ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2016, ಪ್ರಭಾವಿ ಭಾರತೀಯರ ಪಟ್ಟಿ ಬಿಡುಗಡೆ: ಯಾರಿಗೆ ಎಷ್ಟನೇ ಸ್ಥಾನ?

|
Google Oneindia Kannada News

ಅಸಹಿಷ್ಣುತೆ, ಹೈದರಾಬಾದ್ ವಿವಿ, JNU, ದಾದ್ರಿ, ಜಾಟ್ ಮೀಸಲಾತಿ ಮುಂತಾದ ವಿವಾದಗಳಿದ್ದರೂ, ದೇಶದಲ್ಲಿ ಮೋದಿ ಜನಪ್ರಿಯತೆ ಮತ್ತು ಪ್ರಭಾವ ಯಥಾವತ್ತಾಗಿ ಮುಂದುವರಿದಿದೆ.

ದೇಶದ ಅತ್ಯಂತ ಪ್ರಭಾವಶಾಲಿ ಭಾರತೀಯ - 2016 ಪಟ್ಟಿಯನ್ನು ಇಂಡಿಯನ್ ಎಕ್ಸ್ ಪ್ರೆಸ್ ಸಮೂಹ ಸುದ್ದಿ ಸಂಸ್ಥೆ, ಬಿಡುಗಡೆ ಮಾಡಿದ್ದು ನರೇಂದ್ರ ಮೋದಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ದೆಹಲಿ, ಬಿಹಾರ ಚುನಾವಣೆಯಲ್ಲಿನ ಸೋಲಿನಿಂದ ಮೋದಿ ಜನಪ್ರಿಯತೆ ಸ್ವಲ್ಪ ಮಟ್ಟಿಗೆ ಕುಗ್ಗಿದ್ದರೂ, ಹಠಾತ್ ಪಾಕ್ ಪ್ರಧಾನಿಯನ್ನು ಭೇಟಿಯಾಗಿದ್ದ ಘಟನೆ ಸೇರಿದಂತೆ ಹಲವು ರಾಜತಾಂತ್ರಿಕ ನಿಲುವು ಪ್ರಭಾವಶಾಲಿ ಪಟ್ಟಿಯಲ್ಲಿ ಮೋದಿಯೇ ಮುಂದುವರಿಯುವಂತೆ ಮಾಡಿದೆ. (ಸರ್ವೇ, ಮೋದಿ ಅತ್ಯುತ್ತಮ ಪ್ರಧಾನಿ)

ಇಂಡಿಯನ್ ಎಕ್ಸ್ ಪ್ರೆಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನವನ್ನು ರಾಜಕಾರಣಿಗಳೇ ಆವರಿಸಿಕೊಂಡಿದ್ದರೆ, ವಾಣಿಜ್ಯೋದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ಕ್ರೀಡಾಪಟುಗಳಿಗೆ ನಂತರದ ಸ್ಥಾನ ದಕ್ಕಿದೆ.

ಬಿಹಾರದಲ್ಲಿ ನಿತೀಶ್-ಲಾಲೂ ಮೈತ್ರಿಕೂಟಕ್ಕೆ ಜಯದ ಹಿಂದಿನ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ನೂರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಬಿಸಿಸಿಐನ ಮಾಜಿ ಬಾಸ್ ಶ್ರೀನಿವಾಸನ್, ಫ್ಲಿಪ್ ಕಾರ್ಟ್ ಸಂಸ್ಥೆಯ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಇಂಡಿಯನ್ ಎಕ್ಸ್ ಪ್ರೆಸ್ ಬಿಡುಗಡೆ ಮಾಡಿರುವ ನೂರು ಪ್ರಭಾವಿಗಳ ಪಟ್ಟಿಯಲ್ಲಿ, ಮೊದಲ ಐವತ್ತು ಸ್ಥಾನ ಯಾರಿಗೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ನರೇಂದ್ರ ಮೋದಿ ಟಾಪ್ ಒನ್

ನರೇಂದ್ರ ಮೋದಿ ಟಾಪ್ ಒನ್

1. ನರೇಂದ್ರ ಮೋದಿ - ಪ್ರಧಾನಿ
2. ಮೋಹನ್ ಭಾಗವತ್ - RSS ಮುಖ್ಯಸ್ಥ
3. ಅಮಿತ್ ಶಾ - ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
4. ಅರುಣ್ ಜೇಟ್ಲಿ - ಕೇಂದ್ರ ಹಣಕಾಸು ಸಚಿವ
5. ಸೋನಿಯಾ ಗಾಂಧಿ - ಎಐಸಿಸಿ ಮುಖ್ಯಸ್ಥೆ

