ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ತಿವಾರಿ ಸಾವಿನ ಪ್ರಕರಣ ಸಿಬಿಐಗೆ ವಹಿಸಿದ ಯೋಗಿ ಸರ್ಕಾರ

ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ಠಾಕೂರ್ ಅವರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸೋಮವಾರ(ಮೇ 22) ಸಂಜೆ ಅಧಿಕೃತ ಆದೇಶ ಹೊರಡಿಸಿದೆ.

By Mahesh
|
Google Oneindia Kannada News

ಲಕ್ನೋ, ಮೇ 22: ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ಠಾಕೂರ್ ಅವರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸೋಮವಾರ(ಮೇ 22) ಸಂಜೆ ಅಧಿಕೃತ ಆದೇಶ ಹೊರಡಿಸಿದೆ.

ಇದಕ್ಕೂ ಮುನ್ನ ಉತ್ತರಪ್ರದೇಶ ಪೊಲೀಸರು, ತಿವಾರಿ ಸಾವನ್ನು ಕೊಲೆ ಪ್ರಕರಣ ಎಂದು ಪರಿಗಣಿಸಿ ಎಫ್ಐಆರ್ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. ಉತ್ತರಪ್ರದೇಶ ಮೂಲದ ಅನುರಾಗ್ ತಿವಾರಿ ಅವರು ಐದು ದಿನಗಳ ಹಿಂದೆ ಹಜರತ್ ಗಂಜ್ ಪ್ರದೇಶದ ಮೀರಾಭಾಯಿ ಗೆಸ್ಟ್ ಹೌಸ್ ಬಳಿ ಶವವಾಗಿ ಪತ್ತೆಯಾಗಿದ್ದರು. ಪ್ರಾಥಮಿಕ ವರದಿ ಪ್ರಕಾರ ತಿವಾರಿ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.

IAS Anurag Tewari's death to be probed by CBI

ಆದರೆ, ತಿವಾರಿ ಅವರು ಕರ್ನಾಟಕದಲ್ಲಿ 2,000 ಕೋಟಿ ರು ಮೌಲ್ಯದ ಹಗರಣವನ್ನು ಪತ್ತೆ ಹಚ್ಚಿದ್ದರು. ಇದನ್ನು ಬಹಿರಂಗ ಪಡಿಸದಂತೆ ಅವರ ಮೇಲೆ ಹಿರಿಯ ಅಧಿಕಾರಿಗಳ ಒತ್ತಡವಿತ್ತು. ತಿವಾರಿ ಅವರಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿತ್ತು. ಹೀಗಾಗಿ ಮಾನಸಿಕ ಒತ್ತಡ ಅನುಭವಿಸಿದ್ದರು. ಸರಿಯಾಗಿ ರಜೆ ಕೂಡಾ ನೀಡುತ್ತಿರಲಿಲ್ಲ ಎಂದು ತಿವಾರಿ ಅವರು ಕುಟುಂಬಸ್ಥರು ದೂರಿದ್ದಾರೆ.

ಸೋಮವಾರದಂದು ತಿವಾರಿ ಕುಟುಂಬಸ್ಥರು, ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಸಿಬಿಐ ತನಿಖೆಗೆ ವಹಿಸುವಂತೆ ಕೋರಿದರು.

English summary
The Uttar Pradesh government has recommended that the death of IAS Anurag Tiwari be probed by the Central Bureau of Investigation. The decision was made after the family of the deceased approached Uttar Pradesh Chief Minister Yogi Adityanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X