ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುದ್ಧ ಪೂರ್ಣಿಮಾ ವಿರಾಗಿಯ ಸ್ಮರಣೆಯಲ್ಲಿ ಭಾರತ

By Mahesh
|
Google Oneindia Kannada News

ಬೆಂಗಳೂರು, ಮೇ.4: ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದೆನಿಸಿರುವ ಬುದ್ಧ ಪೂರ್ಣಿಮಾ ಸೋಮವಾರ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಹುಣ್ಣಿಮೆ ದಿನ ಶ್ರದ್ಧಾ ಭಕ್ತಿಗಳಿಂದ ವಿರಾಗಿಯನ್ನು ಸ್ಮರಿಸಲಾಗಿದೆ.

ಭಗವಾನ್ ಬುದ್ಧನ 2559ನೇ ಜನ್ಮ ದಿನಾಚರಣೆ ಮಹೋತ್ಸವವನ್ನು ಭಕ್ತಿ ಶ್ರದ್ಧೆ, ಧ್ಯಾನದಿಂದ ದೇಶದ ವಿವಿಧೆಡೆ ಸೋಮವಾರ ಆಚರಿಸಲಾಗಿದೆ. ಭಾರತ, ನೇಪಾಳ ಹಾಗೂ ಶ್ರೀಲಂಕಾದಲ್ಲಿ ಪ್ರಮುಖವಾಗಿ ಬುದ್ಧ ಜಯಂತಿ ಆಚರಣೆ ಜೋರಾಗಿರುತ್ತದೆ.

ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದವನನ್ನು ಬುದ್ಧನೆಂದು ಕರೆಯುತ್ತಾರೆ. ಕೆಲವೊಮ್ಮೆ 'ಬುದ್ಧ' ಪದವನ್ನು ಕೇವಲ ಬೌದ್ಧಧರ್ಮದ ಸ್ಥಾಪಕನಾದ ಸಿದ್ದಾರ್ಥ ಗೌತಮನನ್ನು ಸೂಚಿಸಲು ಉಪಯೋಗಿಸಲ್ಪಡುತ್ತದೆ.

ಬುದ್ದ ಸಂದೇಶ:
ಸಂಶೋಧನೆ,ತಿಳುವಳಿಕೆ,ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು.ಇದುವೇ ಬುದ್ಧ ಧಮ್ಮ. [ಶುಭಸಂಕಲ್ಪ: ಸುಳ್ಳು ಆಪಾದನೆ ಎಂಬ ಮುಳ್ಳು ಚುಚ್ಚಿದರೆ...]

ನೇಪಾಳದ ಶಾಲೆಗಳಲ್ಲಿ ಗುರು ಪೂರ್ಣಿಮೆಯನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸೋಮವಾರ ಹಲವೆಡೆ ಸಾಂಪ್ರದಾಯಿಕ ದಿರಿಸುಗಳಲ್ಲಿ ಬೌದ್ಧ ಮತ ಅವಲಂಬಿಗಳು ಸಾಮ್ರಾಣಿ, ಗಂಧ ಧೂಪಗಳನ್ನು ಹಚ್ಚಿ ಪ್ರಾರ್ಥಿಸುತ್ತಾರೆ. ಗುಡ್ಡಗಾಡು ಪ್ರದೇಶ, ಹಿಮಾಲಯದ ತಪ್ಪಲಿನ ಚೈತಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ವಿವಿಧೆಡೆ ಬುದ್ಧ ಜಯಂತಿ ಆಚರಣೆ ಚಿತ್ರಗಳು ಇಲ್ಲಿವೆ...

ಆಲೋಚನಾ ರಹಿತ ಶುದ್ಧ ಜಾಗೃತ ಸ್ಥಿತಿ

ಆಲೋಚನಾ ರಹಿತ ಶುದ್ಧ ಜಾಗೃತ ಸ್ಥಿತಿ

ಧ್ಯಾನದ ಬಗ್ಗೆ ಬುದ್ಧ: ನಮ್ಮ ಆಲೋಚನೆ ಲಹರಿ ಸದಾ ಎಲ್ಲೆಡೆ ಹರಿಯುತ್ತಿರುತ್ತದೆ. ಮನಸ್ಸು ಚಂಚಲ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಈ ಆಲೋಚನೆಗಳನ್ನು ತಡೆಹಿಡಿಯುವ ಕ್ರಮವೇ ಧ್ಯಾನ. ಸಂಪೂರ್ಣ ತಡೆ ಹಿಡಿಯಲ್ಪಟ್ಟ ಸ್ಥಿತಿಯೇ ಧ್ಯಾನಾವಸ್ಥೆ' ಎಂದನು ಬುದ್ಧನ ಪ್ರಕಾರ ಧ್ಯಾನ ಎಂದರೆ "ಆಲೋಚನಾ ರಹಿತ ಶುದ್ಧ ಜಾಗೃತ ಸ್ಥಿತಿ".

