ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ರಾಷ್ಟ್ರಗೀತೆ ಇತಿಹಾಸ, ಸಾಹಿತ್ಯ, ಮಹತ್ವ...

|
Google Oneindia Kannada News

ಬೆಂಗಳೂರು, ನವೆಂಬರ್ 30: ರಾಷ್ಟ್ರೀಯ ಹಬ್ಬಗಳ ವೇಳೆ ಭಾರತದ ರಾಷ್ಟ್ರಗೀತೆಗಳನ್ನು ಹಾಡುತ್ತೇವೆ. ಇನ್ನು ಮುಂದೆ ಚಿತ್ರಮಂದಿರಗಳಲ್ಲಿ ಸಿನಿಮಾ ಅರಂಭಕ್ಕೆ ಮುನ್ನ ರಾಷ್ಟ್ರಗೀತೆ ಹಾಡಬೇಕು, ರಾಷ್ಟ್ರ ಧ್ವಜ ಪ್ರದರ್ಶಿಸಬೇಕು ಎಂದು ಬುಧವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮಹತ್ವದ ಆದೇಶವನ್ನು ನೀಡಿದ್ದಾರೆ.

ನಾವೆಲ್ಲ ಒಂದೇ, ಭಾರತೀಯರು ಎಂಬ ಭಾವನೆ ಮೂಡಬೇಕು. ಅ ಕಾರಣಕ್ಕೆ ರಾಷ್ಟ್ರಗೀತೆಯನ್ನು ಮೊಟಕುಗೊಳಿಸದಂತೆ ಹಾಡಬೇಕು ಎಂದು ಕೂಡ ಅದೇಶದಲ್ಲಿ ತಿಳಿಸಲಾಗಿದೆ. ರಾಷ್ಟ್ರಗೀತೆ ಬಗ್ಗೆ ಕೆಲ ಆಸಕ್ತಿಕರ ಮಾಹಿತಿಗಳನ್ನು ಮತ್ತು ರಾಷ್ಟ್ರಗೀತೆಯ ಪೂರ್ಣಪಾಠವನ್ನು ಇಲ್ಲಿ ನೀಡುತ್ತಿದ್ದೇವೆ.[ರಾಷ್ಟ್ರಗೀತೆಯನ್ನು ಸುತ್ತಿಕೊಂಡಿರುವ ವಿವಾದ ಒಂದೆ ಎರಡೆ?]

History, Lyrics, Author of India National Anthem

ಭಾರತದ ರಾಷ್ಟ್ರಗೀತೆ ಜನ ಗಣ ಮನ ಎಂದು ಅರಂಭವಾಗಿ, ಜಯ ಹೇ ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ ಎಂದು ಕೊನೆಯಾಗುತ್ತದೆ. ಇದರ ಮೂಲವು ಸಂಸ್ಕೃತ ಪದಗಳು ಹೆಚ್ಚಾಗಿರುವ ಬಂಗಾಲಿಯಲ್ಲಿದೆ. ಬರೆದವರು ರವೀಂದ್ರನಾಥ ಟಾಗೋರ್. ಆ ನಂತರ ಹಿಂದಿ ಹಾಗೂ ಉರ್ದುವಿಗೆ ಅನುವಾದ ಮಾಡಿದವರು ಅಬಿದ್ ಅಲಿ.

ಹಿಂದಿಯಲ್ಲಿ ಅಲಿ ಮಾಡಿದ ಅನುವಾದ ಸ್ವಲ್ಪ ಭಿನ್ನವಾಗಿದೆ. ರಾಷ್ಟ್ರಗೀತೆಯನ್ನು ಪೂರ್ಣವಾಗಿ ಹಾಡುವುದಕ್ಕೆ ಐವತ್ತೆರಡು ಸೆಕೆಂಡ್ ಸಮಯ ಬೇಕಾಗುತ್ತದೆ. ಮತ್ತು ಅದರ ಸಂಕ್ಷಿಪ್ತ ರೂಪ (ಮೊದಲು ಹಾಗೂ ಕೊನೆ ಸಾಲು) ಹಾಡುವುದಕ್ಕೆ ಇಪ್ಪತ್ತು ಸೆಕೆಂಡ್ ಸಮಯ ಬೇಕಾಗುತ್ತದೆ.[ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ]