ರಾಷ್ಟಪತಿಗಳು

ರಾಷ್ಟಪತಿಗಳು

6. ಪ್ರಣವ್ ಮುಖರ್ಜಿ - ರಾಷ್ಟಪತಿಗಳು
7. ರಾಜನಾಥ್ ಸಿಂಗ್ - ಕೇಂದ್ರ ಗೃಹ ಸಚಿವ
8. ಅರವಿಂದ್ ಕೇಜ್ರಿವಾಲ್ - ದೆಹಲಿ ಮುಖ್ಯಮಂತ್ರಿ
9. ರಾಹುಲ್ ಗಾಂಧಿ - ಎಐಸಿಸಿ ಉಪಾಧ್ಯಕ್ಷ
10. ಸುಷ್ಮಾ ಸ್ವರಾಜ್ - ವಿದೇಶಾಂಗ ವ್ಯವಹಾರ ಖಾತೆಯ ಸಚಿವೆ

ಬಿಹಾರದ ಮುಖ್ಯಮಂತ್ರಿ

ಬಿಹಾರದ ಮುಖ್ಯಮಂತ್ರಿ

11. ಟಿ ಎಸ್ ಠಾಕೂರ್ - ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು
12. ನಿತೀಶ್ ಕುಮಾರ್ - ಬಿಹಾರ ಮುಖ್ಯಮಂತ್ರಿ
13. ಸ್ಮೃತಿ ಇರಾನಿ - ಕೇಂದ್ರ ಎಚ್ಆರ್ಡಿ ಸಚಿವೆ
14. ಮೆಹಬೂಬ ಮುಫ್ತಿ - ಪಿಡಿಪಿ ಮುಖ್ಯಸ್ಥೆ
15. ಮಮತಾ ಬ್ಯಾನರ್ಜಿ - ಪಶ್ಚಿಮ ಬಂಗಾಳ ಸಿಎಂ

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ

16. ಮುಖೇಶ್ ಅಂಬಾನಿ - ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ
17. ರಘುರಾಮ್ ರಾಜನ್ - ರಿಸರ್ವ್ ಬ್ಯಾಂಕ್ ಗವರ್ನರ್
18. ಅಜಿತ್ ದೋವಲ್ - ಕೇಂದ್ರ ಭದ್ರತಾ ಕಾರ್ಯದರ್ಶಿ
19. ಜಯಲಲಿತಾ - ತಮಿಳುನಾಡು ಸಿಎಂ
20. ನಿತಿನ್ ಗಡ್ಕರಿ - ಕೇಂದ್ರ ಭೂಸಾರಿಗೆ ಸಚಿವ

ಶಿವರಾಜ್ ಸಿಂಗ್ ಚೌಹಾಣ್

ಶಿವರಾಜ್ ಸಿಂಗ್ ಚೌಹಾಣ್

21. ಸೈರಸ್ ಮಿಸ್ತ್ರಿ - ಟಾಟಾ ಗ್ರೂಪ್ ಚೇರ್ಮೆನ್
22. ವಸುಂಧರಾ ರಾಜೇ - ರಾಜಸ್ಥಾನ ಮುಖ್ಯಮಂತ್ರಿ
23. ಶಿವರಾಜ್ ಸಿಂಗ್ ಚೌಹಾಣ್ - ಮಧ್ಯಪ್ರದೇಶ ಸಿಎಂ
24. ಮನೋಹರ್ ಪಾರಿಕ್ಕರ್ - ರಕ್ಷಣಾ ಸಚಿವ
25. ದೇವೇಂದ್ರ ಫಡ್ನವೀಸ್ - ಮಹಾರಾಷ್ಟ್ರ ಸಿಎಂ

ಲಾಲೂ ಪ್ರಸಾದ್ ಯಾದವ್

ಲಾಲೂ ಪ್ರಸಾದ್ ಯಾದವ್

26. ಲಾಲೂ ಪ್ರಸಾದ್ ಯಾದವ್ - ಅರ್ಜೆಡಿ ಮುಖಂಡ
27. ಬಾಬಾ ರಾಮದೇವ್ - ಯೋಗ ಗುರು
28. ಗುಲಾಂ ನಬಿ ಆಜಾದ್ - ಕಾಂಗ್ರೆಸ್ ಮುಖಂಡ
29. ಮಲ್ಲಿಕಾರ್ಜುನ ಖರ್ಗೆ - ವಿರೋಧ ಪಕ್ಷದ ನಾಯಕ
30. ಮಾಯಾವತಿ - ಬಿಎಸ್ಪಿ ಮುಖ್ಯಸ್ಥೆ