ಚಿತ್ರ: ತ್ರಿಪುರ ರಾಜಧಾನಿ ಅಗರ್ತಲದಲ್ಲಿ ಭಗವಾನ್ ಬುದ್ಧದ ಪ್ರತಿಮೆ ಶುದ್ಧೀಕರಣ.
ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಮೋದಿ

ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಮೋದಿ

ತಾಳಕಟೋರ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಬುದ್ಧ ಪೂರ್ಣಿಮ ಕಾರ್ಯಕ್ರಮದಲ್ಲಿ 31 ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ಬುದ್ಧನ ಆದರ್ಶದ ಹಾದಿ ಹಿಡಿಯಿರಿ

ಬುದ್ಧನ ಆದರ್ಶದ ಹಾದಿ ಹಿಡಿಯಿರಿ

ಬುದ್ಧ ರಾಜ ವೈಭೋಗ ತ್ಯಜಿಸಿ ವಿರಾಗಿಯಾದ. ಹತ್ಯೆ ಮಾಡಲು ಬಂದವನಲ್ಲಿ ಪ್ರೀತಿ, ಕರುಣೆ ಹುಟ್ಟಿಸಿದ. ಸಂಘಟನೆಯ ಮಹತ್ವವನ್ನು ಜಗತ್ತಿಗೆ ಸಾರಿ ಹೇಳಿದ ಬುದ್ಧನ ಆದರ್ಶದ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದು ಮೋದಿ ಕರೆ ನೀಡಿದರು.

ಬುದ್ಧನ ಜನ್ಮ ಸ್ಥಾನದಲ್ಲಿ ಭೂಕಂಪದ ಆತಂಕ

ಬುದ್ಧನ ಜನ್ಮ ಸ್ಥಾನದಲ್ಲಿ ಭೂಕಂಪದ ಆತಂಕ

ಬುದ್ಧ ಜನ್ಮಸ್ಥಾನವಾದ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ. ಅಲ್ಲಿಯ ಜನರು ಸಂತ್ರಸ್ತರಾಗಿದ್ದಾರೆ. ಅವರ ಕಣ್ಣೀರು ಒರೆಸುವ ಸಂಕಲ್ಪ ಮಾಡಬೇಕಿದೆ ಎಂದು ಮೋದಿ ಹೇಳಿದರು.
ಚಿತ್ರದಲ್ಲಿ : ಕಪಿಲಾ ವತ್ಸಾಯನ್ ಅವರನ್ನು ಸನ್ಮಾನಿಸಿದ ಮೋದಿ ಪಿಟಿಐ ಚಿತ್ರ

ಕಠ್ಮಂಡುವಿನಲ್ಲಿ ಧೂಪ ದೀಪ ಆರಾಧನೆ

ಕಠ್ಮಂಡುವಿನಲ್ಲಿ ಧೂಪ ದೀಪ ಆರಾಧನೆ

ಬೌಧನಾಥ್ ಸ್ತೂಪದಲ್ಲಿ ಬುದ್ಧ ಪೂರ್ಣಿಮಾ ಆಚರಣೆ ಮಾಡಲಾಗಿದೆ. ಬೆಳಗ್ಗೆ ಧ್ವಜಾರೋಹಣ, ವಿಶೇಷ ಪ್ರಾರ್ಥನೆ ನಂತರ ಭಿಕ್ಕುಗಳ ಪ್ರವಚನ ಎಲ್ಲೆಡೆ ಕೇಳಿ ಬಂದಿದೆ.

ಲೆಹ್ ನಲ್ಲಿ ಬುದ್ಧ ಜಯಂತಿ ಆಚರಣೆ

ಲೆಹ್ ನಲ್ಲಿ ಬುದ್ಧ ಜಯಂತಿ ಆಚರಣೆ

ಲೆಹ್ ನಲ್ಲಿ ಬುದ್ಧ ಜಯಂತಿ ಆಚರಣೆಗೆ ನಮ್ಯಾಲ್ ತ್ಸೆಮೊ ಬೌದ್ಧ ಮಂದಿರದತ್ತ ಸಾಗುತ್ತಿರುವ ಜನತೆ.

