ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನೀಡಿದ್ದ ಭರವಸೆ ಏನು, ಆ ಪೈಕಿ ಪೂರೈಸಿದ್ದೆಷ್ಟು?

By ಸಂಗಮಿತ್ರ
|
Google Oneindia Kannada News

ಬೆಂಗಳೂರು, ಡಿಸೆಂಬರ್ 10:'ನೀನು ಜನರನ್ನು ಗೆಲ್ಲಬೇಕಾದರೆ ಅವರಿಗೆ ರುಚ್ಚಿಕಟ್ಟಾದ ಅಡುಗೆ ಮಾಡಿಹಾಕಿ, ಆ ನಂತರ ಅವರ ಜೊತೆ ನಯವಾಗಿ ವರ್ತಿಸು'

-ಈ ಮಾತು ಚಿಂತಕ ಅರಿಸ್ಟೋಫೇನ್‌ ಹೇಳಿ ಹಲವು ದಶಕಗಳು ಉರುಳಿವೆ. ಆದರೆ ಇಂದಿಗೂ ದೇಶದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆ ಅಣಕಿಸುವಂತೆ ನೆನಪಾಗುತ್ತದೆ. ಚುನಾವಣೆ ಪ್ರಣಾಳಿಕೆಗಳಲ್ಲಿ ಮತ್ತೆ ಮತ್ತೆ ಈ ಮಾತನ್ನು ಮೆಲುಕು ಹಾಕುವಂತೆ ರಾಜಕೀಯ ಪಕ್ಷಗಳು ಮಾಡಿವೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆಗಳು ಯಾವ್ಯಾವು, ಅವೀಗ ಏನಾಗಿವೆ ಎನ್ನುವುದನ್ನು ತಿಳಿಸುವುದು ಈ ಬರವಣಿಗೆಯ ಉದ್ದೇಶ. ಏಕೆಂದರೆ ನಮ್ಮ-ನಿಮ್ಮೆಲ್ಲರ ನೆನಪು ತುಂಬ ಕಡಿಮೆ ಅವಧಿಯದ್ದು. ನಮಗೆ ನೀಡಿದ ಮಾತಿಗೆ ತಾನೆ ಅವರಿಗೆ ಮತ ಹಾಕಿದ್ದು. ಸರಿ, ಈಗ ನಮಗೆ ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಕೇಳಬೇಕಲ್ಲವೆ?[ಭರವಸೆ ಕೊಡ್ತೀನಿ ಒಬ್ರನ್ನೂ ಬಿಡಲ್ಲ : ಭ್ರಷ್ಟರಿಗೆ ಮೋದಿ ಎಚ್ಚರಿಕೆ]

ಅಧಿಕಾರ ಕೈಗೆ ಬಂದ ದಿನದಿಂದ ನೂರು ದಿನದೊಳಗೆ ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣವನ್ನು ಪ್ರತಿ ಭಾರತೀಯ ಖಾತೆಗೆ ₹15 ಲಕ್ಷ ಡಿಪಾಸಿಟ್‌ ಮಾಡುವುದಾಗಿ ಭರವಸೆ ನೀಡಿತ್ತು ಬಿಜೆಪಿ. ಆದರೆ ಈಗ ಮಾಡಿರುವುದು ಭಾರತದಲ್ಲಿ ನೋಟು ರದ್ದತಿ ಕ್ರಮ. ಸದ್ಯ ಇದರ ಪರಿಣಾಮ ಹೇಳಲಾಗದಿದ್ದರೂ ಮುಂದೆ ಕುಸಿಯುವ ಆತಂಕದಲ್ಲಿವೆ ಎನ್ನುತ್ತಿವೆ ಎಲ್ಲ ವರದಿಗಳು.

ಜಿಡಿಪಿ ಏನಾನುಗುತ್ತದೆ?

ಜಿಡಿಪಿ ಏನಾನುಗುತ್ತದೆ?

