ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಟಿಕ್ ಅಕ್ಕಿ ಪರೀಕ್ಷಿಸೋದು ಹೇಗೆ? ಇಲ್ಲಿವೆ 5 ಹಾದಿಗಳು

By ವಿಕಾಸ್ ನಂಜಪ್ಪ
|
Google Oneindia Kannada News

ತೆಲಂಗಾಣ, ಜೂನ್ 9: ಸದ್ಯಕ್ಕೆ ಎಲ್ಲೆಡೆ ಗುಲ್ಲೆದ್ದಿರುವ ಪ್ಲಾಸ್ಟಿಕ್ ಅಕ್ಕಿ ಮತ್ತು ಸಕ್ಕರೆಯ ಸುದ್ದಿ 'ಸುಳ್ಳು' ಎಂದು ತೆಲಂಗಾಣ ಸರ್ಕಾರ ಸ್ಪಷ್ಟಪಡಿಸಿದ್ದರೂ ಜನರಲ್ಲಿ ಮಾತ್ರ ಪ್ಲಾಸ್ಟಿಕ್ ಅಕ್ಕಿ-ಸಕ್ಕರೆಯ ಭಯ ಆರಿಲ್ಲ.

ತೆಲಂಗಾಣದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮತ್ತು ಸಕ್ಕರೆಗಳು ಲಗ್ಗೆಯಿಟ್ಟಿವೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಕರ್ನಾಟಕದಲ್ಲೂ ಅದರು ಕುರಿತು ಗುಲ್ಲೆದ್ದಿತ್ತು. ಆದರೆ ಈ ಎಲ್ಲ ವದಂತಿಗಳೂ ಸುಳ್ಳು ಎಂದಿರುವ ತೆಲಂಗಾಣ ಸರ್ಕಾರ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.

ಕರ್ನಾಟಕಕ್ಕೂ ಕಾಲಿಟ್ಟ ಪ್ಲಾಸ್ಟಿಕ್ ಸಕ್ಕರೆ, ತನಿಖೆಗೆ ಆದೇಶಕರ್ನಾಟಕಕ್ಕೂ ಕಾಲಿಟ್ಟ ಪ್ಲಾಸ್ಟಿಕ್ ಸಕ್ಕರೆ, ತನಿಖೆಗೆ ಆದೇಶ

ಇತ್ತೀಚೆಗೆ ಗದಗದ ಗೃಹಿಣಿಯೊಬ್ಬರು ಪ್ಲಾಸ್ಟಿಕ್ ಸಕ್ಕರೆಯ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ, ಆಕೆ ಸಕ್ಕರೆ ಕೊಂಡ ದಿನಸಿ ಅಂಗಡಿಯ ಮುಂದೆ ಸಾರ್ವಜನಿಕರು ಪ್ರತಿಭಟನೆಯನ್ನೂ ಮಾಡಿದ್ದರು. ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ, ಮೊಟ್ಟೆ ಕುರಿತು ದಿನೇ ದಿನೇ ಇಂಥ ಸುದ್ದಿ ಕೇಳಿಬರುತ್ತಿರುವುದರಿಂದ ನಮ್ಮ ಆರೋಗ್ಯದ ಕತೆ ಏನು ಎಂಬ ಚಿಂತೆ ಜನಸಾಮಾನ್ಯರಲ್ಲಿ ಕಾಡುತ್ತಿದೆ.

ಈ ವದಂತಿ ಎಲ್ಲ ಸುಳ್ಳು ಎಂದು ಹಲವು ಆರೋಗ್ಯ ತಜ್ಞರೇ ಹೇಳಿದ್ದರೂ ಜನರು ಅಷ್ಟು ಬೇಗನೆ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ಅದಕ್ಕೆಂದೇ ಇದೀಗ ಹಲವರು ಕೊಂಡು ತಂದ ಅಕ್ಕಿಯನ್ನು ಮನೆಯಲ್ಲಿಯೇ ಪರೀಕ್ಷೆ ಮಾಡಿ ಪ್ಲಾಸ್ಟಿಕ್ ಅಕ್ಕಿ, ಹೌದೋ, ಅಲ್ಲವೋ ಎಂದು ತೀರ್ಮಾನಿಸುತ್ತಿದ್ದಾರೆ.

