ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮಿ ವಿಜಯ್ ಮಲ್ಯ ವಿದೇಶಕ್ಕೆ ಹೋಗಿದ್ದು ಹೇಗೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 10 : ಉದ್ಯಮಿ ವಿಜಯ್ ಮಲ್ಯ ಅವರು ಭಾರತದಲ್ಲಿಲ್ಲ. ಅವರು ಲಂಡನ್‌ನಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಮಾರ್ಚ್‌ 2ರಂದು ಸಾಲ ವಸೂಲಾತಿ ನ್ಯಾಯಾಧೀಕರಣ ಮಲ್ಯ ಅವರ ವಿರುದ್ಧದ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲೇ ಅವರು ವಿದೇಶಕ್ಕೆ ಹಾರಿರಬಹುದು ಎಂದು ಶಂಕಿಸಲಾಗಿದೆ.

ವಿಜಯ್ ಮಲ್ಯ ಅವರ ವಿರುದ್ಧ ಅಕ್ಟೋಬರ್‌ನಲ್ಲಿಯೇ ಸಿಬಿಐ ಲುಕ್ ಔಟ್ ನೋಟಿಸ್ ಜಾರಿಗೊಳಿಸಿತ್ತು. ಎರಡು ಬಾರಿ ಅವರ ವಿಚಾರಣೆಯನ್ನು ನಡೆಸಿತ್ತು. ಆದರೂ ಅವರು ವಿದೇಶಕ್ಕೆ ಹಾರಿದ್ದು ಹೇಗೆ? ಎಂಬ ಪ್ರಶ್ನೆ ಎದುರಾಗಿದೆ. [ಮಲ್ಯ ಭಾರತದಲ್ಲಿಲ್ಲ, ಲಂಡನ್ನಿಗೆ ಪರಾರಿ!]

vijay mallya

ಯಾವುದೇ ವ್ಯಕ್ತಿಯ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದರೆ, ತನಿಖಾ ಸಂಸ್ಥೆಯ ಒಪ್ಪಿಗೆ ಪಡೆಯದೇ ಅವರು ವಿದೇಶಕ್ಕೆ ತೆರಳುವಂತಿಲ್ಲ. ವಿಜಯ್ ಮಲ್ಯ ಅವರು ರಾಜ್ಯಸಭೆಯ ಸದಸ್ಯರೂ ಹೌದು. ವಿದೇಶಕ್ಕೆ ತೆರಳುವ ಮುನ್ನ ಕಲಾಪಕ್ಕೆ ಬರುವುದಿಲ್ಲ ಎಂದು ಅವರು ಅನುಮತಿ ತೆಗೆದುಕೊಳ್ಳಬೇಕು. [ಮಲ್ಯರಿಂದ ಸಾಲ ವಸೂಲಿ ಕಷ್ಟ ಕಷ್ಟ]

ಆದರೆ, ವಿಜಯ್ ಮಲ್ಯ ಅವರು ಈ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ವಿದೇಶಕ್ಕೆ ತೆರಳುವ ದಿನ ಮಲ್ಯ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿದ್ದರು ಎಂದು ದಾಖಲೆ ಹೇಳುತ್ತಿದೆ. ಆದರೆ, ಸಿಬಿಐ ಕಣ್ಣು ತಪ್ಪಿಸಿ ಮಲ್ಯ ಅವರು ವಿದೇಶಕ್ಕೆ ಹೋಗಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. [ಮಲ್ಯ ಬಾಯಿ ಸೇರಬೇಕಿದ್ದ ತುತ್ತಿಗೆ ನ್ಯಾಯಾಧೀಕರಣ ತಡೆ]

ಸಿಬಿಐ ಅಧಿಕಾರಿಯೊಬ್ಬರು ಒನ್ ಇಂಡಿಯಾಗೆ ನೀಡಿದ ಮಾಹಿತಿಯಂತೆ, 'ವಿಜಯ್ ಮಲ್ಯ ಅವರು ಖಾಸಗಿ ವಿಮಾನದ ಮೂಲಕ ವಿದೇಶಕ್ಕೆ ಹೋಗಿರುವ ಸಾಧ್ಯತೆ ಇದೆ. ಸಿಬಿಐಗೆ ತಿಳಿಯದಂತೆ ಅವರು ದೇಶ ಬಿಟ್ಟು ಹೋಗಿದ್ದು ಹೇಗೆ? ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ' ಎಂದು ಅವರು ಹೇಳಿದ್ದಾರೆ.

ಕೋರ್ಟ್‌ಗೆ ಹಾಜರಾಗಲಿ : ಸುಪ್ರೀಂಕೋರ್ಟ್ ಮುಂದೆ ವಾದ ಮಂಡನೆ ಮಾಡುವಾಗ ಅರ್ಟಾನಿ ಜನರಲ್ ಅವರು ವಿಜಯ್ ಮಲ್ಯ ಅವರು ಪಾಸ್ ಪೋರ್ಟ್ ಸಮೇತ, ಕೋರ್ಟ್ ಮುಂದೆ ಹಾಜರಾಗುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮಲ್ಯ ಲಂಡನ್‌ನಲ್ಲಿರಬಹುದು ಎಂದು ಶಂಕಿಸಲಾಗಿದೆ. ವಿವಿಧ ತನಿಖಾ ಸಂಸ್ಥೆಗಳು ಅವರಿರುವ ನಿಖರವಾದ ಜಾಗವನ್ನು ತಿಳಿಯಲು ಪ್ರಯತ್ನ ನಡೆಸುತ್ತಿವೆ.

English summary
How did Vijay Mallya leave the country? The Supreme Court was told yesterday that he had left the country probably to London on March 2, the day the Debt Recovery Tribunal was to hear a matter in which a directive to stall payment of money from Diageo was sought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X