ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಪಂಜಾಬಿನಲ್ಲಿ ಉಗ್ರರನ್ನು ಮಟ್ಟ ಹಾಕಿದ ಯೋಧರು

|
Google Oneindia Kannada News

ಬೆಂಗಳೂರು, ಜುಲೈ 27 : ಸುಮಾರು 11 ಗಂಟೆಗಳ ಕಾರ್ಯಾಚರಣೆ ಬಳಿಕ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಪಂಜಾಬ್‌ನ ಗುರುದಾಸ್‌ ಪುರಕ್ಕೆ ಸೋಮವಾರ ಮುಂಜಾನೆ ನುಗ್ಗಿದ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಉಗ್ರರು ಮನಬಂದಂತೆ ನಡೆಸಿದ ಗುಂಡಿನ ದಾಳಿಗೆ ಸುಮಾರು ಹತ್ತು ಜನರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ಸೇನಾ ಸಮವಸ್ತ್ರ ಧರಿಸಿ ಮಾರುತಿ 800 ಕಾರಿನಲ್ಲಿ ಆಗಮಿಸಿದ ನಾಲ್ವರು ಉಗ್ರರು ಪಂಜಾಬ್ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಮೇಲೆ ದೀನಾ ನಗರ್‌ನಲ್ಲಿ ಮೊದಲು ದಾಳಿ ಮಾಡಿದರು. ಈ ದಾಳಿಯಲ್ಲಿ 7 ಪ್ರಯಾಣಿಕರು ಗಾಯಗೊಂಡರು. [ಉಗ್ರರ ದಾಳಿಯ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ]

ನಂತರ ರಸ್ತೆಯಲ್ಲಿ ಮನಬಂದಂತೆ ಗುಂಡು ಹಾರಿಸಿದ ಉಗ್ರರು, ದೀನಾ ನಗರ್ ಪೊಲೀಸ್ ಠಾಣೆಯ ಭದ್ರತಾ ಸಿಬ್ಬಂದಿಯನ್ನು ಕೊಂದು ಅಲ್ಲಿ ಅಡಗಿ ಕುಳಿತರು. ಠಾಣೆಯಲ್ಲಿದ್ದ ಸಿಬ್ಬಂದಿಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡರು. ಠಾಣೆಯನ್ನು ಸುತ್ತುವರೆದ ಭಧ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸಲು ಆರಂಭಿಸಿದರು.

ಗುಂಡಿನ ದಾಳಿ ನಡೆಸುವ ಜೊತೆಗೆ ಉಗ್ರರು ಗುರುದಾಸ್‌ ಪುರದ ರೈಲ್ವೆ ಹಳಿಯಲ್ಲಿ ಬಾಂಬ್‌ಗಳನ್ನು ಇಟ್ಟಿದ್ದರು. ಪೊಲೀಸರು ಸ್ಫೋಟಕಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸಿದರು. ನಾಲ್ವರು ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಉಗ್ರರ ದಾಳಿ ಚಿತ್ರಗಳು ಇಲ್ಲಿವೆ ನೋಡಿ..... [ಪಿಟಿಐ ಚಿತ್ರಗಳು]

ಪಂಜಾಬ್‌ಗೆ ನುಗ್ಗಿದ ಉಗ್ರರು

ಪಂಜಾಬ್‌ಗೆ ನುಗ್ಗಿದ ಉಗ್ರರು

ವ್ಯವಸ್ಥಿತ ಸಂಚು ರೂಪಿಸಿ, ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸೋಮವಾರ ಪಂಜಾಬ್ ಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮುವಿನ ಹರಿನಗರ ಗಡಿ ಬಳಿಯಿಂದ ಉಗ್ರರು ಒಳನುಸುಳಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಉಗ್ರರು ದಾಳಿ ನಡೆಸಿರುವ ಪಂಜಾಬ್‌ನ ಗುರುದಾಸ್‌ ಪುರ ಹರಿನಗರದಿಂದ 90 ಕಿ.ಮೀ.ದೂರದಲ್ಲಿದೆ.

