ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ತೋರಿಸಿದ ಭಾರತದ ಮೇಲಿನ ದಾಳಿಯ ವೀಡಿಯೊ ನಕಲಿ!

ಭಾರತದ ಮೇಲೆ ದಾಳಿ ಮಾಡಿದ್ದೇವೆ ಎಂದು ವೀಡಿಯೊ ತೋರಿಸುತ್ತಿದ್ದ ಪಾಕಿಸ್ತಾನದ ಬಂಡವಾಳ ಕೊನೆಗೂ ಬಯಲಾಗಿದೆ. ಭಾರತದ ಮೇಲೆ ದಾಳಿ ಮಾಡಿದ್ದೆಂದು ಹೇಳಲಾದ ವೀಡಿಯೋ ನಕಲಿ ಎಂದು ಭಾರತೀಯ ಸೇನೆ ಹೇಳಿದೆ.

By ಮಾಧುರಿ ಅದ್ನಾಳ್
|
Google Oneindia Kannada News

ನವದೆಹಲಿ, ಮೇ 24: ಭಾರತದ ಮೇಲೆ ದಾಳಿ ಮಾಡಿದ್ದೇವೆ ಎಂದು ವೀಡಿಯೊ ತೋರಿಸುತ್ತಿದ್ದ ಪಾಕಿಸ್ತಾನದ ಬಂಡವಾಳ ಕೊನೆಗೂ ಬಯಲಾಗಿದೆ. ಭಾರತದ ಮೇಲೆ ದಾಳಿ ಮಾಡಿದ್ದೆಂದು ಹೇಳಲಾದ ವೀಡಿಯೋ ನಕಲಿ ಎಂದು ಭಾರತೀಯ ಸೇನೆ ಹೇಳಿದೆ.

ಈ ಕುರಿತು ಬುಧವಾರ ಹೇಳಿಕೆ ನೀಡಿರುವ ಭಾರತೀಯ ಸೇನೆ ವೀಡಿಯೊದಲ್ಲಿರುವ ದೃಶ್ಯ ಸುಧಾರಿತ ಸ್ಪೋಟಕಗಳು ಸ್ಪೋಟಿಸಿದಾಗ ಕಾಣುವಂಥದ್ದು. ಆರ್ಟಿಲರ್ ಗನ್ ನಿಂದ ದಾಳಿ ನಡೆಸಿದರೆ ಹಾಗೆ ಕಾಣಿಸುವುದಿಲ್ಲ ಎಂದು ಹೇಳಿದೆ.

ideo from Pak claiming to destroy Indian post is fake

ಈ ಕುರಿತು ಹೇಳಿಕೆ ನೀಡಿರುವ ಸೇನೆಯ ಮೂಲಗಳು, "ಪಾಕಿಸ್ತಾನ ಬಿಡುಗಡೆ ಮಾಡಿರುವ ವೀಡಿಯೋ ನಕಲಿ. ವೀಡಿಯೋದಲ್ಲಿ ಎಡಿಟಿಂಗ್ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ," ಎಂದು ಹೇಳಿವೆ.

ಇತ್ತೀಚೆಗೆ ಪಾಕಿಸ್ತಾನದ ನೆಲದ ಮೇಲೆ ದಾಳಿ ಮಾಡಿದ ವೀಡಿಯೊಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿತ್ತು. ಇದರಿಂದ ಅವಮಾನಕ್ಕೆ ಗುರಿಯಾಗಿದ್ದ ಪಾಕಿಸ್ತಾನವೂ ಪ್ರತಿಕ್ರಿಯೆ ರೂಪದಲ್ಲಿ ಈ ವೀಡಿಯೊ ಬಿಡುಗಡೆ ಮಾಡಿತ್ತು. ಆದರೆ ಈ ವೀಡಿಯೊ ನಕಲಿ ಎಂದು ತಿಳಿದು ಬಂದಿದೆ.

ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನೆಗೆ ಭಾರೀ ಹಾನಿಯಾಗುವಂತೆ ನಾವು ದಾಳಿ ನಡೆಸಿದ್ದಾಗಿ ಬಿಂಬಿಸಲು ಪಾಕಿಸ್ತಾನ ಸೇನೆ ಈ ವೀಡಿಯೊ ಬಿಡುಗಡೆ ಮಾಡಿತ್ತು.

English summary
Army Sources on Wednesday said that the video from Pakistan claiming to destroy Indian post is fake as Indian posts have walls thick enough to withhold fire of Recoiless Gun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X