ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಹುದ್ದೆಗೆ ಆಸಕ್ತಿಯಿಲ್ಲ- ಮೋಹನ್ ಭಾಗ್ವತ್

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 29: ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ರಾಷ್ಟ್ರಪತಿ ಹುದ್ದೆಗೇರಲಿದ್ದಾರೆ ಎಂಬ ಗಾಳಿ ಸುದ್ದಿಯನ್ನು ಸ್ವತಃ ಭಾಗ್ವತ್ ತಳ್ಳಿ ಹಾಕಿದ್ದಾರೆ. ತಮಗೆ ಅಂತಹ ಯಾವುದೇ ಆಸೆಗಳಿಲ್ಲ ಎಂದು ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.

"ಅಂಥ ಸುದ್ದಿಗಳನ್ನು ಮನೋರಂಜನೆ ಎಂದುಕೊಂಡು ಬಿಟ್ಟು ಬಿಡಿ," ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ.

ಈ ಹಿಂದೆ ಮೋಹನ್ ಭಾಗ್ವತ್ ರಾಷ್ಟ್ರಪತಿ ಹುದ್ದೆಯ ರೇಸಿನಲ್ಲಿದ್ದಾರೆ ಎಂಬುದು ಸುದ್ದಿಯಾಗಿತ್ತು. ಶಿವಸೇನೆ ಮುಖವಾಣಿ ಸಾಮ್ನಾ ಕೂಡಾ ಭಾಗ್ವತ್ ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿ ಎಂದು ಹೇಳಿತ್ತು.[ಸಂಸತ್ತಿನಲ್ಲಿ ಯುಗಾದಿ ಆಚರಣೆ, ಸ್ಪೀಕರ್ ಜತೆಗೆ ಭೋಜನ]

I am not interested in President post – Mohan Bhagwat

ಸದ್ಯದಲ್ಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವಧಿ ಮುಗಿಯಲಿದ್ದು ಅವರ ಜಾಗಕ್ಕೆ ಹೊಸ ರಾಷ್ಟ್ರಪತಿಯ ಹುಡುಕಾಟ ಜಾರಿಯಲ್ಲಿದ್ದು ದಿನಕ್ಕೊಂದು ಹೆಸರು ತೇಲಿ ಬರುತ್ತಿದೆ.

ಸದ್ಯ ಭಾಗ್ವತ್ ರಾಷ್ಟ್ರಪತಿ ಹುದ್ದೆಯ ಸಾಂಭಾವ್ಯ ಅಭ್ಯರ್ಥಿಯಲ್ಲ ಎಂದು ಸ್ಪಷ್ಟವಾಗಿದೆ. ಇದೀಗ ಎನ್.ಡಿ.ಎ ಹೊಸ ಅಭ್ಯರ್ಥಿಯನ್ನು ರಾಷ್ಟ್ರಪತಿ ಹುದ್ದೆಗೆ ಹುಡುಕಾಟ ನಡೆಸಬೇಕಾಗಿದೆ.

ಇಂದು ಎನ್.ಡಿ.ಎಯ ಎಲ್ಲಾ ಸಂಸತ್ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಎನ್.ಡಿ.ಎ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಅವರು ಸಂಸತ್ ಸದಸ್ಯರ ಬಳಿ ಮನವಿ ಮಾಡಿಕೊಳ್ಳಲಿದ್ದಾರೆ.

English summary
RSS chief Mohan Bhagwat on Wednesday rubbished the news item that he is in the race for the President post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X