ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣಿವೆ ರಾಜ್ಯದ ಅಂದ ಹೆಚ್ಚಿಸಿದ ಟುಲಿಪ್ ಹೂದೋಟ

By Mahesh
|
Google Oneindia Kannada News

ಶ್ರೀನಗರ, ಏ.10: ಅಕಾಲಿಕ ಮಳೆ, ಆಗಾಗ ಗುಂಡಿನ ಸುರಿಮಳೆ ನಿತ್ಯ ಜೀವ ಭಯದಲ್ಲಿ ಕಾಲ ದೂಡುವ ಕಣಿವೆ ರಾಜ್ಯದಲ್ಲಿ ಈಗ ಸುಂದರ ಹೂಗಳ ತೋಟ ನಳನಳಿಸುತ್ತಿದೆ. ಟುಲಿಪ್ ಹೂಗಳ ಸುಂದರ ಉದ್ಯಾನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಏಷ್ಯಾದಲ್ಲೇ ಅತಿದೊಡ್ಡ ಟುಲಿಪ್ ಉದ್ಯಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಇತ್ತೀಚಿಗೆ ಉದ್ಘಾಟನೆ ಮಾಡಿ ಸಾರ್ವಜನಿಕ ವೀಕ್ಷಣೆಗೆ ಚಾಲನೆ ನೀಡಿದರು. ದಾಲ್ ಸರೋವರದ ಸುತ್ತಾ ಬಣ್ಣ ಬಣ್ಣದ ಹೂಗಳ ಲೋಕ ಸೃಷ್ಟಿಸಲಾಗಿದೆ. [ಕೊಡಗಿನಲ್ಲಿ ಅಪರೂಪದ ಪುಷ್ಪೋದ್ಯಾನವನ]

ದಾಲ್ ಸರೋವರದ ಸುತ್ತಾ ಸುಮಾರು 15 ಹೆಕ್ಟೇರು ಭೂ ಪ್ರದೇಶದಲ್ಲಿ ಟುಲಿಪ್ ಹೂಗಳನ್ನು ಬೆಳೆಯಲಾಗಿದೆ. ಶ್ರೀನಗರದ ಹೂ ಬೆಳೆಗಾರ ಕೈಚಳಕ ಇಲ್ಲಿ ಎದ್ದು ಕಾಣುತ್ತದೆ. [ದೀರ್ಘ ಕಾಲ ಬಾಳುವ ಹೂ ಬಿಗ್ನೋನಿಯಾ]

2006-07ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ತೋಟಗಾರಿಕೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಅಂದಿನ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್ ಅವರು ಝಬರ್ವಾನ್ ಪರ್ವತ ಶ್ರೇಣಿಯಲ್ಲಿ ಟುಲಿಪ್ ಹೂಗಳ ಉದ್ಯಾನ ನಿರ್ಮಾಣ ಮಾಡಿದರು. [ಆಶ್ರಮದಲ್ಲಿ ಬೋನ್ಸಾಯ್ ಮರಗಳ ಲೋಕ]

ಸಮುದ್ರಮಟ್ಟದಿಂದ ಸುಮಾರು 5600 ಅಡಿ ಎತ್ತರದಲ್ಲಿರುವ ಈ ಉದ್ಯಾನ ಏಷ್ಯಾದ ಅತಿ ಸುಂದರ ಉದ್ಯಾನ ಎನಿಸಿದೆ. ಸುಮಾರು 70ಕ್ಕೂ ಅಧಿಕ ಟುಲಿಪ್ ಹೂಗಳನ್ನು ಸುಮಾರು 12 ರಿಂದ 15 ಹೆಕ್ಟೇರು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಕಣಿವೆ ರಾಜ್ಯದ ಅಂದ ಇನ್ನಷ್ಟು ಹೆಚ್ಚಿಸಿರುವ ಈ ಟುಲಿಪ್ ಹೂ ಸಾಮ್ರಾಜ್ಯದಲ್ಲಿ ಒಂದು ಸುತ್ತು ಹಾಕೋಣ ಬನ್ನಿ..

15 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಹೂಗಳು

15 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಹೂಗಳು

ದಾಲ್ ಸರೋವರದ ಸುತ್ತಾ ಸುಮಾರು 15 ಹೆಕ್ಟೇರು ಭೂ ಪ್ರದೇಶದಲ್ಲಿ ಟುಲಿಪ್ ಹೂಗಳನ್ನು ಬೆಳೆಯಲಾಗಿದೆ.