ದೇಶದ ಆಂತರಿಕ ಉತ್ಪನ್ನ ವಹಿವಾಟು ಕುಸಿದಿದೆ ಎನ್ನಲು ಸಣ್ಣ ನಿದರ್ಶನ ನೀಡುವುದಾದರೆ, ಯಾವುದೇ ಸಣ್ಣ ಅಂಗಡಿಯಿಂದ ದೊಡ್ಡ ಹೋಟೆಲ್‌ ವರೆಗೆ ವ್ಯಾಪಾರ ಹೇಗಿದೆ ಎಂದು ಕೇಳಿದರೆ ಸಾಕು, ಉತ್ತರ ಸಿಗುತ್ತದೆ. ಇಂಥ ವ್ಯವಹಾರಗಳೇ ಒಟ್ಟಾಗಿ ಸೇರಿ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ನೀವೂ ಒಪ್ತೀರಾ ಅಲ್ಲವಾ?

ಮಹಿಳಾ ಮೀಸಲಾತಿ

ಮಹಿಳಾ ಮೀಸಲಾತಿ

ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲಾಗುವುದು ಭರವಸೆ ನೀಡಿತ್ತು. ಅದು ಇಲ್ಲಿತನಕ ಆಗಿಲ್ಲ. ಇನ್ನು ಕೃಷಿಯಲ್ಲಿ ಶೇ 50ರಷ್ಟು ಲಾಭವನ್ನು ರೈತರಿಗೆ ಕೊಡಲಾಗುವುದು ಎಂದು ಹೇಳಿತ್ತು. ನಂತರ ಇದರಿಂದ ಮಾರುಕಟ್ಟೆ ವ್ಯವಸ್ಥೆ ಹದಗೆಡಬಹುದು ಎಂಬ ನೆಪವೊಡ್ಡಿ ಕೈಬಿಡಲಾಯಿತು.

ಭರವಸೆಗಳು ಈಡೇರಿಲ್ಲ

ಭರವಸೆಗಳು ಈಡೇರಿಲ್ಲ

ಇನ್ನು ಖುಷ್‌ ಶರ್ಮಾ ಅವರ 'ಕೋಲ್ಹಾರ' ಎನ್ನುವ ಖಾಸಗಿ ಸಮೀಕ್ಷಾ ಸಂಸ್ಥೆ ಹೇಳುವ ಪ್ರಕಾರ 'ನ್ಯಾಯಾಂಗದಲ್ಲಿ ತ್ವರಿತ ನೇಮಕಾತಿ, ಕೋರ್ಟ್‌ ಸಂಖ್ಯೆಯಲ್ಲಿ ಹೆಚ್ಚಳ, ಅದೇ ರೀತಿ ಮಾವೋ ಉಗ್ರಗಾಮಿಗಳ ತಡೆಗೆ ಯೋಜನೆ, ರಾಷ್ಟ್ರೀಯ ಯೋಜನೆ ರೂಪಿಸುವಲ್ಲಿ ಯುವಕರಿಗೆ ಶಿಷ್ಯವೇತನ, ಫೆಲೋಶಿಪ್ ನೀಡುವ ಭರವಸೆಯೂ ಹಾಗೆ ಉಳಿದಿವೆ.

35ರಷ್ಟು ಭರವಸೆಗಳು ಈಡೇರಿವೆ

35ರಷ್ಟು ಭರವಸೆಗಳು ಈಡೇರಿವೆ

ಇನ್ನು 92 ಭರವಸೆಗಳು 'ಜೆನಿರಿಕ್‌' ಅಂದರೆ ಅಷ್ಟೇನು ಮುಖ್ಯವಲ್ಲದಿದ್ದರಿಂದ ಸಮೀಕ್ಷೆಯಿಂದ ಕೈಬಿಡಲಾಗಿದೆ. ಇನ್ನು 35ರಷ್ಟು ಭರವಸೆಗಳು ಈಡೇರಿಸಲಾಗಿದೆ ಎನ್ನುತ್ತದೆ ಸಮೀಕ್ಷೆ: ಅದರಲ್ಲಿ ಸ್ಟಾರ್ಟ್‌ ಅಪ್ ಇಂಡಿಯಾ, ಹೊಸ ಕೃಷಿ ವಿಮೆ, 2022ರೊಳಗೆ ಒಂದು ಲಕ್ಷ ಮೆಗಾ ವಾಟ್‌ ಶೌರಶಕ್ತಿ ರಾಷ್ಟ್ರೀಯ ಸೌರಶಕ್ತಿ ಮಿಷನ್‌ ಜಾರಿಗೊಳಿಸಿದೆ. ಇನ್ನು 104 ಭರವಸೆಗಳು ಈಗಷ್ಟೇ ಜಾರಿಯಾಗಿವೆ. ಸ್ವಚ್ಛ ಭಾರತ ಅಭಿಯಾನ, ಜಿಎಸ್‌ಟಿ ಮಸೂದೆ, ಬ್ರಾಡ್‌ ಬ್ಯಾಂಡ್‌, 100 ಸ್ಮಾರ್ಟ್‌ ಸಿಟಿಗಳು ಅವುಗಳಲ್ಲಿ ಪ್ರಮುಖವಾದವು.

