ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯಷ್ಟು ಗಟ್ಟಿಗನಲ್ಲ: ಏನಿರಬಹುದು ನಿತೀಶ್ ಮಾತಿನ ಹಿಂದಿನ ಗೂಢಾರ್ಥ?

ಪ್ರಧಾನಿ ಹುದ್ದೆಗೆ ನಾನು ನರೇಂದ್ರ ಮೋದಿಯಷ್ಟು ಸಾಮರ್ಥ್ಯವುಳ್ಳವನಲ್ಲ, ಪ್ರಧಾನಿ ಹುದ್ದೆಯ ಅಭ್ಯರ್ಥಿ ನಾನಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್.

|
Google Oneindia Kannada News

ಪಾಟ್ನಾ, ಮೇ 16: ಪ್ರಧಾನಮಂತ್ರಿ ಹುದ್ದೆಗೆ ನಾನು ನರೇಂದ್ರ ಮೋದಿಯಷ್ಟು ಸಾಮರ್ಥ್ಯವುಳ್ಳವನಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಗೆ ಒಮ್ಮತದ ಅಭ್ಯರ್ಥಿಯ ಮೂಲಕ ಬಿಜೆಪಿ ವಿರುದ್ದ ಸೆಣಸಲು ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ಕೆಲವು ಪಕ್ಷಗಳು ಮಾತುಕತೆ ನಡೆಸಲು ಮುಂದಾಗಿರುವ ಬೆನ್ನಲ್ಲೇ ನಿತೀಶ್ ಕುಮಾರ್ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ನಾನು ಪ್ರಧಾನಮಂತ್ರಿ ಅಭ್ಯರ್ಥಿಯಲ್ಲ, ನನ್ನದೇನಿದ್ದರೂ ಲೋಕಲ್ ಪಾರ್ಟಿ. ರಾಜ್ಯವನ್ನು ಮುನ್ನಡೆಸುವುದಷ್ಟಕ್ಕೆ ಮಾತ್ರ ನಾನು ಸೀಮಿತ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ನಿತೀಶ್ ಕುಮಾರ್ ಹೇಳಿಕೆಯನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಸಂಯುಕ್ತ ಜನತಾದಳ (ಜೆಡಿಯು), ಎನ್ಡಿಎ ಮೈತ್ರಿಕೂಟದ ಜೊತೆ ಗುರುತಿಸಿಕೊಳ್ಳಲು ಪೂರ್ವಭಾವಿ ಸಿದ್ದತೆ ನಡೆಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮೋದಿಯವರನ್ನು ದೇಶದ ಜನತೆ ಒಪ್ಪಿಕೊಂಡಿದ್ದರು. ಕಳೆದ ಮೂರು ವರ್ಷಗಳಿಂದ ಮೋದಿ ಪ್ರಧಾನಮಂತ್ರಿಯಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ನನಗೆ ಆ ಹುದ್ದೆಗೆ ಏರುವಷ್ಟು ಸಾಮರ್ಥ್ಯವಿಲ್ಲ ಎಂದು ನಿತೀಶ್ ಹೇಳಿದ್ದಾರೆ.

ಜನ ಮೋದಿಯನ್ನು ಪಿಎಂ ಮಾಡಿದ್ದಾರೆ

ಜನ ಮೋದಿಯನ್ನು ಪಿಎಂ ಮಾಡಿದ್ದಾರೆ

ಮೂರು ವರ್ಷದ ಹಿಂದೆ ಜನರು ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದರು, ಯಾಕೆಂದರೆ ಆ ಹುದ್ದೆಗೆ ಅವರು ಸೂಕ್ತವೆಂದು. ನಮ್ಮದು ಏನಿದ್ದರೂ ಬಿಹಾರಕ್ಕೆ ಸಂಬಂಧಪಟ್ಟ ರಾಜಕೀಯ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಶರದ್ ಯಾದವ್ ಪಕ್ಷದ ಅಧ್ಯಕ್ಷರಾಗಿದ್ದರು

ಶರದ್ ಯಾದವ್ ಪಕ್ಷದ ಅಧ್ಯಕ್ಷರಾಗಿದ್ದರು

ಸತತವಾಗಿ ಮೂರು ಬಾರಿ ಶರದ್ ಯಾದವ್ ಪಕ್ಷದ ಅಧ್ಯಕ್ಷರಾಗಿದ್ದವರು, ಇದಾದ ನಂತರ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು. ನೀವು ಮಾಧ್ಯಮದವರು ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆಂದು ಸುದ್ದಿ ಮಾಡಿದಿರಿ - ನಿತೀಶ್ ಕುಮಾರ್.

ಲಾಲೂ ಭ್ರಷ್ಟಾಚಾರದ ಬಗ್ಗೆ ಪ್ರತಿಕ್ರಿಯೆಗೆ ನಕಾರ

ಲಾಲೂ ಭ್ರಷ್ಟಾಚಾರದ ಬಗ್ಗೆ ಪ್ರತಿಕ್ರಿಯೆಗೆ ನಕಾರ

ಲಾಲೂ ಪ್ರಸಾದ್ ಯಾದವ್ ಮೇಲಿನ ಬಿಜೆಪಿಯ ಆರೋಪಕ್ಕೆ ನಾನು ಪ್ರತಿಕ್ರಿಯಿಸಲಾರೆ, ನೀವೇನಿದ್ದರೂ ಅವರನ್ನೇ ಕೇಳಿಕೊಳ್ಳಿ. ಆರೋಪ ಮಾಡುವವರ ಬಳಿ ಸಾಕ್ಷಿಯಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದು ನಿತೀಶ್ ಹೇಳಿದ್ದಾರೆ.

ನಿತೀಶ್ ಸಮರ್ಥ ನಾಯಕ

ನಿತೀಶ್ ಕುಮಾರ್ ಒಬ್ಬ ಸಮರ್ಥ ನಾಯಕ, ಆದರೆ ಅವರಲ್ಲಿನ ಅಹಂ, ಲಾಲೂ ಪ್ರಸಾದ್ ಯಾದವ್ ಅವರಂತಹ ಪಾರ್ಟ್ನರ್ ಇಂದಾಗಿ ಬಿಹಾರಕ್ಕೆ ಸೀಮಿತವಾಗಿದ್ದರೆ. ಈಗಲಾದರೂ ಅವರಿಗೆ ಅರ್ಥವಾದರೆ ಸಾಕು.

ಸಹವಾಸ ದೋಷದಿಂದ ನಿತೀಶ್ ಕೆಟ್ಟರು

ನಿತೀಶ್ ಒಳ್ಳೆ ನಾಯಕ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಆದರೆ ಸಹವಾಸ ದೋಷದಿಂದ (ಲಾಲೂ) ನಿತೀಶ್ ಕೆಟ್ಟರು.

English summary
Bihar CM Nitish Kumar has ruled out any possibility of heading the grand coalition against BJP as a PM candidate in the General Elections in 2019.Nitish Kumar has no prime ministerial ambition, says he is not 'as capable' as Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X