ಚಿತ್ರಗಳಲ್ಲಿ : ಐತಿಹಾಸಿಕ 139ನೇ ಜಗನ್ನಾಥ ಯಾತ್ರೆ ಆರಂಭ

By:
Subscribe to Oneindia Kannada

ಅಹಮದಾಬಾದ್, ಜುಲೈ 06: ಸುಮಾರು 400 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ವಾರ್ಷಿಕ ಜಗನ್ನಾಥ ಯಾತ್ರೆಯ 139ನೇ ವರ್ಷ ವಿಧಿ ವಿಧಾನಗಳು ಬುಧವಾರದಿಂದ ಆರಂಭಗೊಂಡಿದೆ. ಲಕ್ಷಾಂತರ ಮಂದಿ ಜಗನ್ನಾಥ ದೇವರ ರಥ ಎಳೆದು ಧನ್ಯತೆ ಅನುಭವಿಸಿದ್ದಾರೆ.

ದಕ್ಷಿಣ ಆಫ್ರಿಕಾಕ್ಕೆ ತೆರಳಲು ಸಜ್ಜಾಗಿರುವ ಪ್ರಧಾನಿ ಮೋದಿ ಅವರು, ನಾನು ಗುಜರಾತ್ ಸಿಎಂ ಆಗಿದ್ದ ಕಾಲದಲ್ಲಿ ರಥಯಾತ್ರೆ ಸಂದರ್ಭದಲ್ಲಿ ಪಾಹಿದ್ ವಿಧಿ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಳ್ಳುತ್ತಿದೆ.

ಜಗನ್ನಾಥ ಎಲ್ಲರಿಗೂ ಒಳ್ಳೆದು ಮಾಡಲಿ, ಒಳ್ಳೆ ಮಳೆ ನೀಡುವ ಮೂಲಕ ರೈತರು ಹಾಗೂ ನಮಗೆ ಶುಭ ತರಲಿ ಎಂದು ಹಾರೈಸಿದ್ದಾರೆ.

ರಥಯಾತ್ರೆಯ ಆಕರ್ಷಣೆ

ಜಗನ್ನಾಥ ದೇವನ ಜತೆ ಹಿರಿಯಣ್ಣ ಬಲದೇವ ಹಾಗೂ ತಂಗಿ ದೇವಿ ಸುಭದ್ರಾ ವಿಗ್ರಹಗಳು ರಥಯಾತ್ರೆಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ.

139ನೇ ಜಗನ್ನಾಥ ಯಾತ್ರೆ ಆರಂಭ

18 ಆನೆಗಳು, 100 ಟ್ರಕ್ ಗಳು 30 ಕ್ಕೂಅಧಿಕ ಧಾರ್ಮಿಕ ಸಂಘಟನೆಗಳ ತಂಡ, 18 ಸಂಗೀತ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.

ಸಂತ ನರಸಿಂಗದಾಸಜಿ ಅವರಿಂದ ನಿರ್ಮಾಣ

ಗುಜರಾತಿನ ಸಂತ ನರಸಿಂಗದಾಸಜಿ ಎಂಬವರ ಕನಸಿನಲ್ಲಿ ಜಗನ್ನಾಥ ದೇವ ಕಾಣಿಸಿಕೊಂಡು ತನ್ನ ಸಹೋದರ ಬಲದೇವ ಮತ್ತು ಸಹೋದರಿ ಸುಭದ್ರೆ ಸಹಿತವಾಗಿ ತನಗೊಂದು ಆಲಯ ಕಟ್ಟಿಸುವಂತೆ ಕೋರಿಕೊಂಡ ಮೇಲೆ ದೇಗುಲ ಕಟ್ಟಿಸಲಾಯಿತು.

ಸಂತ ನರಸಿಂಗದಾಸಜಿ ಕನಸು ನನಸು

ಸಂತ ನರಸಿಂಗದಾಸಜಿ ಕನಸು ನನಸು ಮಾಡಿದ ಗ್ರಾಮಸ್ಥರು. ಕನಸಿನ ಬಗ್ಗೆ ತಿಳಿದ ಗ್ರಾಮಸ್ಥರು ಸಂತ ನರಸಿಂಗದಾಸಜಿ ಅವರು, ಸಂತೋಷದಿಂದಲೇ ಈ ದೇವಾಲಯವನ್ನು ನಿರ್ಮಿಸಿದರು.

ಮೆರವಣಿಗೆಗೆ ಬಲ ಬಂದಿತು

1878ರ ನಂತರ ಈ ದೇಗುಲದಿಂದ ಹೊರಡುವ ಮೆರವಣಿಗೆಗೆ ಬಲ ಬಂದಿತು.ಜಗನ್ನಾಥ, ಬಲದೇವ ಮತ್ತು ಸುಭದ್ರೆಯರ ಮೂರ್ತಿಗಳು ಅತ್ಯಂತ ಆಕರ್ಷಕವಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತದೆ

ರಾಂಚೋರ್, ಮಕಾನ್ ಚೋರ್ ಎಂಬ ಘೋಷಣೆ

ಜಗನ್ನಾಥ ಯಾತ್ರೆ ಆರಂಭದಲ್ಲಿ ರಾಂಚೋರ್, ಮಕಾನ್ ಚೋರ್ ಎಂಬ ಘೋಷಣೆಗಳೊಂದಿಗೆ ರಥ ಮುಂದಕ್ಕೆ ಸಾಗುತ್ತದೆ.

ರೈಲು ನಿಲ್ದಾಣವು ಜಗನ್ನಾಥ ಮಂದಿರ ಹತ್ತಿರವಾಗಿದ್ದು

ಅಹಮದಾಬಾದಿನ ಕಾಳುಪುರ ಎಂಬ ರೈಲು ನಿಲ್ದಾಣವು ಜಗನ್ನಾಥ ಮಂದಿರ ಹತ್ತಿರವಾಗಿದ್ದು, ಮಂದಿರ ಕೇವಲ 3 ಕಿ.ಮೀ. ದೂರದಲ್ಲಿದೆ. ಇದಲ್ಲದೆ ಮಣಿನಗರ ಮತ್ತು ಸಬರಮತಿ ರೈಲು ನಿಲ್ದಾಣಗಳ ಮೂಲಕವೂ ಮಂದಿರಕ್ಕೆ ತಲುಪಬಹುದು.

ಅಮಿತ್ ಶಾರಿಂದ ಮಂದಿರಕ್ಕೆ ಭೇಟಿ

ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಂದ ಮಂದಿರಕ್ಕೆ ಭೇಟಿ

ಗುಜರಾತಿನ ಸಿಎಂರಿಂದ ದೇವರಿಗೆ ಆರತಿ

ಗುಜರಾತಿನ ಸಿಎಂ ಆನಂದಿ ಪಟೇಲ್ ರಿಂದ ದೇವರಿಗೆ ಆರತಿ

ಅಲಂಕೃತಗೊಂಡ ಆನೆಗಳು

ರಥಯಾತ್ರೆಗೆ ಮುನ್ನ ಅಲಂಕೃತಗೊಂಡ ಆನೆಗಳು

English summary
The 139th rath yatra of Lord Jagannath today commenced on it's 15 km journey in the walled city here amid tight security arrangements even as lakhs of devotees queued up to have a glimpse of the deity.
Please Wait while comments are loading...