ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಲು ಚಿಂತನೆ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಗಳ ಬಂಕ್ ಗಳಲ್ಲಿ ಇದನ್ನು ಮೊದಲು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.

|
Google Oneindia Kannada News

ನವದೆಹಲಿ, ಏಪ್ರಿಲ್ 7: ಪ್ರತಿ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಪರಿಷ್ಕರಿಸುವ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಭಾರತ ಸರ್ಕಾರದ ತೈಲೋದ್ಯಮ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಚಿಂತನೆ ನಡೆಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಗಳ ಬಂಕ್ ಗಳಲ್ಲಿ ಇದನ್ನು ಮೊದಲು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.[ಭಾರತದ ಜತೆ ಇಸ್ರೇಲ್ 12 ಸಾವಿರ ಕೋಟಿ ರು. ಕ್ಷಿಪಣಿ ಒಪ್ಪಂದ]

How Much You Pay For Petrol, Diesel Could Change Every Day

ಇದರ ಲಾಭವೇನು?: ಜಾಗತಿಕ ಮಟ್ಟದಲ್ಲಿ ದಿನಂಪ್ರತಿ ಏರುಪೇರಾಗುವ ಕಚ್ಚಾ ತೈಲ ಬೆಲೆಯನ್ನು ಸರಿದೂಗಿಸಲು ಪ್ರತಿ ಹದಿನೈದು ದಿನಕ್ಕೊಮ್ಮೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪರಿಷ್ಕರಿಸುವ ಪದ್ಧತಿ ಭಾರತದಲ್ಲಿದೆ.

ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗಿಲ್ಲ. ಅಲ್ಲಿ ದಿನಂಪ್ರತಿ ತೈಲ ಬೆಲೆಗಳು ಪರಿಷ್ಕರಣೆಗೊಳ್ಳುತ್ತಿವೆ. ಹಾಗಾಗಿ, ಭಾರತದಲ್ಲಿನ ತೈಲ ಬೆಲೆ ಪರಿಷ್ಕರಣೆಯ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಈ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.

ಆದರೆ, ಇದಿನ್ನೂ ಚಿಂತನೆಯ ಹಂತದಲ್ಲಿರುವುದರಿಂದ, ಈ ಬಗ್ಗೆ ಸರ್ಕಾರದ ನಿರ್ಧಾರವೇ ಅಂತಿಮ ಎಂದು ಹೇಳಲಾಗಿದೆ.

English summary
State-run oil marketing companies, which control over 90 per cent of the retail fuel market in the country, are mulling a plan that would allow daily changes in the price of petrol and diesel, Economic Times reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X