ರಾಂಚಿಯಲ್ಲಿ ಬುದ್ಧ ಪೂರ್ಣಿಮಾ

ರಾಂಚಿಯಲ್ಲಿ ಬುದ್ಧ ಪೂರ್ಣಿಮಾ

ರಾಂಚಿಯಲ್ಲಿ ಬುದ್ಧ ಪೂರ್ಣಿಮಾ ಆಚರಣೆ ಅಂಗವಾಗಿ ಬುದ್ಧನ ಮೂರ್ತಿಯನ್ನು ಮೆರವಣಿಗೆ ನಡೆಸಲಾಗಿದೆ.

ಭೋಪಾಲ್ ನಲ್ಲಿ ಬುದ್ಧನ ಜಯಂತಿ

ಭೋಪಾಲ್ ನಲ್ಲಿ ಬುದ್ಧನ ಜಯಂತಿ

ಭೋಪಾಲ್ ನಲ್ಲಿ ಬುದ್ಧನ ಜಯಂತಿ ಆಚರಣೆ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕಿರಿಯ ಸನ್ಯಾಸಿಗಳು.

ಹರಿದ್ವಾರದಲ್ಲಿ ಪುಣ್ಯಸ್ನಾನ

ಹರಿದ್ವಾರದಲ್ಲಿ ಪುಣ್ಯಸ್ನಾನ

ಬುದ್ಧ ಪೂರ್ಣಿಮಾ ಅಂಗವಾಗಿ ಹರಿದ್ವಾರದ ಹರ್ ಕಿ ಪೌರಿಯಲ್ಲಿ ಗಂಗಾನದಿಯಲ್ಲಿ ಮಿಂದು ಪುಣ್ಯಸ್ನಾನ ಕೈಗೊಂಡ ಭಕ್ತರು

ಬೋಧ್ ಗಯಾದಲ್ಲಿ ಬುದ್ಧ ಜಯಂತಿ

ಬೋಧ್ ಗಯಾದಲ್ಲಿ ಬುದ್ಧ ಜಯಂತಿ

ಬೋಧ್ ಗಯಾದಲ್ಲಿ ಬುದ್ಧ ಜಯಂತಿ ಆಚರಣೆ ಸಂಭ್ರಮ ನೃತ್ಯ

ಬೋಧ್ ಗಯಾದಲ್ಲಿ ನಿತೀಶ್ ಕುಮಾರ್

ಬೋಧ್ ಗಯಾದಲ್ಲಿ ನಿತೀಶ್ ಕುಮಾರ್

ಬೋಧ್ ಗಯಾದಲ್ಲಿ ನಡೆದ ಬುದ್ಧ ಜಯಂತಿಯಲ್ಲಿ ಪಾಲ್ಗೊಂಡಿದ್ದ ರಾಜಕೀಯ ಮುಖಂಡ ನಿತೀಶ್ ಕುಮಾರ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪುರಿಯ ಮರಳು ಶಿಲ್ಪಿಯ ಪ್ರಾರ್ಥನೆ

ಪುರಿಯ ಮರಳು ಶಿಲ್ಪಿಯ ಪ್ರಾರ್ಥನೆ

ಬುದ್ಧ ಜಯಂತಿಯ ಅಂಗವಾಗಿ ಪುರಿಯ ಮರಳುಶಿಲ್ಪಿ ಸುದರ್ಶನ್ ಅವರ ಪ್ರಾರ್ಥನೆ

ಬುದ್ಧ ಪೂರ್ಣಿಮಾ ವಿರಾಗಿಯ ಸ್ಮರಣೆ ಮಂತ್ರ

ಓಂ ಮಣಿ ಪದ್ಮೆ ಹಮ್ ಬುದ್ಧನ ಮಂತ್ರ ವಿಡಿಯೋ

English summary
In pictures:Buddha Purnima is also known as Vesak or Vesakha. This auspicious day commemorates the birth, nirvana (enlightenment), and the death of Gautama Buddha.The sacred festival of Buddhists is observed as a holiday in many countries, including India, Sri Lanka, and Nepal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X