ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಅತ್ಯಂತ ಅಪಾಯಕಾರಿ ಮಹಿಳೆ ಮೇಲೆ ಎನ್ಐಎ ಕಣ್ಣು

By ವಿಕಾಸ್ ನಂಜಪ್ಪ
|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಜುಲೈ 31: ಹುರಿಯತ್ ಭಯೋತ್ಪಾದನಾ ನಿಧಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ 'ದೂಖ್ತರಣ್-ಎ-ಮಿಲ್ಲತ್ ಎಂಬ ಸಂಘಟನೆ ವಿರುದ್ಧ ಎಫ್ಐಆರ್ ದಾಖಲಿಸಿದೆ. ಈ ಸಂಘಟನೆಯನ್ನು ಆಶಿಯಾ ಅಂದ್ರಾಬಿ ಎಂಬ ಮಹಿಳೆ ಮುನ್ನಡೆಸುತ್ತಿದ್ದು, ಈಕೆ ಕಾಶ್ಮೀರದ ಅತ್ಯಂತ ಅಪಾಯಕಾರಿ ಮಹಿಳೆಯರಲ್ಲಿ ಒಬ್ಬರಾಗಿದ್ದಾಳೆ.

ಇತ್ತೀಚೆಗೆ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನದ ಜನರಿಗೆ ಶುಭಾಶಯ ಹೇಳಿ ಈಕೆ ಸುದ್ದಿಯಲ್ಲಿದ್ದಳು. ಲಾಹೋರ್ ನ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೆ, ಅದಕ್ಕೂ ಮೊದಲು ಮನೆಯಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಳು.

Hurriyat terror funding: Kashmir's most dangerous woman under radar

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಧನ ಸಹಾಯ ಮಾಡುವುದಲ್ಲಿ ಈಕೆ ಸಕ್ರಿಯ ಪಾತ್ರ ವಹಿಸಿದ್ದಾಳೆಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ. ಆಕೆ ತನ್ನ ಸಂಸ್ಥೆಗೆ ಪಡೆದ ಹಣದ ಮೇಲೆ ತನಿಖಾ ಸಂಸ್ಥೆ ನಿಗಾ ಇಟ್ಟಿದ್ದು, ಸದ್ಯದಲ್ಲೇ ಈಕೆಯನ್ನು ಪ್ರಶ್ನಿಸುವ , ಅಗತ್ಯ ಬಿದ್ದರೆ ಬಂಧಿಸುವ ಸಾಧ್ಯತೆ ಇದೆ.

ಕಾಶ್ಮೀರದ ಅತ್ಯಂತ ಅಪಾಯಕಾರಿ ಮಹಿಳೆ

ಪ್ರಚೋದನಕಾರಿ ಹಾಗೂ ಪ್ರತ್ಯೇಕತಾವಾದಿಗಳ ಉಕ್ಕಿನ ಮಹಿಳೆಯಾಗಿ ಈಕೆ ಗುರುತಿಸಿಕೊಂಡಿದ್ದಾಳೆ. ಈಕೆಯ ದುಖ್ತರಣ್-ಎ-ಮಿಲ್ಲತ್ ಕಾಶ್ಮೀರದ ಸರ್ವ ಪಕ್ಷಗಳ ಹುರಿಯತ್ ಕಾನ್ಫರೆನ್ಸ್ ನ ಭಾಗವಾಗಿದ್ದು ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸುವ ಉದ್ದೇಶವನ್ನೇ ಪ್ರತಿಪಾದಿಸುತ್ತಿದೆ.

ಅಶಿಯಾ ಹಲವು ಕಾಲದಿಂದ ಹಲವಾರು ಕಾರಣಗಳಿಗಾಗಿ ಸುದ್ದಿಯಲ್ಲಿದ್ದವಳು. ಆಕೆ ಹಿಜ್ಬುಲ್ ಮುಜಾಹಿದ್ದೀನ್ ಸಂಸ್ಥಾಪಕರಲ್ಲಿ ಒಬ್ಬರಾದ ಆಶಿಕ್ ಹುಸೇನ್ ಫಕ್ತೂ ಜತೆ ವಿವಾಹವಾಗಿದ್ದಾಳೆ.
ಯಾವಾಗಲೂ ಬುರ್ಕಾದಲ್ಲಿ ಕಾಣಿಸಿಕೊಳ್ಳುವ ಈಕೆ ಭಾರತದಲ್ಲಿ ಯುದ್ಧ ನಡೆಸಿದ, ಹಿಂಸಾಚಾರವನ್ನು ಉಂಟುಮಾಡಿದ ಅಪರಾಧದ ಮೇಲೆ 2010 ರಲ್ಲಿಯೂ ಬಂಧಿತೆಯಾಗಿದ್ದಳು.

ತೀರಾ ಇತ್ತೀಚೆಗೆ ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಕ್ಕಾಗಿ ಮತ್ತು ಅಲ್ಲಿನ ರಾಷ್ಟ್ರೀಯ ಗೀತೆಯನ್ನು ಮಾರ್ಚ್ 25, 2015 ರಂದು ಹಾಡಿ ಸುದ್ದಿಯಲ್ಲಿದ್ದಾಳೆ.

English summary
The National Investigation Agency which is probing the Hurriyat terror funding case has also filed an FIR against an outfit called the Dukhtaran-e-Millat. The outfit is headed by one of the most dangerous women in Kashmir, Asiya Andrabi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X