ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಅತ್ಯಾಚಾರ ಬರ್ಬರ ಕೊಲೆ

ಯುವತಿಯನ್ನು ಹತ್ಯೆಗೈಯಲು ಮೂಲಕ ಕಾರಣ ಆಕೆ ಯುವಕನೊಂದಿಗೆ ಮದುವೆ ನಿರಾಕರಿಸಿದ್ದು. ಮದುವೆಯಾಗಲೇಬೇಕೆಂದು ದುಂಬಾಲು ಬಿದ್ದಿದ್ದ ಯುವಕ ಆಕೆಯ ಮನೆಗೆ ಬಂದಾಗ ಆತನ ಕಪಾಳಕ್ಕೆ ಯುವತಿ ಬಿಗಿದಿದ್ದಳು.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಹರ್ಯಾಣ, ಮೇ 13: 2012 ರ ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚರ ಪ್ರಕರಣಕ್ಕಿಂತ ಘೋರ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ಹರ್ಯಾಣದ ರೋಹ್ಟಕ್ ನಲ್ಲಿ ನಡೆದಿದೆ.

ಏಳು ಜನ ಕಾಮುಕರ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅತ್ಯಾಚಾರದ ನಂತರ ಬದುಕಿದ್ದ ಸಂತ್ರಸ್ಥೆಯ ತಲೆಯ ಮೇಲೆ ವಿಕೃತ ಅತ್ಯಾಚಾರಿಗಳು ವಾಹನ ಚಲಾಯಿಸಿದ್ದಾರೆ ಮಾಹಿತಿ ಲಭ್ಯವಾಗಿದೆ.[ಈ ಮೃಗಗಳು ಮಾಡಿದ್ದು ಕ್ಷಮಿಸಲು ಅರ್ಹವಲ್ಲದ ಅಪರಾಧ, ಬದುಕಲು ಅರ್ಹರಲ್ಲ!]

ಯುವತಿಯನ್ನು ಹತ್ಯೆಗೈಯಲು ಮೂಲಕ ಕಾರಣ ಆಕೆ ಯುವಕನೊಂದಿಗೆ ಮದುವೆ ನಿರಾಕರಿಸಿದ್ದು. ಮದುವೆಯಾಗಲೇಬೇಕೆಂದು ದುಂಬಾಲು ಬಿದ್ದಿದ್ದ ಯುವಕ ಆಕೆಯ ಮನೆಗೆ ಬಂದಾಗ ಆತನ ಕಪಾಳಕ್ಕೆ ಯುವತಿ ಬಿಗಿದಿದ್ದಳು. ಸೇಡು ತೀರಿಸಿಕೊಳ್ಳಲು ತಹತಹಿಸುತ್ತಿದ್ದ ಯುವಕ, ಆಕೆ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಗೇಟಿನ ಬಳಿಯಿಂದ ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದಿದ್ದಾರೆ.

In a barbaric incident 7 men raped a girl in Haryana

ಒಟ್ಟು ಏಳು ಜನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಥಮ ಮಾಹಿತಿಯಿಂದ ತಿಳಿದುಬಂದಿದೆ. ನಂತರ ಆಕೆಯ ದೇಹವನ್ನು ಚೂಪಾದ ಆಯುಧಗಳಿಂದ ಚುಚ್ಚಿದ್ದಾರೆ. ಸಾಲದೆಂಬಂತೆ, ಆಕೆಯ ತಲೆ ಮೇಲೆ ವಾಹನ ಹಾಯಿಸಿ ತಲೆಬುರುಡೆ ಒಡೆದುಹಾಕಿದ್ದಾರೆ.

ಅತ್ಯಾಚಾರಿಗಳ ಬಂಧನಕ್ಕೆ ರೋಹ್ಟಕ್ ಪೊಲೀಸರು ಬಲೆ ಬೀಸಿದ್ದಾರೆ. ಹರ್ಯಾಣದಲ್ಲಿ ಈ ಹೇಯ ಕೃತ್ಯದ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದೆ. ಭಾರತದಲ್ಲಿ ಹುಟ್ಟಿದ್ದು ನಮಗೆ ಹೆಮ್ಮೆ, ಆದರೆ, ಭಾರತದಲ್ಲಿ ಹೆಣ್ಣಾಗಿ ಹುಟ್ಟಿದ್ದು ನಿಜಕ್ಕೂ ಭಯಾಕನ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿರ್ಭಯಾ ಹಂತಕರಿಗೇನೋ ಗಲ್ಲಾಯಿತು. ಆದರೆ, ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎಳ್ಳಷ್ಟೂ ಕಡಿಮೆಯಾಗಿಲ್ಲ. ಈ ಕೃತ್ಯ ಎಸಗಿದವರನ್ನು ಗಲ್ಲಿಗೇರಿಸಬೇಕೆಂದು ಯುವತಿಯ ಪೋಷಕರು ಆಗ್ರಹಿಸುತ್ತಿದ್ದಾರೆ.

English summary
In a barbaric incident 7 men raped a girl in Haryana. She dies. This is more cruel than Nirbhaya case, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X