ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮನೆಯ ಬಜೆಟ್ ಮೇಲೆ ಜಿಎಸ್ ಟಿ ಎಫೆಕ್ಟ್...

|
Google Oneindia Kannada News

ಬೆಂಗಳೂರು, ಜೂನ್ 19: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಜುಲೈ ಒಂದರಿಂದ ಜಾರಿಗೆ ಬರಲಿದೆ. ಮನೆ ಖರ್ಚಿನ ಮೇಲೆ, ಮತ್ತಿತರ ವೆಚ್ಚದ ಮೇಲೆ ಜಿಎಸ್ ಟಿ ಜಾರಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಲೆಕ್ಕಾಚಾರ ಸಹಿತ ಇಲ್ಲಿದೆ.

ಸದ್ಯಕ್ಕೆ ವಿಧಿಸುತ್ತಿರುವುದರಲ್ಲಿ ಅಬಕಾರಿ, ಮಾರಾಟ ತೆರಿಗೆ, ವ್ಯಾಟ್, ಮನರಂಜನಾ ತೆರಿಗೆ, ಲಕ್ಷುರಿ ಟ್ಯಾಕ್ಸ್..ಅದೂ ಇದೂ ಎಲ್ಲ ಸೇರಿದೆ.

ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?

ಜಿಎಸ್ ಟಿಯಿಂದ ಹೊರತಾದವು

* ಸಂಸ್ಕರಣವಾಗದ ಅಕ್ಕಿ, ಗೋಧಿ ಮುಂತಾದವು

* ಸಂಸ್ಕರಣವಾಗದ ಹಾಲು, ತರಕಾರಿ, ಮಾಂಸ, ಮೀನು ಮುಂತಾದವು

* ಲೋಕಲ್ ಟ್ರೇನ್ ಹಾಗೂ ಸ್ಲೀಪರ್ ಕೋಚ್ ನ ರೈಲು ಪ್ರಯಾಣ

* ಶಿಕ್ಷಣ

* ಹೆಲ್ತ್ ಕೇರ್ (ಔಷಧ ಅನ್ವಯಿಸುವುದಿಲ್ಲ)

* ಒಂದು ಸಾವಿರಕ್ಕಿಂತ ಕಡಿಮೆ ಬಾಡಿಗೆಯ ಹೋಟೆಲ್, ಲಾಡ್ಜ್ ಗಳು

* ಮಕ್ಕಳು ಬಳಸುವ ಬಣ್ಣದ ಪುಸ್ತಕ ಮತ್ತು ಬಣ್ಣಗಳು

* ಹಣೆ ಬೊಟ್ಟು, ಸಿಂಧೂರ ಹಾಗೂ ಬಳೆಗಳು

ಆಟೋಮೊಬೈಲ್ಸ್

ಆಟೋಮೊಬೈಲ್ಸ್

ಸಣ್ಣ ಕಾರುಗಳಿಗೆ ಹೋಲಿಸಿದರೆ ( 30ರಿಂದ 29 ಪ್ರತಿಶತ) ಎಸ್ ಯುವಿಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ ಆಗುತ್ತದೆ (55ರಿಂದ 43 ಪ್ರತಿಶತಕ್ಕೆ ಇಳಿಕೆಯಾಗುತ್ತದೆ).

ಮೂಲಬೆಲೆ: 4.75 ಲಕ್ಷ

ಸದ್ಯಕ್ಕೆ ಬೀಳುವ ತೆರಿಗೆ: 1.43 ಲಕ್ಷ

ಜಿಎಸ್ ಟಿ ನಂತರದ ತೆರಿಗೆ: 1.38 ಲಕ್ಷ

ಮನೆಬಳಕೆ ವಸ್ತುಗಳು

ಮನೆಬಳಕೆ ವಸ್ತುಗಳು

ರೆಫ್ರಿಜರೇಟರ್ ಹಾಗೂ ವಾಷಿಂಗ್ ಮಷೀನ್ ನಂಥ ವಸ್ತುಗಳ ಬೆಲೆ ಮೇಲೆ ಅಂಥ ವ್ಯತ್ಯಾಸ ಆಗುವುದಿಲ್ಲ.

ಮೂಲಬೆಲೆ: 20,000

ಸದ್ಯಕ್ಕೆ ಬೀಳುವ ತೆರಿಗೆ: 5,300

ಜಿಎಸ್ ಟಿ ನಂತರದ ತೆರಿಗೆ: 5,600

ಜೀವ ವಿಮೆ

ಜೀವ ವಿಮೆ

ಟರ್ಮ್ ಯೋಜನೆ ಹಾಗೂ ಜೀವ ವಿಮೆ ಹೊರತಾದ ಪಾಲಿಸಿಗಳಿಗೆ ತೆರಿಗೆ ಬೀಳುತ್ತದೆ. ಇತರೆ ಜೀವ ವಿಮೆಗೆ ಜಿಎಸ್ ಟಿ ಅನ್ವಯಿಸುತ್ತದೆ.

