ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್ ಸಿಟಿ ಪಟ್ಟಿಗೆ ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು ಆಯ್ಕೆ

By Mahesh
|
Google Oneindia Kannada News

ನವದೆಹಲಿ, ಸೆ. 20: ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ತುಮಕೂರು ಹಾಗೂ ಮಂಗಳೂರು ಸೇರಿದಂತೆ 12 ರಾಜ್ಯಗಳ 27 ನಗರಗಳನ್ನು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಎಂ. ವೆಂಕಯ್ಯನಾಯ್ಡು ಅವರು ಮಂಗಳವಾರ ಪ್ರಕಟಿಸಿದ್ದಾರೆ.

ಈ ಹಿಂದೆ ಸ್ಮಾರ್ಟ್ ಸಿಟಿ ಆಯ್ಕೆಗಾಗಿ ನಡೆಸಲಾದ 'ಫಾಸ್ಟ್ ಟ್ರ್ಯಾಕ್ ಸ್ಮಾರ್ಟ್ ಸಿಟಿ' ಸ್ಪರ್ಧೆ ವಿಜೇತ 13 ನಗರಗಳ ಪಟ್ಟಿಯನ್ನು ವೆಂಕಯ್ಯ ನಾಯ್ಡು ಪ್ರಕಟಿಸಿದ್ದರು.[ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಸಮರ್ಥ ನಗರ]

ಒಟ್ಟು 98 ನಗರಗಳನ್ನು ಸ್ಮಾರ್ಟ್ ಸಿಟಿ ದರ್ಜೆಗೇರಿಸಲು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಯೋಜನೆ ಹಾಕಿಕೊಂಡಿದೆ. ಈಗ ಆಯ್ಕೆಯಾಗಿರುವ ಮೊದಲ ಪಟ್ಟಿಯಲ್ಲಿ 20 ನಗರಗಳು ಆಯ್ಕೆ ಮಾಡಲಾಗಿತ್ತು. ಮುಂದಿನ ಎರಡು ವರ್ಷಗಳಲ್ಲಿ ಇನ್ನು 40 ಹಾಗೂ 38 ನಗರಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗುತ್ತದೆ.[ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ]

Hubballi, Shivamogga, Mangaluru among the new batch of Smart Cities

ಒಟ್ಟಾರೆ 3 ಲಕ್ಷ ಕೋಟಿ ರು ಅನುದಾನ ಈ ಮಹತ್ವದ ಯೋಜನೆಗೆ ಸಿಗಲಿದೆ. ಐದು ವರ್ಷದ ಅವಧಿಗೆ ಪ್ರತಿ ಸ್ಮಾರ್ಟ್ ಸಿಟಿಗೆ ಕೇಂದ್ರದಿಂದ 500 ಕೋಟಿ ರು ಅನುದಾನ ಸಿಗಲಿದೆ.[ಬೆಂಗಳೂರು, ಮುಂಬೈ, ದೆಹಲಿ ಸ್ಮಾರ್ಟ್ ಸಿಟಿಗಳಲ್ಲ: ಸಮೀಕ್ಷೆ]

ಸ್ಮಾರ್ಟ್ ಸಿಟಿ : ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನ(ಐಸಿಟಿ) ವನ್ನು ಬಳಸಿಕೊಂಡು ನಗರದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು. ನೀರು, ವಿದ್ಯುತ್ ಪೂರೈಕೆ, ಒಳಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆ, ಸಾರಿಗೆ ಸಂಪರ್ಕ, ಮಾಹಿತಿ ಮತ್ತು ತಂತ್ರಜ್ಞಾನ ಸಂಪರ್ಕ, ಇ ಆಡಳಿತ, ನಾಗರಿಕರ ಪಾಲ್ಗೊಳ್ಳುವಿಕೆ, ಸುರಕ್ಷತೆ ಹಾಗೂ ಭದ್ರತೆ ಒದಗಿಸುವುದು. ಸರ್ಕಾರದ ಸೌಲಭ್ಯಗಳು ಎಲ್ಲಾ ನಾಗರಿಕರಿಗೂ ಸುಲಭವಾಗಿ ತಲುಪಿಸುವುದು.

English summary
Urban Development Minister M Venkaiah Naidu today announced the next set of 27 cities for financing under the Government flagship Smart City Mission. Hubballi, Shivamogga, Tumakuru and Mangaluru are among the 27 cities from 12 States announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X