ಅಂದಹಾಗೆ, ರಾಷ್ಟ್ರಗೀತೆ ಇಂಗ್ಲಿಷ್ ಗೆ ಅನುವಾದಿಸಿದವರು ಸಹ ರವೀಂದ್ರನಾಥ ಟಾಗೋರ್. ರಾಷ್ಟ್ರಗೀತೆಯನ್ನು ವಾದ್ಯ, ಹಿನ್ನೆಲೆ ಸಂಗೀತದೊಂದಿಗೆ ಸಂಯೋಜನೆ ಮಾಡಲಾಗಿದೆ. (ಇಂಗ್ಲಿಷ್ ಸಂಯೋಜಕ ಹರ್ಬರ್ಟ್ ಮ್ಯುರಿಲ್ ಅವರು ನೆಹರೂ ಅವರ ಕೋರಿಕೆ ಅನುಸಾರ ಸಂಗೀತ ಸಂಯೋಜನೆ ಮಾಡಿದ್ದರು). ಟಾಗೋರ್ ಬರೆದ ಮತ್ತೊಂದು ಹಾಡು (ಅಮರ್ ಸೋನಾರ್ ಬಂಗ್ಲಾ) ಬಾಂಗ್ಲಾದೇಶ್ ನ ರಾಷ್ಟ್ರಗೀತೆಯಾಗಿದೆ.

History, Lyrics, Author of India National Anthem

ಇತಿಹಾಸ
ಭಾರತದ ರಾಷ್ಟ್ರಗೀತೆ (ಜನ- ಗಣ- ಮನ ಹಾಡು) ಮೂಲ ಸಂಯೋಜಕರು ರವೀಂದ್ರನಾಥ್ ಟಾಗೋರ್, ಬಂಗಾಲಿ ಭಾಷೆಯಲ್ಲಿ ಮಾಡಿದರು. ಅದರ ಹಿಂದಿ ಅವತರಣಿಕೆಯನ್ನು ಜನವರಿ 24, 1950ರಲ್ಲಿ ಸಾಂವಿಧಾನಿಕ ಸಭೆಯಲ್ಲಿ ಒಪ್ಪಿಗೆ ನೀಡುವ ಮೂಲಕ ಅಳವಡಿಸಿಕೊಳ್ಳಲಾಯಿತು.

ರಾಷ್ಟ್ರಗೀತೆಯ ಸಾಹಿತ್ಯ ಹಾಗೂ ಸಂಗೀತ ಎರಡೂ ಟಾಗೋರ್ ಅವರದೇ. ರಚನೆಯಾದದ್ದು 1911ರಲ್ಲಿ. ಮೊದಲ ಬಾರಿಗೆ ಕಲ್ಕತ್ತಾದ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಡಿಸೆಂಬರ್ 27, 1911ರಲ್ಲಿ ಹಾಡಲಾಯಿತು.[ಮುಸ್ಲಿಂ ಕುಟುಂಬವನ್ನು ಪಿವಿಆರ್ ನಿಂದ ಹೊರ ಹಾಕಿದ್ದೇಕೆ?]

History, Lyrics, Author of India National Anthem

ರಾಷ್ಟ್ರಗೀತೆಯ ಸಾಹಿತ್ಯ
"ಜನಗಣಮನ-ಅಧಿನಾಯಕ ಜಯ ಹೇ ಭಾರತ್ ಭಾಗ್ಯವಿಧಾತ!
ಪಂಜಾಬ ಸಿಂಧು ಗುಜರಾತ ಮರಾಠ ದ್ರಾವಿಡ ಉತ್ಕಲ ಬಂಗಾ
ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲಜಲಧಿತರಂಗ
ತವ್ ಶುಭ್ ನಾಮೇ ಜಾಗೆ, ತವ್ ಶುಭ್ ಆಶಿಶ್ ಮಾಗೆ
ಗಾಹೆ ತವ್ ಜಯಗಾಥಾ
ಜನಗಣಮಂಗಳದಾಯಕ ಜಯ ಹೇ ಭಾರತ್ ಭಾಗ್ಯವಿಧಾತ!
ಜಯ ಹೇ ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ..."

1975ರವರೆಗೆ ಸಿನಿಮಾ ಮುಗಿದ ನಂತರ ರಾಷ್ಟ್ರಗೀತೆ ಹಾಕುವ ಪರಿಪಾಠವಿತ್ತು. ಆದರೆ ಆ ನಂತರ ನಿಲ್ಲಿಸಲಾಯಿತು. ಜನರು ರಾಷ್ಟ್ರಗೀತೆ ಸರಿಯಾದ ಗೌರವ ನೀಡುವುದಿಲ್ಲ ಎಂಬ ಕಾರಣ ಆ ಉದ್ದೇಶದ ಹಿಂದಿತ್ತು. ಆದರೆ ಕೇರಳ ಸರಕಾರದ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ಪರಿಪಾಠವಿತ್ತು.

English summary
History, Lyrics, Author of India National Anthem - Jana Gana Mana, a Poem by Nobel Laureate Rabindranath Tagore.Read all about it In Indian Language Kannada, in the backdrop of the anthem made compulsory in cinema halls
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X