ಅಂದ ಕಾಪಾಡಲು ಜಾಣ್ಮೆಯ ಬಿತ್ತನೆ

ಅಂದ ಕಾಪಾಡಲು ಜಾಣ್ಮೆಯ ಬಿತ್ತನೆ

ಹಂತ ಹಂತವಾಗಿ ಟುಲಿಪ್ ಹೂಗಳನ್ನು ಬೆಳೆಸುವ ಮೂಲಕ ಸುಮಾರು ಒಂದು ತಿಂಗಳ ಕಾಲ ಹೂದೋಟವನ್ನು ಅಲಂಕರಿಸಲಿವೆ.

ಹತ್ತು ಲಕ್ಷಕ್ಕೂ ಅಧಿಕ ಟುಲಿಪ್ ಹೂವು

ಹತ್ತು ಲಕ್ಷಕ್ಕೂ ಅಧಿಕ ಟುಲಿಪ್ ಹೂವು

ಹತ್ತು ಲಕ್ಷಕ್ಕೂ ಅಧಿಕ ಟುಲಿಪ್ ಹೂವುಗಳನ್ನು ಇಲ್ಲಿವೆ. ಪುರುಸೊತ್ತಿದ್ದರೆ ಎಣಿಸಬಹುದು.

ಝಬರ್ವಾನ್ ಬೆಟ್ಟ ಪ್ರದೇಶ ಬಳಿಯ ತೋಟ

ಝಬರ್ವಾನ್ ಬೆಟ್ಟ ಪ್ರದೇಶ ಬಳಿಯ ತೋಟ

ಝಬರ್ವಾನ್ ಬೆಟ್ಟ ಪ್ರದೇಶ ಬಳಿಯ ತೋಟ, ಏಷ್ಯಾದಲ್ಲೇ ಅತಿದೊಡ್ಡ ಟುಲಿಪ್ ಗಾರ್ಡನ್ ಇದಾಗಿದೆ.ಪ್ರವಾಸಿಗರು ಖುಷಿಯಿಂದ ಹೂದೋಟದ ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಕಾಶ್ಮೀರಿ ಕನ್ಯೆಯರು

ಸಾಂಪ್ರದಾಯಿಕ ಉಡುಗೆಯಲ್ಲಿ ಕಾಶ್ಮೀರಿ ಕನ್ಯೆಯರು

ಸಾಂಪ್ರದಾಯಿಕ ಉಡುಗೆಯಲ್ಲಿ ಕಾಶ್ಮೀರಿ ಕನ್ಯೆಯರು ಟುಲಿಪ್ ಗಾರ್ಡನ್ ನಲ್ಲಿ ಸಾಗುವ ದೃಶ್ಯ.

ಶಾಲೆಗೆ ಹೋಗುವಾಗ ಬರುವಾಗ ಹೂದೋಟದ ಹಾದಿ

ಶಾಲೆಗೆ ಹೋಗುವಾಗ ಬರುವಾಗ ಹೂದೋಟದ ಹಾದಿ

ದಿನನಿತ್ಯ ಗಾರ್ಡನ್ ಬಳಸಿಕೊಂಡು ಶಾಲೆಗೆ ತೆರಳುವ ಶ್ರೀನಗರದ ಮಕ್ಕಳು.

ಶ್ರೀನಗರದ ಹೂದೋಟ ಚೆಂದ ಹೆಚ್ಚಿಸಿದ ಕಾರ್ಮಿಕರು

ಶ್ರೀನಗರದ ಹೂದೋಟ ಚೆಂದ ಹೆಚ್ಚಿಸಿದ ಕಾರ್ಮಿಕರು

ಶ್ರೀನಗರದ ಇಂದಿರಾಗಾಂಧಿ ಸ್ಮಾರಕದ ಹೂದೋಟದ ಅಂದ ಚೆಂದದ ನಿರ್ವಹಣೆ ಹೊತ್ತ ಕಾರ್ಮಿಕರು. ಎಲ್ಲಾ ಚಿತ್ರಗಳ ಕೃಪೆ: ಪಿಟಿಐ

English summary
Jammu and Kashmir Chief Minister Mufti Mohammad Sayeed recently inaugurated Asia's largest Tulip garden situated on the banks of Dal Lake here for public viewing.This year around ten lakh tulips have been planted in the garden, spread over an area of 15 hectares.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X