ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಶ್ರೇಷ್ಠ ಬರಹಗಾರನಲ್ಲː ಚೇತನ್ ಭಗತ್

|
Google Oneindia Kannada News

ನವದೆಹಲಿ, ಅ.19 :' ನಾನು ಶ್ರೇಷ್ಠ ಬರಹಗಾರನಲ್ಲ, ಆದರೆ ಜನಪ್ರಿಯ ಬರಹಗಾರ' ಹೀಗೆ ತಮ್ಮನ್ನು ತಾವೇ ಚಿತ್ರಿಸಿಕೊಂಡವರು ಖ್ಯಾತ ಕಾದಂಬರಿಕಾರ ಚೇತನ್ ಭಗತ್.

ದೆಹಲಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡಿದ ಚೇತನ್ ಭಗತ್, ನನ್ನ ಪುಸ್ತಕಗಳು ಉತ್ತಮ ರೀತಿಯಲ್ಲಿ ಮಾರಾಟವಾಗುತ್ತವೆ ಎಂದ ಮಾತ್ರಕ್ಕೆ ಬರವಣಿಗೆ ಶ್ರೇಷ್ಠವಾಗಿದೆ ಎಂದಲ್ಲ ಎಂದು ಹೇಳಿದ್ದಾರೆ.[ಚೇತನ್ ಭಗತ್ 'ಹಾಫ್ ಗರ್ಲ್ ಫ್ರೆಂಡ್' ಬುಕ್ ಮಾಡ್ಕೊಳಿ]

chetan bhagat

ಭಾರತೀಯರು ನನ್ನ ಕಾದಂಬರಿ ಓದಬೇಕು ಎಂದು ಇಷ್ಟಪಡುತ್ತೇನೆ. ಯಾಕೆಂದರೆ ನಾನು ಭಾರತೀಯರಿಗಾಗಿ, ಭಾರತೀಯ ಕತೆಯನ್ನೇ ಬರೆಯುತ್ತಾನೆ ಎಂದಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಭಗತ್, ಬಾಲಿವುಡ್‌ ಸಿನಿಮಾಗಳ ವಿವರಣೆ ನೀಡಿದರು. ಥ್ರೀ ಇಡಿಯಟ್ಸ್ ಸಿನಿಮಾದ ಕತೆಯನ್ನು ಇಟ್ಟುಕೊಂಡು ಜೀವನದಲ್ಲಿ ಸ್ಫೂರ್ತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಶ್ವವಿದ್ಯಾಲಯದಿಂದ ಬಾಲಿವುಡ್ ವರೆಗೆ ಪ್ರಯಾಣ ಬೆಳೆಸಿದ ರೀತಿಯನ್ನು ವಿವರಿಸಿದರು. ನಮ್ಮ ಅಂತರಾಳದ ಮಾತನ್ನು ಯಾಕೆ ಕೇಳಬೇಕು? ಎಂಬ ವಿವರಣೆ ನೀಡಿದರು.

2004ರಲ್ಲಿ ನನ್ನ ಮೊದಲ ಕಾದಂಬರಿ ಬಿಡುಗಡೆಯಾದಾಗ ಭಾರತದ ಸಾಹಿತ್ಯದ ದೃಷ್ಟಿಕೋನ, ಯುವಜನರ ಚಿಂತನೆಗಳು ಬೇರೆಯಾಗಿದ್ದವು. ಆ ಸಮಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಕಲಿಯಬೇಕು ಎಂಬ ಮನಸ್ಥಿತಿ ಯುವಕರಲ್ಲಿತ್ತು ಎಂದು ಹೇಳಿದರು.[ಭಾರತೀಯ ಸಂಜಾತ ನೀಲ್ ಮುಖರ್ಜಿ ಕೈತಪ್ಪಿದ ಬೂಕರ್]

ನನಗೆ ಗೊತ್ತು ನಾನೊಬ್ಬ ಉತ್ತಮ ಬರಹಗಾರ, ಅಷ್ಟೇ ಅಲ್ಲದೇ ಉತ್ತಮ ಆದಾಯ ತಂದುಕೊಡಬಲ್ಲ ಬರಹಗಾರ, ನಾನು ಜನರಿಗಾಗಿ ಬರೆಯುತ್ತೇನೆ. ಜನ ಅದನ್ನು ಒಪ್ಪಿಕೊಳ್ಳುತ್ತಾರೆ. ಇಲ್ಲಿ ಬರೆಯುವುದಕ್ಕಿಂತ ಒಪ್ಪಿಕೊಳ್ಳುವ ಗುಣ ಮುಖ್ಯ ಎಂದರು.

ಸಂವಾದವಾಗಿ ಬದಲಾದ ಭಾಷಣ ಭಗತ್ ರ ಇತ್ತೀಚಿನ ಕೃತಿ 'ಹಾಫ್ ಗರ್ಲ್ ಫ್ರೆಂಡ್ ' ಕಡೆ ಹೊರಳಿತು. ವಿದ್ಯಾವಂತ ಯುವತಿಯರು ಅವಿದ್ಯಾವಂತ ಯುವಕರೊಂದಿಗೆ ನಡೆದುಕೊಳ್ಳುವ ರೀತಿ, ಬದಲಾಗುವ ಅವರ ಭಾವನೆಗಳನ್ನು ನಾನು ಕೃತಿಯಲ್ಲಿ ಉಲ್ಲೇಖಿಸಿದ್ದೇನೆ ಎಂದು ತಿಳಿಸಿದರು.

English summary
He admits he may not be in the same league as the literary greats of India when it comes to fiction, but has revamped the concept of "bestsellers". This, says novelist Chetan Bhagat, is because his stories are by an Indian and written for Indians. The 40-year old was interacting with the alumni and students of the Indian Institute of Technology-Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X