ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಜಿಸಿ ತಂತ್ರಜ್ಞಾನದಿಂದ ಕಪ್ಪು ಹಣದ ಪತ್ತೆ ಹೇಗೆ?

ಹೊಸದಾಗಿ ಚಲಾವಣೆಗೆ ಬರಲಿರುವ 500 ರು. ಮತ್ತು 2000 ರು. ನೋಟುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇಬೇಕು. ನಕಲಿ ನೋಟುಗಳ ಚಲಾವಣೆ ತಪ್ಪಿಸಲು ಯಾವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂಬುದನ್ನು ಕೂಡ ಅರಿತುಕೊಳ್ಳಬೇಕು.

By Prasad
|
Google Oneindia Kannada News

ನವದೆಹಲಿ, ನವೆಂಬರ್ 08 : ಬೆಳಗಿನ ಹಬ್ಬ ದೀಪಾವಳಿಯ ನಂತರ ದೇಶದ ಪ್ರತಿಯೊಬ್ಬ ಪ್ರಜೆ 'ಪ್ರಾಮಾಣಿಕತೆಯ ಉತ್ಸವ'ದಲ್ಲಿ ಪಾಲ್ಗೊಳ್ಳಬೇಕು. ಭ್ರಷ್ಟಾಚಾರ ಮಟ್ಟಹಾಕಬೇಕಿದ್ದರೆ, ಕಪ್ಪು ಹಣಕ್ಕೆ ಕಡಿವಾಣ ಹಾಕಬೇಕಿದ್ದರೆ ಈ 'ಮಹಾಯಜ್ಞ'ದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದ್ದಾರೆ.

ಆದರೆ, ಕಪ್ಪು ಹಣಕ್ಕೆ ಕಡಿವಾಣ ಹಾಕುವುದು ಹೇಗೆ? ಇದರ ಮೊದಲ ಭಾಗವಾಗಿ ನವೆಂಬರ್ 8ರ ಮಧ್ಯರಾತ್ರಿಯಿಂದ 500 ಮತ್ತು 1000 ರು. ನೋಟುಗಳ ಚಲಾವಣೆಯನ್ನು ನಿಷೇಧಿಸಿರುವುದು. ಎರಡನೇ ಭಾಗವಾಗಿ ಹೊಸ 500 ರು. ಮತ್ತು 2000 ರು. ನೋಟುಗಳು ನವೆಂಬರ್ 10ರಿಂದ ಚಲಾವಣೆಗೆ ಬರಲಿವೆ. [ಎಲ್ಲರ ಕೈಲೂ ದೊಡ್ಡ ನೋಟು , ದೇಶದೆಲ್ಲೆಡೆ ಎಟಿಎಂಗಳಲ್ಲಿ ನೂಕು ನುಗ್ಗಲು]

ಈಗ ಹೊಸದಾಗಿ ಚಲಾವಣೆಗೆ ಬರಲಿರುವ 500 ರು. ಮತ್ತು 2000 ರು. ನೋಟುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇಬೇಕು. ಹೊಸ ನೋಟುಗಳು ಯಾವ ರೀತಿ ಕಾಣುತ್ತವೆ ಮತ್ತು ನಕಲಿ ನೋಟುಗಳ ಚಲಾವಣೆ ತಪ್ಪಿಸಲು ಯಾವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂಬುದನ್ನು ಕೂಡ ಅರಿತುಕೊಳ್ಳಬೇಕು. ಈ ತಂತ್ರಜ್ಞಾನದ ಅಳವಡಿಕೆಯ ಬಗ್ಗೆ ಆರ್ಬಿಐ ಅಧಿಕೃತವಾಗಿ ಇನ್ನೂ ಏನೂ ಹೇಳಿಲ್ಲ. ಆದರೆ, ಸಾಧ್ಯತೆ ಖಂಡಿತ ಇದೆ. [ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]

How NGC chip on Rs 2,000 note will help track black money

ಈ ಹೊಸ ನೋಟುಗಳಲ್ಲಿ ಎನ್‌ಜಿಸಿ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ.

* ಹೊಸ 2000 ರು. ನೋಟುಗಳಲ್ಲಿ ನ್ಯಾನೋ ಜಿಪಿಎಸ್ ಚಿಪ್ ಎಂಬೆಡ್ ಮಾಡಲಾಗಿರುತ್ತದೆ.

* ಎನ್‌ಜಿಸಿ ತಂತ್ರಜ್ಞಾನ ಸುರಕ್ಷಿತವಾಗಿದ್ದು, ದುರ್ಬಳಕೆ ಮಾಡುವುದು ಕಷ್ಟಸಾಧ್ಯ. [ಹೊಸ 500 ಹಾಗೂ 1,000 ನೋಟು ನೋಡಲು ಹೇಗಿದೆ?]

* ಸೆಟಲೈಟ್ ನಿಂದ ಸಿಗ್ನಲ್ ಕಳುಹಿಸಿದರೆ ಎನ್‌ಜಿಸಿ ಸಿಗ್ನಲ್ ಅನ್ನು ಪ್ರತಿಫಲಿಸುತ್ತದೆ. ಇದು ಸೀರಿಯಲ್ ನಂಬರ್ ಜೊತೆಗೆ ನೋಟು ಇರುವ ಪ್ರದೇಶದ ಮಾಹಿತಿಯನ್ನೂ ನೀಡುತ್ತದೆ. ಈ ತಂತ್ರಜ್ಞಾನ ಬಳಸಿ ಯಾವ ಪ್ರದೇಶದಲ್ಲಿ ನಿಖರವಾಗಿ ಎಷ್ಟು ಹಣ, ಯಾವ ಪ್ರದೇಶದಲ್ಲಿ ಇಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯ.

* ಯಾವುದೇ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಣ ಕೂಡಿಟ್ಟಿದ್ದರೆ, ಎನ್‌ಜಿಸಿ ತಂತ್ರಜ್ಞಾನದ ಬಳಕೆಯ ಮೂಲಕ ಸಿಗ್ನಲ್ ದೊರೆಯುತ್ತದೆ. ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸಲು ಸಹಾಯವಾಗುತ್ತದೆ. ಇನ್ನು ಕಪ್ಪು ಹಣವನ್ನು ಕೂಡಿಡುವ ಮಾತೆಲ್ಲಿ ಬಂತು? ಇದರಿಂದ ಕಪ್ಪು ಹಣಕ್ಕೆ ಕಡಿವಾಣ ಹಾಕಿದಂತಾಗುತ್ತದೆ. [ನಕಲಿ ನೋಟು ಜಾಲ ಮಟ್ಟಹಾಕಿದ ನರೇಂದ್ರ ಮೋದಿ]

English summary
How NGC chip on Rs 2,000 note will help track black money? Here is something that one need to know about the new Rs 500 and 2,000 notes. For starters the move to take out of circulation the Rs 500 and 1,000 notes is to curb black money and the fake currency racket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X