ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಐಐಪಿಎಂ ಬಾಗಿಲು ಮುಚ್ಚಲ್ಲ, ಸ್ವರೂಪ ಬದಲು ಅಷ್ಟೇ'

By Mahesh
|
Google Oneindia Kannada News

ನವದೆಹಲಿ, ಜು.3: ಪ್ರತಿಷ್ಠಿತ ಬಿ ಸ್ಕೂಲ್- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಹಾಗೂ ಮ್ಯಾನೇಜ್ಮೆಂಟ್(ಐಐಪಿಎಂ) ಬಾಗಿಲು ಮುಚ್ಚಲಿದೆ ಎಂಬ ಸುದ್ದಿಯನ್ನು ಐಐಪಿಎಂ ಸ್ಥಾಪಕ ಅರಿಂಧಮ್ ಚೌಧುರಿ ಅವರು ತಳ್ಳಿ ಹಾಕಿದ್ದಾರೆ. ಐಐಪಿಎಂ 2.0 ಹೊರ ಬರಲಿದ್ದು, ಹೊಸ ವಿನ್ಯಾಸ ಹೊಸ ರೂಪದಲ್ಲಿ ಮುಂದುವರೆಯಲಿದೆ ಎಂದಿದ್ದಾರೆ.

ಜ್ಞಾನ ಹಂಚಿಕೆ ವಿಷಯದಲ್ಲಿ ಹಲವು ಸಂಸ್ಥೆಗಳ ಜೊತೆ ಕೈಜೋಡಿಸಲಾಗುವುದು, ನಮ್ಮ ಬೋಧಕ ಸಿಬ್ಬಂದಿ ಎಕನಾಮಿಕ್ಸ್, ಉದ್ದಿಮೆ, ನಾಯಕತ್ವ, ಉದ್ಯಮ ಸ್ಥಾಪನೆ ಹಾಗೂ ವ್ಯಕ್ತಿತ್ವ ವಿಕಸನ ವಿಷಯವನ್ನು ಹೇಳಿಕೊಡುತ್ತಾರೆ ಎಂದು ಅರಿಂಧಮ್ ಹೇಳಿದ್ದಾರೆ.

IIPM not shutting down, only changing model: Arindam Chaudhuri

ಆದರೆ, ಹಳೆ ಐಐಪಿಎಂ ಕ್ಯಾಂಪಸ್ ಗಳಲ್ಲಿ ಹೊಸದಾಗಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದಿಲ್ಲ. ಅಕ್ಟೋಬರ್ ನಲ್ಲಿ ಈಗಿನ ಬ್ಯಾಚ್ ಮುಗಿಯಲಿದೆ ಎಂದಿದ್ದಾರೆ.

ಈ ಹಿಂದೆ ಐಐಪಿಎಂ ಎಂಬಿಎ, ಬಿಬಿಎ, ಮತ್ತಿತರ ಮ್ಯಾನೇಜ್ ಮೆಂಟ್ ಕೋರ್ಸ್‌ಗಳ ಬಗ್ಗೆ ಪ್ರಚಾರ ಮತ್ತು ಜಾಹೀರಾತು ನೀಡದಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು. ಯಾವುದೆ ಮ್ಯಾನೇಜ್ ಮೆಂಟ್ ಸಂಸ್ಥೆಯಾದರೂ ಮೊದಲು ತಾಂತ್ರಿಕ ಶಿಕ್ಷಣ ಬೋರ್ಡ್‌ ನಿಂದ (ಎಐಸಿಟಿಇ) ಯಿಂದ ಅನುಮತಿ ಪಡೆದುಕೊಂಡಿರಬೇಕು. ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಅನಾನುಕೂಲವಾಗುವ ರೀತಿಯಲ್ಲಿ ನಡೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ನ್ಯಾಯಾಲಯ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Indian Institute of Planning and Management (IIPM) founder Arindam Chaudhuri on Friday denied the educational institution was closing down and said it had only changed its model to enter into technical collaboration of knowledge-sharing with various institutions in India as IIPM 2.0.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X