ಮೂಲಬೆಲೆ: 15,000

ಸದ್ಯಕ್ಕೆ ಬೀಳುವ ತೆರಿಗೆ: 2,250

ಜಿಎಸ್ ಟಿ ನಂತರದ ತೆರಿಗೆ: 2,700

ಚಿನ್ನದ ಆಭರಣಗಳು

ಚಿನ್ನದ ಆಭರಣಗಳು

ಚಿನ್ನದ ಮೇಲೆ ಶೇ ಮೂರರಷ್ಟು ಜಿಎಸ್ ಟಿ ಹಾಗೂ ತಯಾರಿಕೆ ವೆಚ್ಚದ ಮೇಲೆ ಶೇ ಐದರಷ್ಟು ತೆರಿಗೆ ಬೀಳುವುದರಿಂದ ಸ್ವಲ್ಪ ಮಟ್ಟಿಗೆ ತುಟ್ಟಿ ಆಗುತ್ತದೆ.

ಮೂಲಬೆಲೆ: 60,000

ಸದ್ಯಕ್ಕೆ ಬೀಳುವ ತೆರಿಗೆ: 1,800

ಜಿಎಸ್ ಟಿ ನಂತರದ ತೆರಿಗೆ: 2,000

ಹೋಟೆಲ್ ವಾಸ್ತವ್ಯ

ಹೋಟೆಲ್ ವಾಸ್ತವ್ಯ

ಒಂದು ಸಾವಿರಕ್ಕಿಂತ ಕಡಿಮೆ ಬೆಲೆಯ ರೂಮಿನಲ್ಲಿ ಉಳಿದುಕೊಂಡರೆ ಯಾವುದೇ ಜಿಎಸ್ ಟಿ ಪಾವತಿಸಬೇಕಿಲ್ಲ. ಆ ನಂತರದ ಬೆಲೆ ಏರಿದಂತೆ ಹೆಚ್ಚುತ್ತಾ ಹೋಗಿ, ಐದು ಸಾವಿರಕ್ಕಿಂತ ಹೆಚ್ಚಾದಂತೆ ಶೇ ಇಪ್ಪತ್ತೆಂಟರಷ್ಟು ತೆರಿಗೆ ಬೀಳುತ್ತದೆ.

ಮೂಲಬೆಲೆ: 7,000

ಸದ್ಯಕ್ಕೆ ಬೀಳುವ ತೆರಿಗೆ: 1,400

ಜಿಎಸ್ ಟಿ ನಂತರದ ತೆರಿಗೆ: 1,960

ರಿಫೈನ್ಡ್ ಅಡುಗೆ ಎಣ್ಣೆ

ರಿಫೈನ್ಡ್ ಅಡುಗೆ ಎಣ್ಣೆ

ತಲೆಗೆ ಹಾಕುವ ಎಣ್ಣೆ ಬೆಲೆ ತುಟ್ಟಿ ಆಗಲಿದೆ. ಏಕೆಂದರೆ ಶೇ ಹದಿನೆಂಟರಷ್ಟು ತೆರಿಗೆ ಬೀಳುತ್ತದೆ. ಆದರೆ ಅದೇ ಕೊಬ್ಬರಿಯನ್ನು ರಿಫೈನ್ ಮಾಡಿ ಅಡುಗೆಗೆ ಬಳಸಿದರೆ ಅದಕ್ಕೇ ಶೇ ಐದರಷ್ಟು ತೆರಿಗೆ.

ಮೂಲಬೆಲೆ: 200

ಸದ್ಯಕ್ಕೆ ಬೀಳುವ ತೆರಿಗೆ: 23

ಜಿಎಸ್ ಟಿ ನಂತರದ ತೆರಿಗೆ: 10

ವಿಮಾನ ಯಾನ: ಎಕಾನಮಿ

ವಿಮಾನ ಯಾನ: ಎಕಾನಮಿ

ಎಕಾನಮಿ ಹಾಗೂ ಬಿಜಿನೆಸ್ ಕ್ಲಾಸ್ ಮಧ್ಯೆ ಇರುವ ತೆರಿಗೆ ಪ್ರಮಾಣದಲ್ಲಿ ಏರಿಕೆ ಆಗಲಿದೆ.

ಮೂಲಬೆಲೆ: 5000

ಸದ್ಯಕ್ಕೆ ಬೀಳುವ ತೆರಿಗೆ: 300

ಜಿಎಸ್ ಟಿ ನಂತರದ ತೆರಿಗೆ: 250

ರೈಲು ಪ್ರಯಾಣ-ಏಸಿ ಬೋಗಿಗಳು

ರೈಲು ಪ್ರಯಾಣ-ಏಸಿ ಬೋಗಿಗಳು

ಲೋಕಲ್ ಟ್ರೇನು ಮತ್ತು ಸ್ಲೀಪರ್ ಕೋಚ್ ಗಳಲ್ಲಿ ಪ್ರಯಾಣಿಸುವವರಿಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಆದರೆ ಫಸ್ಟ್ ಕ್ಲಾಸ್ ಮತ್ತು ಏಸಿ ಬೋಗಿಗಳಲ್ಲಿ ಪ್ರಯಾಣಿಸುವವರು ಹೆಚ್ಚು ಪಾವತಿಸಬೇಕು.

