಗೆ 25 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ.

12 ರೈಲುಗಳ ಸಂಚಾರ ರದ್ದು

12 ರೈಲುಗಳ ಸಂಚಾರ ರದ್ದು

ಅಪಘಾತದಿಂದಾಗಿ 25ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮುಂಬೈನಿಂದ ಬರಬೇಕಿದ್ದ ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶದಿಂದ ಬರಬೇಕಿದ್ದ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ

ಎರಡೂ ರೈಲುಗಳಲ್ಲಿದ್ದ ಪ್ರಯಾಣಿಕರು ಸಾವು

ಎರಡೂ ರೈಲುಗಳಲ್ಲಿದ್ದ ಪ್ರಯಾಣಿಕರು ಸಾವು

ಅವಳಿ ರೈಲು ದುರಂತದಲ್ಲಿ 29 ಜನರು ಮೃತಪಟ್ಟಿದ್ದಾರೆ. ಜನತಾ ಎಕ್ಸ್‌ಪ್ರೆಸ್ ರೈಲಿನ 9, ಕಾಮಾಯಾನಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 20 ಜನರು ಮೃತಪಟ್ಟಿದ್ದಾರೆ.

ಮಳೆಯಿಂದಾಗಿ ಕಾರ್ಯಾಚರಣೆ ವಿಳಂಬ

ಮಳೆಯಿಂದಾಗಿ ಕಾರ್ಯಾಚರಣೆ ವಿಳಂಬ

ಮಚಕ್ ನದಿಯಲ್ಲಿ ನೀರು ಹರಿಯುತ್ತಿದ್ದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಯಿತು. ಘಟನೆಯಿಂದಾಗಿ ಹರ್ದಾ ಬಳಿಯ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು 6 ಕಿ.ಮೀ ತನಕ ವಾಹನಗಳು ಸಾಲುಗಟ್ಟಿ ನಿಂತಿವು.

ರೈಲ್ವೆ ಸಚಿವರ ಜೊತೆ ಸಿಎಂ ಚೌವ್ಹಾಣ್ ಚರ್ಚೆ

ರೈಲ್ವೆ ಸಚಿವರ ಜೊತೆ ಸಿಎಂ ಚೌವ್ಹಾಣ್ ಚರ್ಚೆ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಮತ್ತು ಕೇಂದ್ರ ರೈಲೈ ಸಚಿವ ಸುರೇಶ್ ಪ್ರಭು ಅವರು ರಕ್ಷಣಾ ಕಾರ್ಯಚರಣೆ ಬಗ್ಗೆ ಚರ್ಚೆ ನಡೆಸಿದರು. 'ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ' ಎಂದು ಸುರೇಶ್ ಪ್ರಭು ಹೇಳಿದ್ದಾರೆ.

ಭಾರೀ ಮಳೆ ಕಾರಣ

ಭಾರೀ ಮಳೆ ಕಾರಣ

ಭಾರೀ ಮಳೆಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಳೆಯಿಂದಾಗಿ ಹಳಿ ಕೊಚ್ಚಿ ಹೋಗಿತ್ತು. ಅದೇ ಮಾರ್ಗದಲ್ಲಿ ಬಂದ ರೈಲಿನ ಹಳಿ ತಪ್ಪಿ ಈ ದುರಂತ ಸಂಭವಿಸಿದೆ.

English summary
Varanasi-bound Kamayani Express and Mumbai-bound Janata Express derailed while crossing a bridge on the Machak river between Khirkiya and Harda Stations in Madhya Pradesh. Here is pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X