ಕಾರು ಅಪಹರಿಸಿಕೊಂಡು ಬಂದ ಉಗ್ರರು

ಕಾರು ಅಪಹರಿಸಿಕೊಂಡು ಬಂದ ಉಗ್ರರು

ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ಸೇನಾ ಸಮವಸ್ತ್ರ ಧರಿಸಿ ಮಾರುತಿ 800 ಕಾರಿನಲ್ಲಿ ಆಗಮಿಸಿದ ನಾಲ್ವರು ಉಗ್ರರು ಪಂಜಾಬ್ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಮೇಲೆ ದೀನಾ ನಗರ್‌ನಲ್ಲಿ ಮೊದಲು ದಾಳಿ ಮಾಡಿದರು. ಈ ದಾಳಿಯಲ್ಲಿ 7 ಪ್ರಯಾಣಿಕರು ಗಾಯಗೊಂಡರು.

ರೈಲ್ವೆ ಹಳಿಗೆ ಬಾಂಬ್ ಇಟ್ಟರು

ರೈಲ್ವೆ ಹಳಿಗೆ ಬಾಂಬ್ ಇಟ್ಟರು

ವ್ಯವಸ್ಥಿತ ಸಂಚು ರೂಪಿಸಿಕೊಂಡು ಬಂದಿದ್ದ ಉಗ್ರರು ಗುರುದಾಸ್‌ ಪುರದ ರೈಲ್ವೆ ಹಳಿಯಲ್ಲಿ 3 ಕಡೆ ಬಾಂಬ್‌ಗಳನ್ನು ಇಟ್ಟಿದ್ದರು. ಪೊಲೀಸರು ಸ್ಫೋಟಕಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸಿದರು.

ಪೊಲೀಸ್ ಠಾಣೆಯಲ್ಲಿ ಅಡಗಿ ಕುಳಿತ ಉಗ್ರರು

ಪೊಲೀಸ್ ಠಾಣೆಯಲ್ಲಿ ಅಡಗಿ ಕುಳಿತ ಉಗ್ರರು

ಬಸ್ಸಿನ ಮೇಲೆ ದಾಳಿ ಮಾಡಿದ ನಂತರ ರಸ್ತೆಯಲ್ಲಿ ಮನಬಂದಂತೆ ಗುಂಡು ಹಾರಿಸಿದ ಉಗ್ರರು, ದೀನಾ ನಗರ್ ಪೊಲೀಸ್ ಠಾಣೆಯ ಭದ್ರತಾ ಸಿಬ್ಬಂದಿಯನ್ನು ಕೊಂದು ಅಲ್ಲಿ ಅಡಗಿ ಕುಳಿತರು. ಠಾಣೆಯಲ್ಲಿದ್ದ ಸಿಬ್ಬಂದಿಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡರು. ಠಾಣೆಯನ್ನು ಸುತ್ತುವರೆದ ಭಧ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸಲು ಆರಂಭಿಸಿದರು.

ಗುಂಡಿನ ದಾಳಿಯಿಂದ ಹಲವರಿಗೆ ಗಾಯ

ಗುಂಡಿನ ದಾಳಿಯಿಂದ ಹಲವರಿಗೆ ಗಾಯ

ಉಗ್ರರು ರಸ್ತೆಯಲ್ಲಿ ಮನಬಂದಂತೆ ಗುಂಡು ಹಾರಿಸಿದ್ದರಿಂದ ಹಲವರು ಗಾಯಗೊಂಡರು. 10 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಲವಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಾಬಾದಲ್ಲಿ ಕೆಲಸ ಮಾಡುತ್ತಿದವ ಬಲಿ

ಡಾಬಾದಲ್ಲಿ ಕೆಲಸ ಮಾಡುತ್ತಿದವ ಬಲಿ

ದೀನಾ ನಗರ್ ಪೊಲೀಸ್ ಠಾಣೆಗೆ ಹೋಗುವ ಮಾರ್ಗದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ಡಾಬಾದಲ್ಲಿ ಕೆಲಸ ಮಾಡುತ್ತಿದ್ದವರೊಬ್ಬರು ಬಲಿಯಾಗಿದ್ದಾರೆ.