ಕೃಷಿ ಉದ್ಯೋಗವಕಾಶ ಕಡಿಮೆ

ಕೃಷಿ ಉದ್ಯೋಗವಕಾಶ ಕಡಿಮೆ

2009ರಲ್ಲಿ ಜಿಡಿಪಿ ಶೇ 8.9 ಇತ್ತು. 2014-15ಕ್ಕೆ ಅದು ಶೇ 7.4ಕ್ಕೆ ಇಳಿದಿದೆ. ಇನ್ನು ಕೃಷಿಯಲ್ಲಿ ಉದ್ಯೋಗ ಅವಕಾಶ ಶೇ 1.1ರಿಂದ ಶೇ 0.8ಕ್ಕೆ ಕುಸಿದಿದೆ. ಪೆಟ್ರೋಲಿಯಂ ಉತ್ಪನ್ನದ ಬಳಕೆಯು ಶೇ 3.1ರಿಂದ ಶೇ3.2ಕ್ಕೆ ಇಳಿದಿದೆ. ಇದೇ ರೀತಿ ವಿದ್ಯುತ್ ಶಕ್ತಿ ಉತ್ಪಾದನಾ ಸಾಮರ್ಥ್ಯ ಮಾತ್ರ ಶೇ 10ರಷ್ಟು ಹೆಚ್ಚಿದೆ.

ಕುಸಿದ ಬ್ಯಾಂಕಿಂಗ್ ಕ್ಷೇತ್ರ

ಕುಸಿದ ಬ್ಯಾಂಕಿಂಗ್ ಕ್ಷೇತ್ರ

2009-10ರಲ್ಲಿ ಅದು ಒಮ್ಮೆಲೆ ಶೇ 3ರಿಂದ ಶೇ 7.7ರಷ್ಟು ಹೆಚ್ಚಾಗಿತ್ತು. ನವೀಕರಿಸಬಹುದಾದ ಶಕ್ತಿ ಕ್ಷೇತ್ರದಲ್ಲಿಯೂ ಪ್ರಗತಿ ತೀರಾ ಕಳಪೆಯಾಗಿದೆ. 2014-15ರಲ್ಲಿ ಶೇ 17ರಷ್ಟಿದ್ದ ಪ್ರಗತಿಯೂ ಶೇ 7.56ಕ್ಕೆ ಕುಸಿದಿದೆ. ಇನ್ನು ಬ್ಯಾಂಕ್‌ ಕ್ಷೇತ್ರದಲ್ಲಿ ಶೇ 23ರಷ್ಟಿದ್ದ ಪ್ರಗತಿಯೂ ಶೇ 17 ಇದೆ. ಇಷ್ಟೆಲ್ಲ ಅಂಕಿ ಅಂಶಗಳ ಹೊರತಾಗಿಯೂ ಕಾಂಗ್ರೆಸ್ ಸಾಧನೆ ಶೂನ್ಯ ಎನ್ನುವಂತೆ ಮಾತುಗಳಿವೆ. ಕಡಿಮೆ ಸಾಧಿಸಿದರೂ ಬಿಜೆಪಿ ಸಾಧನೆ ದೊಡ್ಡದು ಎನ್ನುವ ಮಾತುಗಳು ಇವೆ.

English summary
How many promises made by Narendra Modi before 2014 election and how many fulfilled? Here brief details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X