ರೈಲ್ವೇ ಬಜೆಟ್ 2017: 9 ಪ್ರಮುಖ ಘೋಷಣೆಗಳು

ಈ ಬಾರಿ ಕೇಂದ್ರ ಬಜೆಟ್ ಜತೆ ರೈಲ್ವೆ ಬಜೆಟನ್ನು ಒಟ್ಟಾಗಿ ಮಂಡಿಸಲಾಯಿತು. ಅರುಣ್ ಜೇಟ್ಲಿ ಮಂಡಿಸಿದ ಬಜೆಟಿನಲ್ಲಿ ಹೇಳಿಕೊಳ್ಳುವಂತ ಯಾವುದೆ ಹೊಸ ರೈಲ್ವೇ ಘೋಷಣೆಗಲೂ ಕಾಣಿಸಲಿಲ್ಲ.

Subscribe to Oneindia Kannada

ನವದೆಹಲಿ, ಫೆಬ್ರವರಿ 1: ಈ ಬಾರಿ ರೈಲ್ವೇ ಬಜೆಟ್ ಮತ್ತು ಕೇಂದ್ರ ಬಜೆಟನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಒಟ್ಟಾಗಿ ಮಂಡಿಸಿದ್ದಾರೆ. ಬಜೆಟಿನಲ್ಲಿ ರೈಲ್ವೇಗಾಗಿ ಒಂದಷ್ಟು ಘೋಷಣೆಗಳನ್ನು ಅರುಣ್ ಜೇಟ್ಲಿ ಹೊರಡಿಸಿದ್ದಾರೆ. ಆದರೆ ಹೇಳಿಕೊಳ್ಳುವಂತ ಯಾವ ಘೋಷಣೆಗಳನ್ನೂ ಬಜೆಟಿನಲ್ಲಿ ಕಾಣಿಸಿಕೊಂಡಿಲ್ಲ.

 Important points related to Railway from Jaitley’s Union budget

2017ರ ರೈಲ್ವೇ ಬಜೆಟಿನ ಪ್ರಮುಖ ಅಂಶಗಳು ಹೀಗಿವೆ, [ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]

*ಬಜೆಟಿನಲ್ಲಿ ರೈಲ್ವೇ ಸೇರಿ ಸಾರಿಗೆಗೆ 2.41 ಲಕ್ಷ ಕೋಟಿ ರೂಪಾಯಿ ಎತ್ತಿಡಲಾಗಿದೆ. ಒಟ್ಟಾರೆ ರೈಲ್ವೇ ಬಜೆಟ್ ಗಾತ್ರದಲ್ಲಿ ಶೇಕಡಾ 22 ಹೆಚ್ಚಳ.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]


*2019ರ ಒಳಗೆ ದೇಶದಲ್ಲಿರುವ ಎಲ್ಲಾ ರೈಲುಗಳಲ್ಲಿಯೂ ಬಯೋ ಟಾಯ್ಲೆಟ್ ಅಳವಡಿಕೆ


*IRCTC ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡುವಾಗ ವಿಧಿಸಲಾಗುತ್ತಿದ್ದ ಸೇವಾ ತೆರಿಗೆ ರದ್ದು[ಬಜೆಟ್ 2017: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕಾಚಾರ]


*ಖಾಸಗಿ ಪಾಲುದಾರಿಕೆಯೊಂದಿಗೆ ನಿರ್ಧಿಷ್ಟ ಸ್ಥಳಗಳ ನಡುವೆ ಸರಕು ಸಾಗಣೆಗೆ ವ್ಯವಸ್ಥೆ


*ತೀರ್ಥಯಾತ್ರೆ ಮತ್ತು ಪ್ರವಾಸಗಳಿಗಾಗಿ ವಿಶೇಷ ರೈಲಿನ ವ್ಯವಸ್ಥೆ.


*ದೇಶದಲ್ಲಿ ಹೊಸ ಮೆಟ್ರೋ ರೈಲು ನೀತಿ ಜಾರಿ. ಈ ಮೂಲಕ ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಠಿ.


*2017-18ಕ್ಕೆ ಕನಿಷ್ಟ 25 ರೈಲ್ವೇ ನಿಲ್ದಾಣಗಳ ಸ್ಥಾಪನೆ. 500 ರೈಲ್ವೇ ನಿಲ್ದಾಣಗಳಲ್ಲಿ ಹಿರಿಯರು ಮತ್ತು ವಿಶೇಷ ಚೇತನರಿಗೆ

*ಅನುಕೂಲವಾಗಲು ಎಸ್ಕಲೇಟರ್ ಮತ್ತು ಲಿಫ್ಟ್ ಗಳ ಅಳವಡಿಕೆ.[ಬಜೆಟ್ 2017ರ ಪ್ರಮುಖ ಘೋಷಣೆಗಳು]


*ಮುಂದಿನ 5 ವರ್ಷಗಳಲ್ಲಿ ರೈಲ್ವೇ ಸುರಕ್ಷಾ ನಿಧಿ 1 ಲಕ್ಷ ಕೋಟಿಗೆ ಏರಿಕೆ[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]


*ರೈಲ್ವೇಗೆ ಸಂಬಂಧಿಸಿದ ಸರಕಾರಿ ಪ್ರಾಯೋಜಿತ ಕಂಪೆನಿಗಳಾದ IRCON ಮತ್ತು IRCTC ಷೇರು ಮಾರುಕಟ್ಟೆಗೆ ಪ್ರವೇಶ

English summary
Arun Jaitley dinot not announce much attracted new Railway projects in his 2017 Union budge.
Please Wait while comments are loading...