ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್ಪೋರ್ಟ್ ನಲ್ಲಿ ಹಿಂದಿ ಬರುವುದಾದರೆ ಕನ್ನಡ ಯಾಕೆ ಬರಬಾರದು?

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಜೂನ್ 23: 'ಪಾಸ್ಪೋರ್ಟ್ ಗಳು ಇನ್ನು ಮುಂದೆ ಹಿಂದಿ ಭಾಷೆಯಲ್ಲೂ ಇರಲಿವೆ' ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಈ ಮೂಲಕ ನಮ್ಮ ಮೇಲೆ ಮತ್ತೊಮ್ಮೆ ಹಿಂದಿ ಹೇರಿಕೆಯ ಸವಾರಿಗೆ ಕೇಂದ್ರ ಮುಂದಾಗಿದೆ. ಜತೆಗೆ ಹಿಂದಿ ಇರಬಹುದಾದರೆ ಕನ್ನಡದಲ್ಲಿ ಪಾಸ್ಪೋರ್ಟ್ ಗಳು ಯಾಕಿರಬಾರದು ಎಂಬ ಪ್ರಶ್ನೆ ಉದ್ಭವಿಸಿದೆ.

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯ ಬಗ್ಗೆ ತೀವ್ರ ಅಪಸ್ವರಗಳು ಕೇಳಿ ಬರುತ್ತಿವೆ. ಇದೇ ವೇಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನವದೆಹಲಿಯಲ್ಲಿ ದ್ವಿಭಾಷಾ ಪಾಸ್ಪೋರ್ಟ್ ಘೋಷಣೆ ಮಾಡಿದ್ದಾರೆ. "ಇನ್ನು ಮುಂದೆ ಪಾಸ್ಪೋರ್ಟ್ ಗಳು ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಇರಲಿವೆ," ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ಪಾಸ್ಪೋರ್ಟ್ ಸೇವಾ ದಿವಸದಲ್ಲಿ ಸುಷ್ಮಾ ಈ ಘೋಷಣೆ ಮಾಡಿದ್ದಾರೆ.

If passports will be in English and Hindi languages, why not in Kannada?

ಈ ಮೂಲಕ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಮೇಲೆ ಮತ್ತೊಂದು ಹಿಂದಿ ಹೇರಿಕೆಗೆ ಕೇಂದ್ರ ಸರಕಾರ ಮುಂದಾಗಿದೆ. ಹಿಂದಿಗೆ ಎಲ್ಲಿಲ್ಲದ ಪ್ರಾಶಸ್ತ್ಯ ಕೊಡುವ ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳನ್ನು ಮಾತ್ರ ತುಚ್ಛವಾಗಿ ಕಾಣುತ್ತಿದೆ. ಬಿಡಿಗಾಸಿನ ಮರ್ಯಾದಿಯನ್ನೂ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ನೀಡುತ್ತಿಲ್ಲ.

ಹಿಂದಿಯಲ್ಲಿ ಪಾಸ್ಪೋರ್ಟ್ ಇರಬಹುದಾದರೆ ಕನ್ನಡದಲ್ಲಿಯೂ ಪಾಸ್ಪೋರ್ಟ್ ಇರಲು ಯಾಕೆ ಸಾಧ್ಯವಿಲ್ಲ? ಪಾಸ್ಪೋರ್ಟ್ ಜತೆಗೆ ಪಾಸ್ಪೋರ್ಟ್ ಅರ್ಜಿಯೂ ಕನ್ನಡದಲ್ಲಿ ಇರಬೇಕು. ಇದು ನಮ್ಮ ಹಕ್ಕು ಎಂದು ಕೇಂದ್ರ ಸರಕಾರವನ್ನು ಕೊರಳು ಪಟ್ಟಿ ಹಿಡಿದು ಕನ್ನಡಿಗರೀಗ ಕೇಳಬೇಕಾಗಿದೆ.

ಶೇ. 10 ದರ ಕಡಿತ

ಇನ್ನು ಇದೇ ವೇಳೆ 8 ವರ್ಷ ಕೆಳಗಿನ ಮಕ್ಕಳಿಗೆ ಮತ್ತು 60 ವರ್ಷ ದಾಟಿದ ಹಿರಿಯರಿಗೆ ಪಾಸ್ಪೋರ್ಟ್ ಅರ್ಜಿ ಶುಲ್ಕದಲ್ಲಿ ಶೇಕಡಾ 10 ರಿಯಾಯಿತಿಯನ್ನು ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ.

English summary
All passports will be in English and Hindi languages from now onwards. External affairs minister Sushma Swaraj announces bilingual passport in Delhi. Now the question is, why not passports and its aplication is in Kannada?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X