ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ನಂತರ ಹುಟ್ಟಿದ ಮೊದಲ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 18: ಒಂದೊಮ್ಮೆ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದೇ ಆದಲ್ಲಿ ಈ ಹುದ್ದೆಗೇರಿದ ಸ್ವಾತಂತ್ರ್ಯ ನಂತರದ ಮೊದಲ ವ್ಯಕ್ತಿ ಎಂಬ ಹಿರಿಮೆಗೂ ಅವರು ಪಾತ್ರರಾಗಲಿದ್ದಾರೆ. ನಾಯ್ಡು ಜುಲೈ 1ರಂದು 1949ರಲ್ಲಿ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ್ದಾರೆ.

ಈ ಹಿಂದೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಹುಟ್ಟಿ ನರೇಂದ್ರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಇದೀಗ ಅದೇ ರೀತಿಯ ವಿಶಿಷ್ಟ ದಾಖಲೆ ಬರೆಯುವ ಹಾದಿಯಲ್ಲಿದ್ದಾರೆ ವೆಂಕಯ್ಯ ನಾಯ್ಡು.

ಉಪರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಸಿದ ವೆಂಕಯ್ಯ ನಾಯ್ಡುಉಪರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಸಿದ ವೆಂಕಯ್ಯ ನಾಯ್ಡು

If elected, Naidu to be first Vice President to be born after Independence

ಇಲ್ಲಿವರೆಗೆ ಉಪರಾಷ್ಟ್ರ ಹುದ್ದೆಗೇರಿದ ಎಲ್ಲಾ 12 ವ್ಯಕ್ತಿಗಳು ಸ್ವಾತಂತ್ರ್ಯ ಪೂರ್ವಕ್ಕೆ ಹುಟ್ಟಿದವರಾಗಿದ್ದರು. ಹಾಲಿ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ 1937ರಲ್ಲಿ ಜನಿಸಿದವರಾಗಿದ್ದಾರೆ. ಭಾರತದ ಮೊದಲ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ 1888ರಲ್ಲಿ ಹುಟ್ಟಿದ್ದರು.

ಅಮ್ಮನಂತಿದ್ದ ಪಕ್ಷ ತೊರೆಯಲು ನೋವಾಗುತ್ತಿದೆ - ವೆಂಕಯ್ಯ ನಾಯ್ಡುಅಮ್ಮನಂತಿದ್ದ ಪಕ್ಷ ತೊರೆಯಲು ನೋವಾಗುತ್ತಿದೆ - ವೆಂಕಯ್ಯ ನಾಯ್ಡು

ಇನ್ನು ಸ್ವಾತಂತ್ರ್ಯಾನಂತರ ಹುಟ್ಟಿದ ಭಾರತದ ಪ್ರಮುಖ ನಾಯಕರನ್ನು ತೆಗೆದುಕೊಳ್ಳುವುದಾದರೆ,

ನರೇಂದ್ರ ಮೋದಿ: ಸೆಪ್ಟೆಂಬರ್ 17, 1950

ಅರುಣ್ ಜೇಟ್ಲಿ: ಡಿಸೆಂಬರ್ 28, 1952

ಸುಷ್ಮಾ ಸ್ವರಾಜ್: ಫೆಬ್ರವರಿ 14, 1952

ಮಾಯಾವತಿ: ಜನವರಿ 15, 1956

ಮಮತಾ ಬ್ಯಾನರ್ಜಿ: ಜನವರಿ 5, 1955

ಲಾಲೂ ಪ್ರಸಾದ್ ಯಾದವ್: ಜೂನ್ 11, 1948

ಅರವಿಂದ ಕೇಜ್ರಿವಾಲ್: ಆಗಸ್ಟ್ 16, 1968

ದಿವಂಗತ ಜಯಲಲಿತಾ: ಫೆಬ್ರವರಿ 24, 1948

ನಿತೀಶ್ ಕುಮಾರ್: ಮಾರ್ಚ್ 1 1951

ರಾಹುಲ್ ಗಾಂಧಿ: ಜೂನ್ 19 1970

English summary
While Narendra Modi became the first Prime Minister of India to be born after independence, Venkaiah Naidu as the Vice President will have the same distinction. If elected as the next Vice President he will be the first candidate born after Independence to hold the post. Naidu was born on July 1 1949 at Nellore, Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X