ನಾಲ್ವರು ಉಗ್ರರು ಬಂದಿದ್ದರು

ನಾಲ್ವರು ಉಗ್ರರು ಬಂದಿದ್ದರು

ಪೊಲೀಸ್ ಠಾಣೆಯಲ್ಲಿ ನಾಲ್ವರು ಉಗ್ರರು ಅಡಗಿದ್ದರು. ಆದರೆ, ಹಲವು ಸಮಯದ ತನಕ ಎಷ್ಟು ಉಗ್ರರಿದ್ದಾರೆ ಎಂಬುದೇ ಖಚಿತವಾಗಿರಲಿಲ್ಲ. ನಿರಂತರವಾಗಿ ಗುಂಡಿನ ದಾಳಿ ನಡೆಯುತ್ತಲೇ ಇತ್ತು.

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಗೃಹ ಸಚಿವರು

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಗೃಹ ಸಚಿವರು

ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, 'ದಾಳಿಯ ಹೊಣೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಇದು ಸೂಕ್ತವಾದ ಸಮಯವಲ್ಲ, ಸ್ಥಳದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ' ಎಂದರು. ಪಂಜಾಬ್ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಜಿತ್ ದೋವಲ್ ನೇತೃತ್ವದಲ್ಲಿ ಸಭೆ

ಅಜಿತ್ ದೋವಲ್ ನೇತೃತ್ವದಲ್ಲಿ ಸಭೆ

ಪಂಜಾಬ್‌ನಲ್ಲಿನ ಉಗ್ರರ ದಾಳಿ ಕುರಿತು ಚರ್ಚೆ ನಡೆಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ದಾಳಿಯ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತೆ? ಎಂದು ಚರ್ಚೆ ನಡೆಸಿದರು.

ಉಗ್ರರು ಕಾರನ್ನು ಎಲ್ಲಿಂದ ತಂದರು?

ಉಗ್ರರು ಕಾರನ್ನು ಎಲ್ಲಿಂದ ತಂದರು?

ಮುಂಜಾನೆ 5 ಗಂಟೆ ಸುಮಾರಿಗೆ ಸೇನಾ ಸಮವಸ್ತ್ರ ಧರಿಸಿ ಮಾರುತಿ 800 ಕಾರಿನಲ್ಲಿ ಉಗ್ರರು ಆಗಮಿಸಿದರು. ಈ ಕಾರನ್ನು ಉಗ್ರರು ಎಲ್ಲಿಂದ ಅಪಹರಿಸಿ ತಂದರು? ಎಂಬುದು ಪ್ರಶ್ನೆಯಾಗಿದೆ.

ಸ್ಥಳವನ್ನು ತಮ್ಮ ವಶಕ್ಕೆ ಪಡೆದ ಭದ್ರತಾ ಪಡೆಗಳು

ಸ್ಥಳವನ್ನು ತಮ್ಮ ವಶಕ್ಕೆ ಪಡೆದ ಭದ್ರತಾ ಪಡೆಗಳು

ಉಗ್ರರು ಪೊಲೀಸ್ ಠಾಣೆಯಲ್ಲಿ ಅಡಗಿರುವುದು ಖಚಿತವಾದಂತೆ ಸೇನಾಪಡೆ ಸ್ಥಳವನ್ನು ತಮ್ಮ ವಶಕ್ಕೆ ಪಡೆದುಕೊಂಡಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಠಾಣೆ ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ, ಕಾರ್ಯಾಚರಣೆಯನ್ನು ನಡೆಸಲಾಯಿತು.

ಯಾವ ಸಂಘಟನೆಯೂ ಹೊಣೆ ಹೊತ್ತುಕೊಂಡಿಲ್ಲ

ಯಾವ ಸಂಘಟನೆಯೂ ಹೊಣೆ ಹೊತ್ತುಕೊಂಡಿಲ್ಲ

ಪಂಜಾಬ್‌ ದಾಳಿಯ ಹೊಣೆಯನ್ನು ಯಾವ ಸಂಘಟನೆಗಳೂ ಹೊತ್ತುಕೊಂಡಿಲ್ಲ. ಒಬ್ಬರು ಎಸ್ಪಿ ಸೇರಿ 9 ಪೊಲೀಸ್ ಸಿಬ್ಬಂದಿ ಈ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾರೆ.

English summary
Four gunmen in army uniform have attacked a police station in Gurdaspur, Punjab on Monday, July 27 morning. Terrorist attack in in pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X