ಶಿವಸೇನೆ ಮುಖ್ಯಸ್ಥ

ಶಿವಸೇನೆ ಮುಖ್ಯಸ್ಥ

31. ಗೌತಂ ಅದಾನಿ - ಅದಾನಿ ಗ್ರೂಪ್ ಮಾಲೀಕ
32. ಪಿ ಕೆ ಮಿಶ್ರಾ - ಹೆಚ್ಚುವರಿ ಕಾರ್ಯದರ್ಶಿ (ಪ್ರಧಾನಮಂತ್ರಿ ಕಾರ್ಯಾಲಯ)
33. ಎಸ್ ಜೈಶಂಕರ್ - ಮುಖ್ಯ ಕಾರ್ಯದರ್ಶಿ (ವಿದೇಶಾಂಗ ವ್ಯವಹಾರ ಸಚಿವಾಲಯ)
34. ಉದ್ದವ್ ಠಾಕ್ರೆ - ಶಿವಸೇನೆ ಮುಖ್ಯಸ್ಥ
35. ರತನ್ ಟಾಟಾ - ಟಾಟಾ ಸಂಸ್ಥೆಯ ಮಾಲೀಕ

ರೈಲ್ವೇ ಸಚಿವ

ರೈಲ್ವೇ ಸಚಿವ

36. ಅರವಿಂದ್ ಪನಗೋರಿಯಾ - ಉಪಾಧ್ಯಕ್ಷ (ನಿತಿ ಆಯೋಗ್)
37. ವೆಂಕಯ್ಯ ನಾಯ್ಡು - ಕೇಂದ್ರ ಸಂಸದೀಯ ವ್ಯವಹಾರ ಸಚಿವ
38. ಅರವಿಂದ್ ಸುಬ್ರಮಣಿಯನ್ - ಮುಖ್ಯ ಸಲಹೆಗಾರ (ವಿತ್ತ ಸಚಿವಾಲಯ)
39. ನೃಪೇಂದ್ರ ಮಿಶ್ರಾ - ಪಿನ್ಸಿಪಲ್ ಸೆಕ್ರೆಟರಿ (ಪ್ರಧಾನ ಮಂತ್ರಿಗೆ)
40. ಸುರೇಶ್ ಪ್ರಭು - ರೈಲ್ವೇ ಸಚಿವ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

41. ಜೆ ಎಸ್ ಖೇಕರ್ - ಸುಪ್ರೀಂಕೋರ್ಟ್ ನ್ಯಾಯಾಧೀಶ
42. ವಿರಾಟ್ ಕೊಹ್ಲಿ - ಕ್ರಿಕೆಟಿಗ
43. ಮುಲಾಯಂ ಸಿಂಗ್ ಯಾದವ್ - ಎಸ್ಪಿ ಮುಖಂಡ
44. ಚಂದ್ರಬಾಬು ನಾಯ್ಡು - ಆಂಧ್ರ ಸಿಎಂ
45. ರಮಣ್ ಸಿಂಗ್ - ಛತ್ತೀಸಗಡ ಸಿಎಂ

ಪಿಯೂಶ್ ಗೋಯಲ್

ಪಿಯೂಶ್ ಗೋಯಲ್

46. ಪಿಯೂಶ್ ಗೋಯಲ್ - ಕೇಂದ್ರ ಇಂಧನ ಸಚಿವ
47. ಆನಂದ್ ಮಹೀಂದ್ರ - ಮಹೀಂದ್ರ ಎಂಡ್ ಮಹೀಂದ್ರ ಸಂಸ್ಥೆಯ ಮಾಲೀಕ
48. ಫಾಲಿ ಎಸ್ ನಾರಿಮನ್ - ಹಿರಿಯ ವಕೀಲ, ಸುಪ್ರೀಂಕೋರ್ಟ್
49. ಅನಿಲ್ ಅಂಬಾನಿ - ಚೇರ್ಮೆನ್, ಅನಿಲ್ ಧೀರೂಭಾಯಿ ಅಂಬಾನಿ ಸಮೂಹ ಸಂಸ್ಥೆ
50. ಸುಕ್ಬೀರ್ ಎಸ್ ಬಾದಲ್ - ಅಧ್ಯಕ್ಷ (ಶಿರೋಮಣಿ ಅಕಾಲಿದಳ)

English summary
The Indian Express released the list of hundred most powerful Indians 2016. Prime Minister Narendra Modi remains on top.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X