ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ಆಪರೇಶನ್ ಮೈತ್ರಿ ಹೇಗೆ ಸಾಗಿದೆ?

By ಒನ್ ಇಂಡಿಯಾ ಡಿಫೆನ್ಸ್ ಡೆಸ್ಕ್
|
Google Oneindia Kannada News

ನವದೆಹಲಿ, ಏ. 27: ಭೂಕಂಪಕ್ಕೆ ತುತ್ತಾಗಿರುವ ನೇಪಾಳದಲ್ಲಿ ಭಾರತದ ವಾಯುಸೇನೆ ರಕ್ಷಣಾ ಕಾರ್ಯ ಮುಂದುವರಿಸಿದೆ. ಸೈನಿಕರು ಮತ್ತು ಪೈಲಟ್ ಗಳು ತಮ್ಮ ಧೈರ್ಯ ಮತ್ತು ಕೆಚ್ಚೆದೆಯ ಸಾಹಸದಿಂದ ಅಪಾಯದಲ್ಲಿದ್ದವರನ್ನು ರಕ್ಷಣೆ ಮಾಡುತ್ತಿದ್ದಾರೆ.[ಸಹಾಯವಾಣಿ ಇಲ್ಲಿದೆ]

ನಮ್ಮ ಮೊದಲ ಆದ್ಯತೆ ನೊಂದವರಿಗೆ ಆಹಾರ ನೀಡಿ ಅವರನ್ನು ರಕ್ಷಣೆ ಮಾಡುವುದು. ಇಲ್ಲಿ ದೇಶ, ಭಾಷೆಗಳ ತಾರತಮ್ಯವಿಲ್ಲ ಎಂದು ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ. ಹಾಗಾದರೆ ನೇಪಾಳದಲ್ಲಿ ಆಪರೇಶನ್ ಮೈತ್ರಿ ಹೇಗಿದೆ? ಇದುವರೆಗೆ ಎಷ್ಟು ಜನರ ರಕ್ಷಣೆ ಮಾಡಲಾಗಿದೆ? ಎಂಬುದರ ಮೇಲೆ ಒಂದು ನೋಟ ಇಲ್ಲಿದೆ.[ಭೂಕಂಪದ ಬಗ್ಗೆ ಇನ್ನಷ್ಟು, ಅದರ ಆಳ ಮತ್ತು ಅಗಲ]

ನಾವೀಗ ಹಿಡಿತ ಸಾಧಿಸಿದ್ದೇವೆ

ನಾವೀಗ ಹಿಡಿತ ಸಾಧಿಸಿದ್ದೇವೆ

ಮೊದಲ ದಿನಕ್ಕಿಂತ ಈಗ ಪರವಾಗಿಲ್ಲ. ನಾವು ನೇಪಾಳದ ಭೂ ಭಾಗದ ಮೇಲೆ ಹಿಡಿತ ಸಾಧಿಸಿದ್ದು ಎಲ್ಲಿ ನಿರಾಶ್ರಿತರು ಹೆಚ್ಚಾಗಿದ್ದಾರೋ ಮೊದಲು ಅವರಿಗೆ ಆಹಾರ ಒದಗಿಸುತ್ತಿದ್ದೇವೆ ಎಂದು ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

10 ಕ್ಕೂ ಅಧಿಕ ಹೆಲಿಕ್ಯಾಪ್ಟರ್ ಗಳು

10 ಕ್ಕೂ ಅಧಿಕ ಹೆಲಿಕ್ಯಾಪ್ಟರ್ ಗಳು

ಸೈನ್ಯದ ಜತೆ 10ಕ್ಕೂ ಅಧಿಕ ಹೆಲಿಕ್ಯಾಪ್ಟರ್ ಗಳು ಸೇನಾ ಕಾರ್ಯದಲ್ಲಿ ನೆರವು ನೀಡುತ್ತಿವೆ. ಈ ಮೊದಲು ಆರು ಹೆಲಿಕ್ಯಾಪ್ಟರ್ ಗಳ ಮೂಲಕ ರಕ್ಷಣೆ ಕಾರ್ಯ ಮಾಡಲಾಗುತ್ತಿತ್ತು.

ಎನ್ ಡಿಆರ್ ಎಫ್ ಕಾರ್ಯಾಚರಣೆ

ಎನ್ ಡಿಆರ್ ಎಫ್ ಕಾರ್ಯಾಚರಣೆ

ಎನ್ ಡಿಆರ್ ಎಫ್ ನ ಸಿಬ್ಬಂದಿ ರಕ್ಷಣಾ ಕೆಲಸಕ್ಕೆ ಕೈ ಜೋಡಿಸಿವೆ. ಜತೆಗೆ ತರಬೇತಿ ಪಡೆದ ನಾಯಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಚಂಢಿಘಡದಿಂದ ತೆರಳಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೆಲಸ ಮುಗಿಸಿಯೇ ದೇಶಕ್ಕೆ ವಾಪಸ್

ಕೆಲಸ ಮುಗಿಸಿಯೇ ದೇಶಕ್ಕೆ ವಾಪಸ್

ಸೈನಿಕರು ನಾಗರೀಕರ ಜತೆಗೂಡಿ ರಕ್ಷಣಾ ಕೆಲಸ ಮುಗಿಸಿಯೇ ದೇಶಕ್ಕೆ ಹಿಂದಿರುಗಲಿದ್ದಾರೆ. ರಾತ್ರಿ ವೇಳೆಯೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಸಿತಾಂಶು ಕೌರ್ ತಿಳಿಸಿದ್ದಾರೆ.

English summary
The Indian Air Force (IAF) pilots braved hostile weather and continued with its search and rescue mission in the quake-hit Nepal. Sources in the IAF told OneIndia that the first priority of all fixed wing aircraft (over 10 now in operation) is to provide relief and evacuation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X