ಮೂಲಬೆಲೆ: 3000

ಸದ್ಯಕ್ಕೆ ಬೀಳುವ ತೆರಿಗೆ: 131

ಜಿಎಸ್ ಟಿ ನಂತರದ ತೆರಿಗೆ: 150

ಟೆಲಿಕಾಂ: ಎರಡು ಫೋನ್+ ಒಂದು ಡಿಟಿಎಚ್ ಬಿಲ್

ಟೆಲಿಕಾಂ: ಎರಡು ಫೋನ್+ ಒಂದು ಡಿಟಿಎಚ್ ಬಿಲ್

ಈ ಸೇವೆಗಳಿಗೆ ಹೆಚ್ಚಿನ ಇನ್ ಪುಟ್ ಕ್ರೆಡಿಟ್ ದೊರಕುವುದಿಲ್ಲ. ಆದರಿಂದ ಬೆಲೆ ಏರಿಕೆ ಭಾರವನ್ನು ಗ್ರಾಹಕರೇ ಭರಿಸಬೇಕು.

ಮೂಲಬೆಲೆ: 2500

ಸದ್ಯಕ್ಕೆ ಬೀಳುವ ತೆರಿಗೆ: 375

ಜಿಎಸ್ ಟಿ ನಂತರದ ತೆರಿಗೆ: 450

ಹೋಟೆಲ್ ಗೆ ಊಟ-ತಿಂಡಿಗೆ ತೆರಳಿದರೆ: ನಾಲ್ಕು ಮಂದಿಯ ಕುಟುಂಬಕ್ಕೆ

ಹೋಟೆಲ್ ಗೆ ಊಟ-ತಿಂಡಿಗೆ ತೆರಳಿದರೆ: ನಾಲ್ಕು ಮಂದಿಯ ಕುಟುಂಬಕ್ಕೆ

ಏಸಿ ಇಲ್ಲದ ಹೋಟೆಲ್ ಗಳಲ್ಲಿ ಶೇ ಹನ್ನೆರಡರಷ್ಟು ತೆರಿಗೆ ಆಗುತ್ತದೆ. ಅದೇ ಫೈವ್ ಸ್ಟಾರ್ ಹೋಟೆಲಿಗೆ ಹೋದರೆ ಶೇ ಇಪ್ಪತ್ತೆಂಟರಷ್ಟು ತೆರಿಗೆ ಬೀಳುತ್ತದೆ.

ಮೂಲಬೆಲೆ: 2000

ಸದ್ಯಕ್ಕೆ ಬೀಳುವ ತೆರಿಗೆ: 270

ಜಿಎಸ್ ಟಿ ನಂತರದ ತೆರಿಗೆ: 360

ಬಟ್ಟೆಗಳು: ಸಿದ್ಧ ಉಡುಪು

ಬಟ್ಟೆಗಳು: ಸಿದ್ಧ ಉಡುಪು

ಈ ಉದ್ಯಮದಲ್ಲಿನ ಒತ್ತಡದಿಂದಾಗಿ ಒಂದು ಸಾವಿರ ರುಪಾಯಿ ಒಳಗಿನ ಬಟ್ಟೆಗಳ ಮೇಲಿನ ತೆರಿಗೆಯನ್ನು ಶೇ ಹನ್ನೆರಡರಿಂದ ಐದಕ್ಕೆ ಇಳಿಸಲಾಗಿದೆ.

ಮೂಲಬೆಲೆ: 2000

ಸದ್ಯಕ್ಕೆ ಬೀಳುವ ತೆರಿಗೆ: 130

ಜಿಎಸ್ ಟಿ ನಂತರದ ತೆರಿಗೆ: 240

ಮನರಂಜನೆ: ನಾಲ್ಕು ಮಂದಿಯ ಕುಟುಂಬ ಸಿನಿಮಾಗೆ ಹೋದರೆ

ಮನರಂಜನೆ: ನಾಲ್ಕು ಮಂದಿಯ ಕುಟುಂಬ ಸಿನಿಮಾಗೆ ಹೋದರೆ

ನೂರು ರುಪಾಯಿ ಒಳಗಿನ ಟಿಕೆಟ್ ಗಳಿಗೆ ಜಿಎಸ್ ಟಿ ಕಡಿಮೆ ಮಾಡಿರುವುದರಿಂದ ಸಣ್ಣ ಪಟ್ಟಣಗಳ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಅನುಕೂಲ ಆಗುತ್ತದೆ.

ಮೂಲಬೆಲೆ: 1200

ಸದ್ಯಕ್ಕೆ ಬೀಳುವ ತೆರಿಗೆ: 360

ಜಿಎಸ್ ಟಿ ನಂತರದ ತೆರಿಗೆ: 336

English summary
Goods and services tax (GST) comes into effect from 1 July. Here is an analyses the impact on some basic expenses in the household consumption basket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X