ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೋಟು ರದ್ದು ಮಾಡಿದ್ದರಿಂದ ಕಪ್ಪು ಹಣ ಬಯಲಾಯಿತು ಸುಪ್ರೀಂ'

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ನವೆಂಬರ್ 24: ಕಾನೂನು ಬಾಹಿರವಾಗಿರುವ ಕಪ್ಪು ಹಣದ ಪರ್ಯಾಯ ಆರ್ಥಿಕತೆಯನ್ನು ಬಯಲು ಮಾಡುವುದೇ ನೋಟು ರದ್ದು ಹಿಂದಿನ ಉದ್ದೇಶವಾಗಿತ್ತು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ. ನಗದು ವ್ಯವಹಾರದ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೇಂದ್ರ ಸರಕಾತ ತಿಳಿಸಿದೆ.

ನಕಲಿ ನೋಟುಗಳ ತೊಂದರೆಯನ್ನು ನಿಯಂತ್ರಣಕ್ಕೆ ತರಲಾಗಿದೆ ಮತ್ತು ಉಗ್ರಗಾಮಿಗಳ ಗುಂಪಿಗೆ ಹಣದ ಪೂರೈಕೆ ನಿಂತಿದೆ ಎಂದು ಕೋರ್ಟ್ ಗೆ ಹೇಳಿದ್ದು, ನೋಟು ರದ್ದು ನಿರ್ಧಾರದ ನಂತರ ಜನರಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಕೂಡ ಇದೇ ವೇಳೆ ತಿಳಿಸಿದೆ.[ನರೇಂದ್ರ ಮೋದಿ ಸಮೀಕ್ಷೆ: ನೋಟು ರದ್ದು ಬೆಂಬಲಿಸಿದ ಶೇ 93ರಷ್ಟು ಜನ!]

Illegal parallel economy unearthed post demonetisation

ಎಲ್ಲ ಬ್ಯಾಂಕ್ ವ್ಯವಹಾರಗಳು ಸಲೀಸಾಗಿ ನಡೆಯಲು ತೆಗೆದುಕೊಳ್ಳ ಬೇಕಾದ ಎಲ್ಲ ಕ್ರಮಗಳನ್ನು ಅನುಸರಿಸಲಾಗಿದೆ. ಜತೆಗೆ ಎಟಿಎಂಗಳಲ್ಲಿ ಬದಲಾವಣೆಗಳನ್ನು ತ್ವರಿತ ಗತಿಯಲ್ಲಿ ಮಾಡಲಾಗುತ್ತಿದೆ. ಇಷ್ಟೆಲ್ಲ ಆದ ನಂತರವೂ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದರ ನಿವಾರಣೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೋರ್ಟ್ ಗೆ ಕೇಂದ್ರ ಸರಕಾರ ತಿಳಿಸಿದೆ.

English summary
The objective behind demonetisation was to unearth an illegal parallel economy, the centre has told the Supreme Court. In its affidavit filed before the Supreme Court, the centre stated that demonetisation is aimed at reducing the ratio of cash transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X