ಹಾಗೊಮ್ಮೆ ನಿಮಗೂ ಪ್ಲಾಸ್ಟಿಕ್ ಅಕ್ಕಿಯ ಭಯವಿದ್ದಲ್ಲಿ ಅದನ್ನು ಸ್ವತಃ ಪರೀಕ್ಷಿಸಿಕೊಳ್ಳುವುದಕ್ಕೂ ಸಾಧ್ಯವಿದೆ. ಅದಕ್ಕಾಗಿ ಈ ಐದು ಮಾರ್ಗಗಳನ್ನು ಅನುಸರಿಸಿ:

ಫಂಗಸ್ ಸೋಂಕು ಬಂದರೆ

ಫಂಗಸ್ ಸೋಂಕು ಬಂದರೆ

ಅಕ್ಕಿಯನ್ನು ಬೇಯಿಸಿ ಎರಡು ದಿನಗಳ ಕಾಲ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿಡಿ. ಎರಡು ದಿನದ ನಂತರವೂ ಅದಕ್ಕೆ ಫಂಗಸ್ ಸೋಂಕದಿದ್ದರೆ ಅದು ಪ್ಲಾಸ್ಟಿಕ್ ಅಕ್ಕಿ ಎಂಬುದು ದಿಟ.

ಬಿಸಿ ಎಣ್ಣೆ ಹಾಕಿ

ಬಿಸಿ ಎಣ್ಣೆ ಹಾಕಿ

ಅಕ್ಕಿಯ ಮೇಲೆ ಬಿಸಿ ಬಿಸಿ ಎಣ್ಣೆಯನ್ನು ಸ್ವಲ್ಪ ಹಾಕಿ. ಅದನ್ನು ಪ್ಲಾಸ್ಟಿಕ್ ಅಕ್ಕಿಯೇ ಆಗಿದ್ದರೆ ಕರಗುತ್ತದೆ.

ಅಕ್ಕಿಯನ್ನು ಸುಟ್ಟು ನೋಡಿ

ಅಕ್ಕಿಯನ್ನು ಸುಟ್ಟು ನೋಡಿ

ಅಕ್ಕಿಯನ್ನು ಒಮ್ಮೆ ಸುಟ್ಟು ನೋಡಿ, ಪ್ಲಾಸ್ಟಿಕ್ಕಿನದೇ ಆಗಿದ್ದರೆ ಅದು ಸುಟ್ಟು, ವಾಸನೆ ಬರುತ್ತದೆ.

ದಪ್ಪ ಪದರ ಬಂದರೆ...

ದಪ್ಪ ಪದರ ಬಂದರೆ...

ಅಕ್ಕಿಯನ್ನು ಬೇಯಿಸಿ, ಅದು ಪ್ಲಾಸ್ಟಿಕ್ಕಿನದೇ ಆಗಿದ್ದರೆ ಅನ್ನದ ಮೇಲೆ ದಪ್ಪ ಪದರವಿರುತ್ತದೆ.

ನೀರಿನಲ್ಲಿ ತೇಲಿದರೆ...

ನೀರಿನಲ್ಲಿ ತೇಲಿದರೆ...

ಒಂದು ಬಾಟಲ್ ನೀರಿನಲ್ಲಿ ಅಕ್ಕಿಯನ್ನು ಹಾಕಿ ಕೆಲ ಸಮಯದ ನಂತರ ಅಕ್ಕಿ ಬಾಟಲಿಯ ಮೇಲ್ಭಾಗಕ್ಕೆ ಬಂದರೆ ಅದು ಪ್ಲಾಸ್ಟಿಕ್ ಅಕ್ಕಿ. ನೈಸರ್ಗಿಕ ಅಕ್ಕಿ ನೀರಿನಲ್ಲಿ ತೇಲುವುದಿಲ್ಲ.

English summary
News of plastic rice being sold at some outlets in Andhra Pradesh and Telangana has caused a great amount of panic among the people. While the Telangana government clarified that these were just rumours, the panic has not died down. If you are worried that the rice you purchased may be plastic then here are five ways to identify the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X