ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗ ಗುರು ರಾಮ್ ದೇವ್ ಮೋಜಿನ ರೈಡ್ ನೋಡಿ

By Mahesh
|
Google Oneindia Kannada News

ನವದೆಹಲಿ, ಫೆ. 09: ಯೋಗ ಗುರು ಬಾಬಾ ರಾಮದೇವ್ ಅವರು ತಮ್ಮ ಯೋಗ ಕಲಿಕೆ ಜ್ಞಾನವನ್ನು ಎಲ್ಲರಿಗೂ ಹಂಚುವುದರ ಜೊತೆಗೆ 'ಪತಂಜಲಿ' ಬ್ರ್ಯಾಂಡ್ ಕೂಡಾ ಬೆಳೆಸುತ್ತಿದ್ದಾರೆ. ಇತ್ತೀಚೆಗೆ ಪೋರ್ಟ್ ಬ್ಲೇರ್ ಗೆ ಬಂದಿದ್ದ ರಾಮ್ ದೇವ್, ಮೋಜಿನ ರೈಡ್ ಹೋಗಿ ಎಲ್ಲರನ್ನು ದಂಗಾಗುವಂತೆ ಮಾಡಿದರು.

ಪೋರ್ಟ್ ಬ್ಲೇರ್ ನಲ್ಲಿ ಯೋಗ ಶಿಬಿರ ಉದ್ಘಾಟನೆಗಾಗಿ ಬಂದಿದ್ದ ರಾಮದೇವ್ ಅವರು ವಾಟರ್ ಸ್ಕೂಟರ್ ಏರಿ ಚಲಿಸಲು ಆರಂಭಿಸುತ್ತಿದ್ದಂತೆ ಎಲ್ಲರೂ ಅಚ್ಚರಿಯಿಂದ ಕಾಣತೊಡಗಿದರು. ಜೆಟ್ ಸ್ಕೀ ರೈಡ್ ನಡೆಸಿದ ಬಾಬಾ ಕಂಡು ಮೂಕವಿಸ್ಮಿತರಾದ ಜನ ನೋಡುತ್ತಿದ್ದರು.[ನೆಸ್ಲೆ ನಂತರ ಅಡಿಡಾಸ್ ಜತೆ ರಾಮ್ ದೇವ್ ಪೈಪೋಟಿ?]

In Pics: When Yoga guru Baba Ramdev took a water scooter ride

ಭಾರತೀಯ ಕರಾವಳಿ ಪಡೆ (ಐಸಿಜಿ) ಅಧಿಕಾರಿಗಳಿಗೆ ಯೋಗ ಕಲಿಸಲು ಬಂದಿದ್ದ ಬಾಬಾ ರಾಮದೇವ್ ಅವರು ಅಲ್ಲಿನ ಕ್ರೀಡಾ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಡಗಿನ ಡೆಕ್ ನಲ್ಲಿ ಅಧಿಕಾರಿಗಳಿಗೆ ಒತ್ತಡ ರಹಿತ ಕಾರ್ಯ ನಿರ್ವಹಣೆ ಬಗ್ಗೆ ರಾಮದೇವ್ ಬೋಧನೆ ಮಾಡಿದ್ದಾರೆ.

भारतीय तटरक्षक बल को जहाज के डेक पर तनावमुक्ति के लिए पोर्ट ब्लेयर में योग सिखाते हुए

Posted by Baba Ramdev on7 February 2016

ಪತಂಜಲಿ ಬ್ರ್ಯಾಂಡ್ ಬಗ್ಗೆ : ಪತಂಜಲಿ ಬ್ರ್ಯಾಂಡ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಕೆಲವು ಬಹುರಾಷ್ಟ್ರೀಯ ಕಂಪನಿಗಳು ಸಂಚು ಮಾಡುತ್ತಿವೆ. ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಪತಂಜಲಿ ಉತ್ಪನ್ನಗಳನ್ನು ಬಳಸಿ ನೋಡಿ, ನಂತರ ಪ್ರತಿಕ್ರಿಯೆ ನೀಡಿ ಎಂದಿದ್ದಾರೆ.[ಫ್ಯೂಚುರಾ ಗ್ರೂಪ್ ಜೊತೆ ಬಾಬಾ ರಾಮ್ ದೇವ್ ಡೀಲ್]

ಎಫ್ಎಂ ಸಿಜಿ ವಲಯದಲ್ಲಿ ಪತಂಜಲಿ ಬ್ರ್ಯಾಂಡ್ ಉನ್ನತಿಗೆ ಬರುತ್ತಿರುವುದು ಎಂಎನ್ ಸಿಗಳಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅನೇಕ ರೀತಿ ಸಂಚು ರೂಪಿಸುತ್ತಿದ್ದಾರೆ. ಪತಂಜಲಿ ಉತ್ಪನ್ನಗಳ ಮಾರಾಟಗಾರರಿಗೆ ಬೆದರಿಕೆಗಳು ಬಂದಿದೆ ಎಂದರು.

नैसर्गिक सुदंरता के लिए प्रसिद्ध पोर्टब्लेयर में जेट स्की राइड करते हुए .यहां का लुभावना प्राकृतिक सौंदर्य बेमिसाल है।

Posted by Baba Ramdev on7 February 2016

'ಪುತ್ರಜೀವಕ್ ಬೀಜ್' ಬಗ್ಗೆ ವಿವಾದ ಎದ್ದಿರುವುದು ನಿಜ. ಇದರ ಸತ್ಯಾಸತ್ಯತೆ ಬಗ್ಗೆ ಏನು ಹೇಳಲಾರೆ. ಈ ಬಗ್ಗೆ ಉತ್ತರಾಂಚಲ್ ಸರ್ಕಾರ ತನಿಖೆ ನಡೆಸಿ ಯಾವ ಕ್ರಮ ಜರುಗಿಸುತ್ತದೆಯೋ ಅದಕ್ಕೆ ನಾವು ಬದ್ಧ ಎಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
Yoga guru Baba Ramdev is known for his amazing yoga skills, ,but it seems slowly and gradually he will known for his other skills too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X